ಸರ್ಕಾರಿ ನೌಕರರ ಸಂಘ ಹಾರೋಹಳ್ಳಿ ಶಾಖೆ ಆರಂಭ

| Published : Nov 18 2024, 12:06 AM IST

ಸರ್ಕಾರಿ ನೌಕರರ ಸಂಘ ಹಾರೋಹಳ್ಳಿ ಶಾಖೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಹಾರೋಹಳ್ಳಿ: ದೇಶದ ಪ್ರಜಾಪ್ರಭುತ್ವ ಅತ್ಯಂತ ಶ್ರೇಷ್ಠವಾದುದು, ಇಲ್ಲಿ ಎಲ್ಲರೂ ಸಮಾನ ಹಕ್ಕು ಹೊಂದಿದ್ದಾರೆ. ನೂತನ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆ ಸಂತೋಷ ತಂದಿದೆ. ಎಲ್ಲರೂ ಸಂಘದ ಶ್ರಯೋಭಿವೃದ್ಧಿಗೆ ಕಂಕಣಬದ್ಧರಾಗಿ ಕೆಲಸ ನಿರ್ವಹಿಸಬೇಕೆಂದು ನೂತನ ಪದಾಧಿಕಾರಿಗಳಿಗೆ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಸತೀಶ್‌ ಶುಭ ಹಾರೈಸಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಹಾರೋಹಳ್ಳಿ ನೂತನ ಶಾಖೆ ಆರಂಭ ಹಾಗೂ ಸಂಘದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮಕ್ಕೆ ನೂತನ ಯೋಜನಾ ಶಾಖೆಗೆ ಚಾಲನೆ ನೀಡಿ ಮಾತನಾಡಿದರು.

ನೂತನ ಅಧ್ಯಕ್ಷ ಆಯ್ಕೆ:

ನೂತನ ಅಧ್ಯಕ್ಷರಾಗಿ ಎಸ್.ಬಿ.ಗೌಡ, ಖಜಾಂಚಿಯಾಗಿ ಸಿ.ಗೋವಿಂದರಾಜು, ರಾಜ್ಯ ಪರಿಷತ್ ಸದಸ್ಯರಾಗಿ ಮಮತಾ, ನಿರ್ದೇಶಕರಾಗಿ ಎಚ್.ಎಂ.ಆನಂದ್, ಶ್ರೀನಿವಾಸ್, ಮಹೇಶ್ವರಿ, ಎನ್.ರಾಜೇಶ್, ಪಂಚಲಿಂಗೇಗೌಡ, ಚಿಕ್ಕರೆಡ್ಡಪ್ಪ, ಶಿವಕುಮಾರ್, ಎಚ್.ಕೆ.ಪುಟ್ಟಸ್ವಾಮಿ, ಕೆ.ರಮೇಶ್, ಬಸವರಾಜು, ಪದವಿಪೂರ್ವ ಶಿಕ್ಷಣ ಇಲಾಖೆಯ ರೆಡ್ಡಪ್ಪ, ಕಂದಾಯ ಇಲಾಖೆಯ ಮಂಜುಕುಮಾರ್, ಮಹಿಳಾ ಮೀಸಲಾತಿ ಸ್ಥಾನಕ್ಕೆ ಸರಸ್ವತಿ ಆಯ್ಕೆಯಾದರು. ಚುನಾವಣಾಧಿಕಾರಿ ಪುರುಷೋತ್ತಮ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋದಿಸಿದರು. ಬಮುಲ್ ನಿರ್ದೇಶಕ ಎಚ್.ಎಸ್.ಹರೀಶ್, ಜೆಸಿಬಿ ಅಶೋಕ್, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು. ಕನಕಪುರ ನೌಕರರ ಸಂಘದ ಅಧ್ಯಕ್ಷ ನಂದೀಶ್, ಮಾಜಿ ಅಧ್ಯಕ್ಷ ಶಿವಲಿಂಗೇಗೌಡ, ತಾಪಂ ಸದಸ್ಯ ಕೀದರ್ಪಾಷ ಸೇರಿದಂತೆ ಸರ್ಕಾರಿ ನೌಕರರು ಭಾಗವಹಿಸಿದ್ದರು.

16ಕೆಆರ್ ಎಂಎನ್ 3.ಜೆಪಿಜಿ

ಹಾರೋಹಳ್ಳಿ ರಾಜ್ಯ ಸರ್ಕಾರಿ ನೌಕರರ ಸಂಘದ ನೂತನ ಯೋಜನಾ ಶಾಖೆ ಹಾಗೂ ಪದಾಧಿಕಾರಿಗಳ ಆಯ್ಕೆಯಲ್ಲಿ ಸತೀಶ್, ಎಸ್.ಬಿ.ಗೌಡ, ಗೋವಿಂದರಾಜು, ಮಮತ, ರಾಜೇಶ್ ಉಪಸ್ಥಿತರಿದ್ದರು.