ಒಳಮೀಸಲಾತಿ ಜಾರಿ ಮಾಡುವಲ್ಲಿ ಸರ್ಕಾರ ವಿಫಲ: ಬುಳ್ಳಳ್ಳಿ ರಾಜಪ್ಪ

| Published : Aug 11 2025, 12:31 AM IST

ಒಳಮೀಸಲಾತಿ ಜಾರಿ ಮಾಡುವಲ್ಲಿ ಸರ್ಕಾರ ವಿಫಲ: ಬುಳ್ಳಳ್ಳಿ ರಾಜಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯ ಸರ್ಕಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವುದಾಗಿ ತಿಳಿಸಿ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಸಿದ್ದರಾಮಣ್ಣನವರ ಸರ್ಕಾರ ಮಾತು ತಪ್ಪಿದೆ

ಕನ್ನಡಪ್ರಭ ವಾರ್ತೆ ದೇವನಹಳ್ಳಿ

ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಅವರ ವರದಿ ಸ್ವೀಕಾರ ಮಾಡಿದ ಕೂಡಲೇ ಒಳಮೀಸಲಾತಿ ಜಾರಿ ಮಾಡುತ್ತೇವೆ ಎಂದು ಹೇಳಿ ಮಾತುಕೊಟ್ಟ ಸರ್ಕಾರ ಮಾತಿಗೆ ತಪ್ಪಿದೆ ಎಂದು ಕರ್ನಾಟಕ ಮಾದಿಗ ದಂಡೋರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಬುಳ್ಳಳ್ಳಿ ರಾಜಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಲಿತಪರ, ಸಾಮಾಜಿಕ ಪ್ರಜ್ಞೆ ಇರುವ ಸರಕಾರವಲ್ಲ, ಎಚ್.ಎನ್.ನಾಗಮೋಹನ್ ದಾಸ್ ಅವರ ವರದಿ ಸ್ಪಷ್ಟವಾಗಿದ್ದು, ಮನೆಮನೆಗೆ ಭೇಟಿ ಮಾಡಿ ಜಾತಿಯ ಜನಸಂಖ್ಯೆವಾರು ವರದಿಯನ್ನು ಸ್ವೀಕರಿಸಿ 5 ಭಾಗಗಳಾಗಿ ವಿಂಗಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸುವುದಾಗಿ ತಿಳಿಸಿ ಸಭೆಯಲ್ಲಿ ಯಾವುದೇ ತೀರ್ಮಾನ ತೆಗೆದುಕೊಳ್ಳದೆ ಸಿದ್ದರಾಮಣ್ಣನವರ ಸರ್ಕಾರ ಮಾತು ತಪ್ಪಿದೆ ಎಂದರು.

ಪ್ರವರ್ಗ ಎ.ಬಿ.ಸಿ.ಡಿ.ಇ 5 ವರ್ಗಗಳಾಗಿ ವಿಂಗಡಣೆ ಮಾಡಿದ್ದಾರೆ. ಪ್ರವರ್ಗ ಎ-ಶೇ. 1, ಬಿ-ಶೇ. 6, ಸಿ-ಶೇ. 5, ಡಿ-ಶೇ. 4 ಇ-ಶೇ. 1ರಷ್ಟು ಒಟ್ಟು ಶೇ. 17ರಷ್ಟು ಮೀಸಲಾತಿಯನ್ನು ವಿಂಗಡಿಸಿದ ನಾಗಮೋಹನ್ ದಾಸ್ ಅವರ ವರದಿಯನ್ನು ಯಥಾವತ್ತಾಗಿ ಜಾರಿ ಮಾಡುವುದರಲ್ಲಿ ಸರ್ಕಾರ ವಿಫಲವಾಗಿದೆ. ಸರ್ಕಾರ ಈ ಸಮಾಜಗಳಿಗೆ ಸಾಮಾಜಿಕ ನ್ಯಾಯ ಕೊಡುವಂತ ಬದ್ದತೆ ಸರ್ಕಾರಕ್ಕಿಲ್ಲ, ಸರಕಾರ ಪಾರದರ್ಶಕತೆಯನ್ನು ಕಾಪಾಡಿ ನ್ಯಾಯಸಮ್ಮತವಾದಂತ ಸಾಮಾಜಿಕ ನ್ಯಾಯವನ್ನು ಒಳಮೀಸಲಾತಿ ಹಂಚಿಕೆ ಮಾಡಿಲ್ಲ.

ಸಿದ್ದರಾಮಯ್ಯನವರ ಸರ್ಕಾರ ಅಹಿಂದ, ದಲಿತರ ಪರ ಸರ್ಕಾರ ಎಂದು ಹೇಳುತ್ತಾರೆ. ಅದೆಲ್ಲವು ಬೂಟಾಟಿಕೆ ಮಾತು, ಹಾಗಾಗಿ ಮಾದಿಗ ಸಂಘಟನೆಗಳ ಒಕ್ಕೂಟ ಆ. 1ರಂದು ಅರೆಬೆತ್ತಲೆ ಪ್ರತಿಭಟನೆ ಮಾಡಿದ್ದೇವೆ. ಆ. 15ರ ಒಳಗೆ ಒಳಮೀಸಲಾತಿ ಜಾರಿ ಮಾಡದಿದ್ದರೆ ಆ. 15ರಂದು ರಾಜ್ಯಾದ್ಯಂತ ಉರುಳು ಸೇವೆಯನ್ನು ಮಾಡುವ ಯೋಜನೆಯನ್ನು ರೂಪಿಸುತ್ತಿದ್ದೇವೆ ಸರ್ಕಾರ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದರು.೦೯ ದೇವನಹಳ್ಳಿ ಚಿತ್ರಸುದ್ದಿ: ೦೧ ಕರ್ನಾಟಕ ಮಾದಿಗ ದಂಡೋರ ಪ್ರಚಾರ ಸಮಿತಿ ರಾಜ್ಯಾಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ