ನಗರದ ನರಹರಿ ನಗರದಲ್ಲಿ ನರಹರಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸುಮಾರು ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ 5,000 ಲೀಟರ್ ಸಾಮರ್ಥ್ಯದ ನೂತನ ಬಿ.ಎಂ.ಸಿ ಕಟ್ಟಡ ಹಾಗೂ ಯಂತ್ರೋಪಕರಣಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಳ್ಳಕೆರೆನಗರದ ನರಹರಿ ನಗರದಲ್ಲಿ ನರಹರಿ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸುಮಾರು ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ 5,000 ಲೀಟರ್ ಸಾಮರ್ಥ್ಯದ ನೂತನ ಬಿ.ಎಂ.ಸಿ ಕಟ್ಟಡ ಹಾಗೂ ಯಂತ್ರೋಪಕರಣಗಳನ್ನು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಟಿ. ರಘುಮೂರ್ತಿ ಉದ್ಘಾಟಿಸಿದರು.

ಹಾಲಿನ ಗುಣಮಟ್ಟ ಕಾಪಾಡುವುದು, ಹಾಲು ಉತ್ಪಾದಕರಿಗೆ ಅಗತ್ಯ ಮೂಲಸೌಕರ್ಯ ಒದಗಿಸುವುದು ಹಾಗೂ ಗ್ರಾಮೀಣ ಭಾಗದ ಹೈನುಗಾರಿಕೆ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ನೂತನ ಬಿ.ಎಂ.ಸಿ ಕೇಂದ್ರ ಮಹತ್ವದ ಕೊಡುಗೆ ನೀಡಲಿದೆ ಎಂದು ಸಚಿವರು ಹೇಳಿದರು.ಹೈನುಗಾರರ ಆರ್ಥಿಕ ಸಬಲೀಕರಣಕ್ಕೆ ಸರ್ಕಾರ ಬದ್ಧವಾಗಿದ್ದು, ಹಾಲು ಉತ್ಪಾದಕರ ಕಲ್ಯಾಣಕ್ಕಾಗಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲು ನಿರಂತರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಸಂಸದ ಗೋವಿಂದ ಎಂ.ಕಾರಜೋಳ, ಶಿವಮೊಗ್ಗ–ದಾವಣಗೆರೆ–ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಹೆಚ್.ಎನ್. ವಿದ್ಯಾಧರ ಸಂಘದ ಅಧ್ಯಕ್ಷರಾದ ಕಾರ್ತಿಕ್ ಎಸ್. ಮೂರ್ತಿ ಅಧ್ಯಕ್ಷತೆವಹಿಸಿದ್ದರು. ಶಿಲಾನ್ಯಾಸವನ್ನು ಶಿಮುಲ್ ನಿರ್ದೇಶಕರು ಹಾಗೂ ಸಂಘದ ಮಾಜಿ ಅಧ್ಯಕ್ಷರು ಬಿ.ಸಿ. ಸಂಜೀವ್ ಮೂರ್ತಿ ನೆರವೇರಿಸಿದರು. ಬಿ.ಎಂ.ಸಿ.ಘಟಕದ ಚಾಲನೆಯನ್ನು ಜಿಲ್ಲಾ ನಿರ್ದೇಶಕರುಗಳಾದ ಜಿ.ಪಿ. ರೇವಣಸಿದ್ದಪ್ಪ, ಜಿ.ಬಿ.ಶೇಖರಪ್ಪ ಮತ್ತು ಬಿ.ಆರ್ ರವಿಕುಮಾರ್ ನೆರವೇರಿಸಿದರು.

ಮುಖ್ಯ ಅತಿಥಿಗಳಾಗಿ ಚೇತನ್ ಎಸ್. ನಾಡಿಗರ ಉಪಾಧ್ಯಕ್ಷರು ಶಿಮುಲ್ ಶಿವಮೊಗ್ಗ ಹಾಗೂ ಡಾ.ಎಸ್ಟಿ.ಸುರೇಶ್ ಕರ್ನಾಟಕ ಮಹಾಮಂಡಳಿ, ಶಿಮುಲ್ ವ್ಯವಸ್ಥಾಪಕ ನಿರ್ದೇಶಕರು ಡಾ. ಬಿ.ಆರ್.ಮಂಜೇಶ್ ಹಾಗೂ ಡಾ. ಎಚ್.ಶರತ್, ಮಾರ್ಕೆಟಿಂಗ್ ವ್ಯವಸ್ಥಾಪಕರಾದ ಬಿ.ಎಮ್. ಹನುಮಂತಪ್ಪ ಹಾಗೂ ಸಿಬ್ಬಂದಿ ವರ್ಗದವರು, ಮಾರ್ಗ ವಿಸ್ತಾರಣಾಧಿಕಾರಿಗಳು ಒಕ್ಕೂಟದ ಅಧಿಕಾರಿ ವರ್ಗದವರಿದ್ದರು ಇದೇ ಸಂದರ್ಭದಲ್ಲಿ ಬಿ.ಜಿ.ಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಬಿಲ್ಡಿಂಗ್ ಅನುದಾನ 2,25,000 ರು. ಚೆಕ್ಕನ್ನು ಕರ್ನಾಟಕ ಮಹಾಮಂಡಳಿ ವತಿಯಿಂದ ರಘುಮೂರ್ತಿಯವರು ಹಾಗೂ ಜಿಲ್ಲಾ ನಿರ್ದೇಶಕರು ಸಂಘದ ಅಧ್ಯಕ್ಷರಿಗೆ ವಿತರಿಸಿದರು. ಮೂರ್ತಿ ಡೆವಲಪರ್ಸ್ ವ್ಯವಸ್ಥಾಪಕ ನಿರ್ದೇಶಕರಾದ ಬಿ.ಸಿ. ವೆಂಕಟೇಶ್ ಮೂರ್ತಿ ಹಾಗೂ ಲಕ್ಷ್ಮಿಪುರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಬಿ ಸಿ.ಸತೀಶ್ ಕುಮಾರ್ ಹಾಗೂ ಪಶು ವೈದ್ಯರುಗಳಾದ ಡಾ. ತಿಪ್ಪೇಸ್ವಾಮಿ, ಡಾ.ಶ್ರೀನಿವಾಸ್ ಬಾಬು, ಡಾ. ನರೇಶ್, ಡಾ.ಸತ್ಯನಾರಾಯಣ ಚೌದರಿ, ಡಾ. ಪ್ರದೀಪ್, ಡಾ. ನರೇಶ್ ಹಾಗೂ ಜಿಲ್ಲಾ ತಾಲೂಕುಗಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ನರಹರಿನಗರ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.