ಅಂತಾರಾಷ್ಟ್ರೀಯ ವರ್ಚುಯಲ್ ಸಮ್ಮೇಳನ ಯಶಸ್ವಿ

| Published : May 21 2024, 12:31 AM IST

ಅಂತಾರಾಷ್ಟ್ರೀಯ ವರ್ಚುಯಲ್ ಸಮ್ಮೇಳನ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ಕುವೈತ್ ನ ಅಮೇರಿಕನ್ ವಿವಿಯ ಕಾಲೇಜ್ ಆಫ್ ಬ್ಯುಸಿನೆಸ್ ಅಂಡ್ ಎಕನಾಮಿಕ್ಸ್ ನ ಡಾ. ರಾಲ್ಫ್ ಪಲ್ಲಿಯಮ್, ಇರಾನ್ ನ ಖುಜೆಸ್ತಾನ ರಾಜ್ಯದ ಆಜಾದ್ ಅಹ್ವಾಜ್ ವಿವಿಯ ಕಂಪ್ಯೂಟರ್ಸೈನ್ಸ್ ವಿಭಾಗದ ಡಾ. ಸಿರೂಸ್ ಜಬೋಲಿ, ತುಮಕೂರು ವಿಶ್ವವಿದ್ಯಾನಿಲಯದ ಮಾಜಿ ರಿಜಿಸ್ಟ್ರಾರ್ ಪ್ರೊ.ಕೆ. ಶಿವಚಿತಪ್ಪ, ಮಾಹಿತಿ ವಿಜ್ಞಾನಿ ಪ್ರೊ. ಶಾಲಿನಿ, ಮುಂಬೈನ ಎಸ್.ಎನ್.ಡಿಟಿ ಮಹಿಳಾ ವಿವಿಯ ಕ್ರೀಡೆ ಮತ್ತು ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಕವಿತಾ ಖೋಲ್ಗಡೆ,

ಕನ್ನಡಪ್ರಭ ವಾರ್ತೆ ಮೈಸೂರು

ಸಿದ್ದಾರ್ಥನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಉನ್ನತ ಶಿಕ್ಷಣದಲ್ಲಿ ಉದಯೋನ್ಮುಖ ಪ್ರವೃತ್ತಿಗಳ ಕುರಿತು ನಡೆದ ಎರಡು ದಿನಗಳ ವರ್ಚುಯಲ್ ಅಂತಾರಾಷ್ಟ್ರೀಯ ಸಮ್ಮೇಳನವನ್ನು ಪ್ರಾಂಶುಪಾಲೆ ಪ್ರೊ. ಎನ್. ಮಾಯಾದೇವಿ ಉದ್ಘಾಟಿಸಿದರು.

ಕಾಲೇಜಿನ ದೈಹಿಕ ಶಿಕ್ಷಣ ವಿಭಾಗ ಮತ್ತು ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಯೋಗದೊಂದಿಗೆ ಆಯೋಜಿಸಿತ್ತು.

ಸಮ್ಮೇಳನದಲ್ಲಿ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಭಾಷಣಕಾರರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ, ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಿದರು.

ಕುವೈತ್ ನ ಅಮೇರಿಕನ್ ವಿವಿಯ ಕಾಲೇಜ್ ಆಫ್ ಬ್ಯುಸಿನೆಸ್ ಅಂಡ್ ಎಕನಾಮಿಕ್ಸ್ ನ ಡಾ. ರಾಲ್ಫ್ ಪಲ್ಲಿಯಮ್, ಇರಾನ್ ನ ಖುಜೆಸ್ತಾನ ರಾಜ್ಯದ ಆಜಾದ್ ಅಹ್ವಾಜ್ ವಿವಿಯ ಕಂಪ್ಯೂಟರ್ಸೈನ್ಸ್ ವಿಭಾಗದ ಡಾ. ಸಿರೂಸ್ ಜಬೋಲಿ, ತುಮಕೂರು ವಿಶ್ವವಿದ್ಯಾನಿಲಯದ ಮಾಜಿ ರಿಜಿಸ್ಟ್ರಾರ್ ಪ್ರೊ.ಕೆ. ಶಿವಚಿತಪ್ಪ, ಮಾಹಿತಿ ವಿಜ್ಞಾನಿ ಪ್ರೊ. ಶಾಲಿನಿ, ಮುಂಬೈನ ಎಸ್.ಎನ್.ಡಿಟಿ ಮಹಿಳಾ ವಿವಿಯ ಕ್ರೀಡೆ ಮತ್ತು ದೈಹಿಕ ಶಿಕ್ಷಣ ನಿರ್ದೇಶಕಿ ಡಾ. ಕವಿತಾ ಖೋಲ್ಗಡೆ, ಬೆಂಗಳೂರಿನ ಡಿಆರ್.ಟಿಸಿ, ಇಂಡಿಯನ್ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ಮುಖ್ಯಸ್ಥ ಡಾ.ಎಂ. ಕೃಷ್ಣಮೂರ್ತಿ, ಮೈಸೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಸಿ. ವೆಂಕಟೇಶ್, ಮೈಸೂರು ವಿವಿಯ ದೈಹಿಕ ಶಿಕ್ಷಣ ವಿಭಾಗದ ಮಾಜಿ ನಿರ್ದೇಶಕ ಡಾ.ಸಿ. ಕೃಷ್ಣ, ತುಮಕೂರು ವಿವಿಯ ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎ.ಎಂ. ಮಂಜುನಾಥ್ ಉಪನ್ಯಾಸ ನೀಡಿದರು.

ಈ ಸಮ್ಮೇಳನಕ್ಕೆ 165ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಸ್ವೀಕರಿಸಲಾಗಿದ್ದು, ಪ್ರಪಂಚದಾದ್ಯಂತ 3 ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ವರ್ಚುಯಲ್ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಪ್ರೊ.ಕೆ. ಶಿವಚಿತ್ತಮಪ್ಪ ಮಾತನಾಡಿ, ಭಾರತದ ಉನ್ನತ ಶಿಕ್ಷಣದ ಪ್ರಸ್ತುತ ಸನ್ನಿವೇಶವನ್ನು ಕೇಂದ್ರೀಕರಿಸಿದರು. ಡಾ.ಸಿ. ಕೃಷ್ಣ ಅವರು ದೈಹಿಕ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಪರಿವರ್ತನೆಗಳ ಕುರಿತು ಚರ್ಚಿಸಿದರು. ಡಾ. ರಾಲ್ಫ್ ಪಲ್ಲಿಯಮ್ಹಲವರು ರವೀಂದ್ರನಾಥ ಟ್ಯಾಗೋರ್ ಮತ್ತು ಆಲ್ಫ್ರೆಡ್ಲಾರ್ಡ್ ಟೆನ್ನಿಸನ್ಅವರು ರೂಪಿಸಿದ ಶೈಕ್ಷಣಿಕ ವಿಚಾರಗಳನ್ನು ಚರ್ಚಿಸಿದರು.

ಪ್ರತಿನಿಧಿಗಳು ವಿವಿಧ ಉಪ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು.ಎಸ್. ಕಿರಣ್ ರಾವತ್ ಸ್ವಾಗತಿಸಿದರು. ವೀರೇಶ್ ವಂದಿಸಿದರು.