ಸರ್ಕಾರಿ ಆಸ್ಪತ್ರೆ ಅ‍್ಯವಸ್ಥೆಯ ಆಗರ

| Published : Jul 04 2025, 11:47 PM IST

ಸಾರಾಂಶ

ಹೆರಿಗೆ ಚಿಕಿತ್ಸೆಗಾಗಿ ಬಂದಂತಹ ಹೆಣ್ಣುಮಕ್ಕಳ ಪ್ರತಿಯೊಂದು ಪರೀಕ್ಷೆಗೂ ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸಲಾಗುತ್ತಿದೆ. ನಿರ್ಧಿಷ್ಟ ಲ್ಯಾಬ್‌ನಲ್ಲಿಯೇ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಹೇಳಿ ಒತ್ತಡ ಹಾಕಲಾಗುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ತುರ್ತಾಗಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಲಿ.

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯ ಹಾಗೂ ಭ್ರಷ್ಟಾಚಾರ ಹೆಚ್ಚಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ನಗರದ ಹೊರವಲಯದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ವ್ಯವಸ್ಥೆಗಿಂತ ಅವ್ಯವಸ್ಥೆಯೇ ಹೆಚ್ಚಾಗಿದೆ. ಮಕ್ಕಳಿಗೆ ಚಿಕಿತ್ಸೆ ನೀಡುವ ಕೋಣೇಯಲ್ಲಿ ಹಾಸಿಗೆ ಹರಿದು ಹೋಗಿವೆ. ಮತ್ತು ಅದೇ ಕೋಣೆಯಲ್ಲಿ ಸೀಲಿಂಗ್ ಫ್ಯಾನ್ ರೆಕ್ಕೆಗಳು ಬೆಂಡಾಗಿವೆ. ಸಿಸಿ ಕ್ಯಾಮೆರಾ ಅಳವಡಿಸಿ

ಆಸ್ಪತ್ರೆಯ ಪ್ರಾರಂಭದಲ್ಲಿ ಒಳ- ರೋಗಿಗಳ ಮತ್ತು ಹೊರ- ರೋಗಿಗಳ ನೋಂದಣಿ ಕಾರ್ಯಾಲಯದ ಬಳಿ ರೋಗಿಗಳ ಜನದಟ್ಟಣೆ ತುಂಬಾ ಹೆಚ್ಚಾಗಿದೆ ಇಲ್ಲಿ ದಾಖಲಾತಿ ಶುಲ್ಕ ಪಾವತಿಸಲು ಒಂದು ಯುಪಿಐ ಸ್ಕಾನರ್ (ಫೋನ್ ಪೇ, ಗೂಗಲ್ ಪೇ ಇತ್ಯಾದಿ) ಆಳವಡಿಸಬೇಕು ಮತ್ತು ಅಲ್ಲಿ ಒಂದು ಸಿಸಿ ಕ್ಯಾಮರಾ ಆಳವಡಿಸಬೇಕಾಗಿದೆ.ಹೆರಿಗೆ ಚಿಕಿತ್ಸೆಗಾಗಿ ಬಂದಂತಹ ಹೆಣ್ಣುಮಕ್ಕಳ ಪ್ರತಿಯೊಂದು ಪರೀಕ್ಷೆಗೂ ಖಾಸಗಿ ಲ್ಯಾಬ್‌ಗಳಿಗೆ ಕಳುಹಿಸಲಾಗುತ್ತಿದೆ. ನಿರ್ಧಿಷ್ಟ ಲ್ಯಾಬ್‌ನಲ್ಲಿಯೇ ಪರೀಕ್ಷೆ ಮಾಡಿಸಿಕೊಂಡು ಬನ್ನಿ ಎಂದು ಹೇಳಿ ಒತ್ತಡ ಹಾಕಲಾಗುತ್ತಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ತುರ್ತಾಗಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದರು.ವೈದ್ಯರಿಂದ ಖಾಸಗಿ ಸೇವೆ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದ ಜೊತೆಗೆ ಸ್ವಚ್ಛತೆ ಮರೀಚಿಕೆಯಾಗಿದೆ. ಸ್ವಚ್ಛತಾ ಕೆಲಸಗಾರರ ಸಂಖ್ಯೆ ಕಡಿಮೆ ಇದೆ. ದುರ್ವಾಸನೆಯಿಂದ ರೋಗಿಗಳು ಸಾರ್ವಜನಿಕರು ಮೂಗು ಮುಚ್ಚಿಕೊಂಡು ತಿರುಗಾಡುವಂತಾಗಿದೆ. ವೈದ್ಯರು ಕೆಲಸದ ವೇಳೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರೋಪಗಳೂ ಹೇಳಿಬಂದಿವೆ. ಆರೋಗ್ಯ ಇಲಾಖೆಯು ಸಾರ್ವಜನಿಕರ ಆರೋಗ್ಯ ರಕ್ಷಣೆಗಾಗಿ ಕೋಟ್ಯಂತರ ರೂಗಳನ್ನು ಅನುದಾನ ನೀಡುತ್ತಿದೆ. ಆದರೂ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಕನಿಷ್ಠ ಸೌಲಭ್ಯಗಳು ಸಹ ಸಿಗುತ್ತಿಲ್ಲವೆಂದು ರೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಆರೋಗ್ಯ ಅಧಿಕಾರಿಗಳು ಅಥವಾ ಚುನಾಯಿತ ಜನಪ್ರತಿನಿಧಿಗಳು ಇತ್ತ ಗಮನ ಹರಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಹೋರಾಟಕ್ಕೆ ಬೆಲೆಯೇ ಇಲ್ಲ

ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳು ಹೋರಾಟ ನಡೆಸಿದ್ದರೂ ಆಸ್ಪತ್ರೆ ಆಡಳಿತ ವರ್ಗ ಮಾತ್ರ ತಮಗೇನೂ ತಿಳಿದೇ ಇಲ್ಲ ಎಂಬಂತೆ ವರ್ತಿಸುತ್ತಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.