ಸಾರಾಂಶ
ನರಗುಂದದಲ್ಲಿ ನಡೆಯುತ್ತಿರುವ ಮಹಾದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ರೈತ ಮುಖಂಡ ಸಿ.ಎಸ್. ಪಾಟೀಲ ಮಾತನಾಡಿ, ಮಾನವ ಕುಲಕ್ಕೆ ಅನ್ನ ನೀಡುವ ರೈತನಿಗೆ ಸರ್ಕಾರ ಬರಗಾಲದಿಂದ ತೊಂದರೆಗೆ ಸಿಲುಕಿದ ರೈತನ ಸಹಾಯಕ್ಕೆ ಬರದೇ ಅನ್ಯಾಯ ಮಾಡುತ್ತದೆ ಎಂದು ಆರೋಪಿಸಿದರು.
ಕಳಸಾ-ಬಂಡೂರಿ ನಾಲಾ ಯೋಜನೆ ನಿರಂತರ ಹೋರಾಟನರಗುಂದ: ಮಾನವ ಕುಲಕ್ಕೆ ಅನ್ನ ನೀಡುವ ರೈತನಿಗೆ ಸರ್ಕಾರ ಬರಗಾಲದಿಂದ ತೊಂದರೆಗೆ ಸಿಲುಕಿದ ರೈತನ ಸಹಾಯಕ್ಕೆ ಬರದೇ ಅನ್ಯಾಯ ಮಾಡುತ್ತದೆ ಎಂದು ರೈತ ಮುಖಂಡ ಸಿ.ಎಸ್. ಪಾಟೀಲ ಆರೋಪಿಸಿದರು.
ಅವರು 3079ನೇ ದಿನದ ಮಹಾದಾಯಿ ಹಾಗೂ ಕಳಸಾ ಬಂಡೂರಿ ನಾಲಾ ಯೋಜನೆಯ ನಿರಂತರ ಹೋರಾಟ ವೇದಿಕೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಪ್ರಸುಕ್ತ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರೈತ ಸಮುದಾಯ ಬಿತ್ತನೆ ಮಾಡಿ ಸಾವಿರಾರು ರುಪಾಯಿ ಹಾನಿ ಮಾಡಿಕೊಂಡ ರೈತ ಸಮುದಾಯ ಸದ್ಯ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ದಾನೆ. ಮೇಲಾಗಿ ರೈತ ಈ ವರ್ಷ ಬಿತ್ತನೆ ಮಾಡಲು ಸಹಕಾರಿ ಸಂಘ ಹಾಗೂ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ಪಡೆದು ಕೃಷಿ ಸಾಲ ತುಂಬದ ಸ್ಥಿತಿಯಲ್ಲಿ ಇದ್ದಾನೆ. ಸರ್ಕಾರ ರೈತರಿಗೆ ಮುಂಗಾರು ಹಾಗೂ ಹಿಂಗಾರು ಹಂಗಾಮಿನ ಬೆಳೆ ಹಾನಿ ಪರಿಹಾರ ನೀಡಿಲ್ಲ, ರೈತರು ಕೃಷಿಗೆ ಪಡೆದು ಸಾಲ ಮನ್ನಾ ಮಾಡದೇ ರೈತ ಸಮುದಾಯಕ್ಕೆ ಸಹಾಯಕ್ಕೆ ಬರದೇ ಕೇವಲ ಸಹಕಾರಿ ಬ್ಯಾಂಕಗಳ ಬಡ್ಡಿ ಮನ್ನಾ ಮಾಡಿ ಕೈ ತೊಳೆದುಕೊಂಡಿದ್ದು ಸರಿಯಾದ ಕ್ರಮ ಅಲ್ಲ ಎಂದು ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ರಾಜ್ಯ ಸರ್ಕಾರಕ್ಕೆ ಇನ್ನೂ ಕಾಲ ಮಿಂಚಿಲ್ಲ. ಆದಷ್ಟು ಬೇಗ ರೈತರ ಕೃಷಿ ಸಾಲ ಮನ್ನಾ ಮಾಡಬೇಕು, ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿ ಬೆಳೆ ಹಾನಿ ಮಾಡಿಕೊಂಡ ರೈತನಿಗೆ ಸರ್ಕಾರ ಪರಿಹಾರ ನೀಡದಿದ್ದರೆ ರಾಜ್ಯದ ರೈತರು ಬೆಂಗಳೂರು ವಿಧಾನಸಭೆಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಮಾಡುತ್ತೇವೆಂದು ಎಚ್ಚರಿಕೆ ನೀಡಿದರು. ವೀರಬಸಪ್ಪ ಹೂಗಾರ, ಪರಶುರಾಮ ಜಂಬಗಿ, ಎಸ್.ಬಿ. ಜೋಗಣ್ಣವರ, ಹನಮಂತ ಸರನಾಯ್ಕರ, ಶಂಕ್ರಪ್ಪ ಜಾಧವ, ಶಿವಪ್ಪ ಸಾತಣ್ಣವರ, ಅನಸವ್ವ ಶಿಂದೆ, ನಾಗರತ್ನ ಸವಳಭಾವಿ, ವಾಸು ಚವಾಣ, ಯಲ್ಲಪ್ಪ ಚಲವಣ್ಣವರ, ವಿಜಯಕುಮಾರ ಹೂಗಾರ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.