ಸಾರಾಂಶ
ಸಭೆಯಲ್ಲಿ ಸದಸ್ಯರಿಗೆ ಶೇ.20 ಡಿವಿಡೆಂಟ್ ಘೋಷಣೆ ಮಾಡಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ವಿವಿಧೋದ್ದೇಶ ಸಹಕಾರಿ ಸಂಘದ ಬೆಳ್ತಂಗಡಿ ಘಟಕದ ಮಹಾಸಭೆಯು ಅಧ್ಯಕ್ಷ ಡಾ.ಕೆ. ಜಯಕೀರ್ತಿ ಜೈನ್ ಅಧ್ಯಕ್ಷತೆಯಲ್ಲಿ ಭಾನುವಾರ ನಡೆಯಿತು.ನಿರ್ದೇಶಕರು ಹಾಗೂ ಸದಸ್ಯರು ಭಾಗವಹಿಸಿದ್ದರು. 2023- 24ನೇ ಸಾಲಿನ ವಾರ್ಷಿಕ ವರದಿ ಹಾಗೂ ಮುಂದಿನ ಕಾರ್ಯ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅಂಗೀಕರಿಸಲಾಯಿತು. ಸಭೆಯಲ್ಲಿ ಸದಸ್ಯರಿಗೆ ಶೇ.20 ಡಿವಿಡೆಂಟ್ ಘೋಷಣೆ ಮಾಡಲಾಯಿತು. ಕಳೆದ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ವಿಶೇಷ ಪ್ರೋತ್ಸಾಹಕ ನಿಧಿಯೊಂದಿಗೆ ಅಭಿನಂದಿಸಲಾಯಿತು. ಕ್ಲಪ್ತ ಸಮಯದಲ್ಲಿ ಸಾಲ ಮರುಪಾವತಿಸಿದ ಸಾಲಗಾರರನ್ನು ಗುರುತಿಸಿ ಅಭಿನಂದಿಸಲಾಯಿತು.
ಡಾ. ಕೆ. ಜಯಕೀರ್ತಿ ಜೈನ್ ಕಳೆದ 15 ವರ್ಷಗಳಲ್ಲಿ ಸಹಕಾರಿ ಸಂಘವು ಬೆಳೆದು ಬಂದ ದಾರಿಯನ್ನು ಸಭೆಗೆ ತಿಳಿಸಿದರು.ಉಪಾಧ್ಯಕ್ಷರಾದ ಚಿದಾನಂದ ಹೂಗಾರ್ ಸ್ವಾಗತಿಸಿದರು. ನಿರ್ದೇಶಕ ಕೆ. ಚಂದ್ರಶೇಖರ ವಂದಿಸಿದರು.
ಸಲಹೆಗಾರರಾದ ವಸಂತ ಸುವರ್ಣ ಕಾರ್ಯಕ್ರಮ ನಿರೂಪಿಸಿದರು. ಸನ್ಮಾನ ಕಾರ್ಯಕ್ರಮವನ್ನು ಧರಣೇಂದ್ರ ಕೆ ಜೈನ್ ನಿರ್ವಹಿಸಿದರು.ನಿರ್ದೇಶಕರಾದ ಕೆ ಚಂದ್ರಶೇಖರ, ಅಬ್ದುಲ್ ರಝಾಕ್, ಆರತಿ ಜೈನ್, ಪ್ರಶಾಂತ್ ಕುಮಾರ್, ಹೇಮಲತಾ, ವಾರಿಜ ಕೆ, ಜಯರಾಜ್ ಜೈನ್, ಹರಿಪ್ರಸಾದ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವತ್ಸಲಾ ಜ್ಯೋತಿರಾಜ್, ಕೊಕ್ಕಡ ಶಾಖಾಧಿಕಾರಿ ಪಿ ಅತಿಶಯ್ ಜೈನ್, ಸಿಬ್ಬಂದಿ ವಿಶಾಲ ಹಾಗೂ ಎಲ್ಲಾ ಪಿಗ್ಗಿ ಸಂಗ್ರಾಹಕರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))