ಸರ್ಕಾರಿ ಶಾಲೆ ಉನ್ನತಿಗೆ ಸರ್ಕಾರ ಬದ್ಧ

| Published : Dec 24 2023, 01:45 AM IST

ಸಾರಾಂಶ

ಕಾಲ ಬದಲಾದಂತೆ ಮಕ್ಕಳಿಗೆ ನೀಡುವ ಶಿಕ್ಷಣದ ರೀತಿ, ನೀತಿಗಳು ಕೂಡ ಬದಲಾಗಿವೆ: ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕಾಲ ಬದಲಾದಂತೆ ಮಕ್ಕಳಿಗೆ ನೀಡುವ ಶಿಕ್ಷಣದ ರೀತಿ, ನೀತಿಗಳು ಕೂಡ ಬದಲಾಗಿವೆ ಎಂದು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.

ತಾಲೂಕಿನ ಸಮೀಪದ ರನ್ನ ಬೆಳಗಲಿ ಪಟ್ಟಣದಲ್ಲಿ ಶನಿವಾರ ₹1.71 ಲಕ್ಷಗಳ ವೆಚ್ಚದ ವಿವಿಧ ಕಾಮಗಾರಿಗಳಲ್ಲಿ ನಿರ್ಮಾಣವಾದ ನೂತನ ಒಟ್ಟು 12 ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಆಧುನಿಕ ಯುಗದಲ್ಲಿ ನಾಗರಿಕರ ಜನಜೀವನದ ಬದುಕು ಸುಧಾರಣೆಯತ್ತ ಸಾಗಿದೆ. ಅದಕ್ಕೆ ತಕ್ಕಂತೆ ಕೆಳಹಂತದಿಂದಲೇ ಶಿಕ್ಷಣಕ್ಕೆ ಬೇಕಾಗುವ ಮೂಲಭೂತ ಸೌಕರ್ಯಗಳನ್ನು ಸಹ ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಆದ್ದರಿಂದ ಎಷ್ಟೇ ಖರ್ಚು ವೆಚ್ಚ ಬಂದರೂ ಬಡವರು, ಮಧ್ಯಮ ವರ್ಗದ ಮಕ್ಕಳೇ ಹೆಚ್ಚು ಕಲಿಯುವ ಸರ್ಕಾರಿ ಶಾಲೆಗಳಿಗೆ ಉತ್ತಮ ಸೌಲಭ್ಯಗಳನ್ನು ನೀಡಲು ಸಿದ್ದರಾಮಯ್ಯ ಸರ್ಕಾರ ಕಟಿ ಬದ್ಧವಾಗಿದೆ ಎಂದರು.

ವಿವಿಧ ಕೊಠಡಿಗಳ ಉದ್ಘಾಟನೆ:

ಬೆಳಗಲಿ ಪಟ್ಟಣದ ಸದಾಶಿವ ನಗರದ ಸಹಿಪ್ರಾ ಶಾಲೆಯ ವಿವೇಕ ಕೊಠಡಿಗಳ ಅನುದಾನ ₹27.80 ಲಕ್ಷ ಗಳಲ್ಲಿ 2 ಕೊಠಡಿಗಳು, ವಿಶೇಷ ಅನುದಾನ ₹27.80 ಲಕ್ಷಗಳಲ್ಲಿ 2 ಕೊಠಡಿಗಳು ಮತ್ತು ಸದರ ₹32.80 ಲಕ್ಷಗಳಲ್ಲಿ 2 ಕೊಠಡಿಗಳು, ಜನತಾ ಪ್ಲಾಟ್ ಸಹಿಪ್ರಾ ಶಾಲೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿವೇಕ ಅನುದಾನ ₹27.80 ಲಕ್ಷಗಳಲ್ಲಿ 2 ಕೊಠಡಿಗಳು ಮತ್ತು ವಿವಿಧ ವಿಧಾನ ಸಭಾ ಕ್ಷೇತ್ರಗಳ ಶಾಲಾ ಕಟ್ಟಡ ನಿರ್ಮಾಣ ಅನುದಾನ ₹13.90 ಲಕ್ಷಗಳಲ್ಲಿ 1 ಕೊಠಡಿ, ಮಂಟೂರ ತೋಟದ ಸಕಿಪ್ರಾ ಶಾಲೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿವೇಕ ಕೊಠಡಿಗಳ ಅನುದಾನ ₹13.90 ಲಕ್ಷಗಳಲ್ಲಿ 1 ಕೊಠಡಿ, ಸಕಿಪ್ರಾ ಕೆರಲ ಲಕ್ಷ್ಮಿ ನಗರ ಸದರ ₹13.90 ಲಕ್ಷಗಳಲ್ಲಿ 1 ಕೊಠಡಿ, ಸದರ ಮಾಳಿಂಗರಾಯ ತೋಟದ ಸಕಿಪ್ರಾ ಶಾಲೆಗೆ ₹13.90 ಲಕ್ಷಗಳಲ್ಲಿ 1 ಕೊಠಡಿ ಗಳನ್ನು ಉಸ್ತುವಾರಿ ಸಚಿವ ಆರ್ ಬಿ. ತಿಮ್ಮಾಪುರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಿಧ್ಧರಾಮ ಶ್ರೀಗಳು, ಮುಖಂಡರಾದ ಧರೇಪ್ಪ ಸಾಂಗ್ಲಿಕರ, ಕಲ್ಮೇಶ ಸಾರವಾಡ, ದುಂಡಪ್ಪ ಭರಮನಿ, ಈರಪ್ಪ ಕಿತ್ತೂರಿ, ಪ್ರವೀಣ ಪಾಟೀಲ್, ಶಿವನಗೌಡ ದೌ. ಪಾಟೀಲ್, ಮಲ್ಲಪ್ಪ ಸನ್ನಟ್ಟಿ, ಸಂಗಪ್ಪ ಅಮಾತಿ, ನ್ಯಾ ಎಚ್ ಎ ಕಡಪಟ್ಟಿ, ನ್ಯಾ ಅಶೋಕ ಕಿವಡಿ, ಪ್ರಶಾಂತ ಒಂಟಗೋಡಿ, ಮಹಾದೇವ ಮುರನಾಳ, ಸಿದ್ದು ನಕಾತಿ,ಯಮನಪ್ಪ ದೊಡಮನಿ, ಯಮನಪ್ಪ ಪೂಜಾರಿ,ಮಲ್ಲಪ್ಪ ಮಲಾವಾಡಿ, ಕರೆಪ್ಪ ಭಾವಿಮನಿ ಮತ್ತು ವಿಧ್ಯಾರ್ಥಿಗಳು, ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿ ಮುಲ್ಲಾ, ಸ್ಥಳೀಯ ಶಾಲೆಗಳ ಎಸ್ ಡಿ ಎಂ ಸಿ ಅಧ್ಯಕ್ಷರು, ಮುಖ್ಯೋಪಾಧ್ಯಾಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.