ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸದೃಢ ಸಮಾಜ ನಿರ್ಮಾಣ

| Published : Feb 03 2024, 01:47 AM IST

ಶಿಕ್ಷಕರು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸದೃಢ ಸಮಾಜ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಮನುಷ್ಯನ ಜೀವನದಲ್ಲಿ ಶಿಕ್ಷಣ ಅತ್ಯಂತ ಮಹತ್ತರವಾದ ಪಾತ್ರ ವಹಿಸಲಿದ್ದು ಸರ್ವರೂ ಕಡ್ಡಾಯವಾಗಿ ಉತ್ತಮ, ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಬೇಕು ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಪ್ರತಿನಿಧಿಯಾಗಿ ನಾನು ಸದಾ ಸಿದ್ದನಿದ್ದು ನೀವುಗಳು ಸಹ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಭೋದನೆ ಮಾಡಿ ಅವರ ಶೈಕ್ಷಣಿಕ ಗುಣಮಟ್ಟ ಎತ್ತರಕ್ಕೆ ಏರುವಂತೆ ಮಾಡಬೇಕು,

ಕನ್ನಡಪ್ರಭ ವಾರ್ತೆ ಕೆ.ಆರ್. ನಗರ

ಶಿಕ್ಷಕರು ತಮ್ಮ ಜವಾಬ್ದಾರಿ ಅರಿತು ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಸದೃಢ ಸಮಾಜ ಮತ್ತು ಭವಿಷ್ಯದ ಭಾರತ ನಿರ್ಮಾಣ ಮಾಡಬಹುದು ಎಂದು ಶಾಸಕ ಡಿ. ರವಿಶಂಕರ್ ಹೇಳಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ನಡೆದ ಕರ್ನಾಟಕ ರಾಜ್ಯ ಪದವೀಧರ ಶಿಕ್ಷಕರ ಸ್ವಾಗತ ಸಮಾರಂಭ ಮತ್ತು ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಮನುಷ್ಯನ ಜೀವನದಲ್ಲಿ ಶಿಕ್ಷಣ ಅತ್ಯಂತ ಮಹತ್ತರವಾದ ಪಾತ್ರ ವಹಿಸಲಿದ್ದು ಸರ್ವರೂ ಕಡ್ಡಾಯವಾಗಿ ಉತ್ತಮ, ಉನ್ನತ ಮತ್ತು ಗುಣಮಟ್ಟದ ಶಿಕ್ಷಣ ಪಡೆಯಬೇಕು ಎಂದು ತಿಳಿಸಿದರು.

ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರದ ಪ್ರತಿನಿಧಿಯಾಗಿ ನಾನು ಸದಾ ಸಿದ್ದನಿದ್ದು ನೀವುಗಳು ಸಹ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಭೋದನೆ ಮಾಡಿ ಅವರ ಶೈಕ್ಷಣಿಕ ಗುಣಮಟ್ಟ ಎತ್ತರಕ್ಕೆ ಏರುವಂತೆ ಮಾಡಬೇಕು, ಯಾವುದೇ ಸಮಸ್ಯೆಗಳಿದ್ದರೂ ಶಿಕ್ಷಕರು ನನ್ನನ್ನು ನೇರವಾಗಿ ಸಂಪರ್ಕಿಸಬಹುದು ಎಂದರು.

ಬಿಇಒ ಆರ್. ಕೃಷ್ಣಪ್ಪ ಮಾತನಾಡಿ, ಶಿಕ್ಷಕರು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ನಿಕರವಾದ ಮಾಹಿತಿ ನೀಡಿ ಅವರ ಶೈಕ್ಷಣಿಕ ಕ್ರಮ ಬದಲಾಗುವಂತೆ ಮಾಡಲಿದ್ದು, ಈ ಕೆಲಸವನ್ನು ಎಲ್ಲರೂ ಅರ್ಪಣಾ ಮನೋಭಾವನೆಯಿಂದ ಕೈಗೊಳ್ಳಬೇಕೆಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಜೆ. ಅರುಣ್ ಕುಮಾರ್, ಸಂಘದ ಜಿಲ್ಲಾಧ್ಯಕ್ಷ ಕೆ.ಎಸ್. ಪ್ರಕಾಶ್, ಸಂಘಟನಾ ಕಾರ್ಯದರ್ಶಿ ಬಸವರಾಜು, ತಾಲೂಕು ಅಧ್ಯಕ್ಷ ಬಿ.ಆರ್. ಮನು, ಉಪಾಧ್ಯಕ್ಷೆ ಮುಮ್ತಾಜ್ಜಹಾನ್, ಪ್ರಧಾನ ಕಾರ್ಯದರ್ಶಿ ಕೆ.ಟಿ.ಸ್ವಾಮಿ, ಖಜಾಂಚಿ ಎಚ್.ಎಸ್. ಮಂಜುನಾಥ್, ಸಂಘಟನಾ ಕಾರ್ಯದರ್ಶಿ ಕೆ.ಎಸ್. ಕಿರಣ್ ಕುಮಾರ್, ಸಾಂಸ್ಕೃತಿಕ ಕಾರ್ಯದರ್ಶೀ ಚುಡಾಮಣಿ, ಕ್ರೀಡಾ ಕಾರ್ಯದರ್ಶಿ ಡಿ.ಎಸ್. ನಾಗಶ್ರೀ, ವಕ್ತಾರ ಗುಡದಯ್ಯ ಕುರುಬರ, ನಿರ್ದೇಶಕರಾದ ಟಿ.ಎನ್. ಅಭಿಷೇಕ್, ಕೆ.ಎಚ್. ಪ್ರವೀಣ್, ದೈಹಿಕ ಶಿಕ್ಷಣ ಪರಿವೀಕ್ಷಕ ವೇದಮೂರ್ತಿ, ಶಿಕ್ಷಣ ಸಂಯೋಜಕರಾದ ಭರತೇಶ್, ಜಗದೀಶ್, ದಾಸಪ್ಪ, ಜನಾರ್ಧನ್, ಜಗದೀಶ್, ಸಿಆರ್.ಪಿ ಈಶ್ವರ್, ಸಂಘದ ಮಾಜಿ ಅಧ್ಯಕ್ಷರಾದ ಡಿ.ವಿ. ರಂಗಪ್ಪ, ಶಿವಣ್ಣ ಇದ್ದರು.