ಗೊರವನಹಳ್ಳಿ ಡೈರಿ ಅಧ್ಯಕ್ಷರಾಗಿ ಅವಿನಾಶ್, ಉಪಾಧ್ಯಕ್ಷರಾಗಿ ನವೀನ್ ಅವಿರೋಧ ಆಯ್ಕೆ

| Published : Jul 26 2025, 12:30 AM IST

ಗೊರವನಹಳ್ಳಿ ಡೈರಿ ಅಧ್ಯಕ್ಷರಾಗಿ ಅವಿನಾಶ್, ಉಪಾಧ್ಯಕ್ಷರಾಗಿ ನವೀನ್ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಜಿ.ಎಸ್.ಅವಿನಾಶ್ ಮತ್ತು ನವೀನ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಸಂಘದ ಮಾರಾಟ ಪ್ರತಿನಿಧಿ ಸಿ.ಎ.ಸುಧಾಕರ್ ಘೋಷಣೆ ಮಾಡಿದರು.

ಮದ್ದೂರು: ತಾಲೂಕಿನ ಗೊರವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಮತ್ತು ಬಿಜೆಪಿ ಬೆಂಬಲಿತ ಜಿ.ಎಸ್.ಅವಿನಾಶ್ ಹಾಗೂ ನವೀನ್ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಗಳಿಗೆ ಜಿ.ಎಸ್.ಅವಿನಾಶ್ ಮತ್ತು ನವೀನ್ ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾ ಅಧಿಕಾರಿಯಾಗಿದ್ದ ಸಹಕಾರ ಸಂಘದ ಮಾರಾಟ ಪ್ರತಿನಿಧಿ ಸಿ.ಎ.ಸುಧಾಕರ್ ಘೋಷಣೆ ಮಾಡಿದರು.

ನಂತರ ನೂತನ ಅಧ್ಯಕ್ಷ ಅವಿನಾಶ್ ಮಾತನಾಡಿ, ಅಧ್ಯಕ್ಷ ಸ್ಥಾನಕ್ಕೆ ಹಲವು ನಿರ್ದೇಶಕರು ಆಕಾಂಕ್ಷಿಗಳಾಗಿದ್ದರೂ ಸಹ ಗ್ರಾಮದ ಹಿರಿಯ ಮುಖಂಡರು, ಹಾಲು ಉತ್ಪಾದಕರು ಮತ್ತು ನಿರ್ದೇಶಕರು ಯುವಕನಾದ ನನ್ನನ್ನು ಆಯ್ಕೆ ಮಾಡಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಎಲ್ಲಾ ಮುಖಂಡರ ವಿಶ್ವಾಸ ಮತ್ತು ನಂಬಿಕೆಗೆ ಧಕ್ಕೆ ಬಾರದಂತೆ ಕರ್ತವ್ಯ ನಿರ್ವಹಿಸುವ ಜೊತೆಗೆ ಹಾಲು ಒಕ್ಕೂಟಕ್ಕೆ ಗುಣಮಟ್ಟದ ಹಾಲು ಪೂರೈಸುವ ಮೂಲಕ ಸಹಕಾರ ಸಂಘವನ್ನು ಆರ್ಥಿಕವಾಗಿ ಸದೃಢಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಸಂಘದ ನಿರ್ದೇಶಕರಾದ ಜಿ. ಸಿ.ಶಂಕರೇಗೌಡ, ಜಿ.ಕೆ.ಪುಟ್ಟಸ್ವಾಮಿ, ಕೆಂಪರಾಜು, ಪುಂಗ, ಜಿ. ಬಿ. ಶಿವರಾಮಯ್ಯ, ಸುಜಾತ, ಸಂಘದ ಸಂಸ್ಥಾಪಕ ಅಧ್ಯಕ್ಷ ಜಿ.ಡಿ.ಪುಟ್ಟಸ್ವಾಮಿ, ಕಾರ್ಯದರ್ಶಿ ಎನ್. ಅಭಿನಂದನ್, ಗ್ರಾಪಂ ಮಾಜಿ ಅಧ್ಯಕ್ಷರಾದ ಸಿದ್ದರಾಜು, ಶಂಕರೇಗೌಡ, ಉಮೇಶ, ಮುಖಂಡರಾದ ಬೋರೇಗೌಡ, ಚೆನ್ನಪ್ಪ, ವಸಂತ ಮತ್ತು ಜಿ.ಬಿ.ಲಿಂಗಯ್ಯ ಅಭಿನಂದಿಸಿದರು.