ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಪ್ರವೇಶಾತಿ ಆರಂಭ: ಮಾಲಗಿತ್ತಿ

| Published : May 23 2025, 11:58 PM IST

ಸಾರಾಂಶ

ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸುಸಜ್ಜಿತ ಕಟ್ಟಡ, ಆಧುನಿಕ ಪ್ರಯೋಗಾಲಯದೊಂದಿಗೆ ಪರಿಣಿತ ಉಪನ್ಯಾಸಕರನ್ನು ಹೊಂದಿದ್ದು ೨೦೦೭ರಿಂದ ಉತ್ತಮ ಫಲಿತಾಂಶ ದಾಖಲಿಸುತ್ತಿದೆ. ಹೀಗಾಗಿ ೨೦೨೫-೨೬ನೇ ಸಾಲಿನ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಮೊದಲನೇ ವರ್ಷದ ಡಿಪ್ಲೊಮಾ ಎಂಜಿನಿಯರಿಂಗ್ ಪ್ರವೇಶಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ರೇವಣಸಿದ್ದಯ್ಯ ಮಾಲಗಿತ್ತಿ ಹೇಳಿದರು.

ಗಜೇಂದ್ರಗಡ: ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಸುಸಜ್ಜಿತ ಕಟ್ಟಡ, ಆಧುನಿಕ ಪ್ರಯೋಗಾಲಯದೊಂದಿಗೆ ಪರಿಣಿತ ಉಪನ್ಯಾಸಕರನ್ನು ಹೊಂದಿದ್ದು ೨೦೦೭ರಿಂದ ಉತ್ತಮ ಫಲಿತಾಂಶ ದಾಖಲಿಸುತ್ತಿದೆ. ಹೀಗಾಗಿ ೨೦೨೫-೨೬ನೇ ಸಾಲಿನ ಪ್ರವೇಶಾತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಮೊದಲನೇ ವರ್ಷದ ಡಿಪ್ಲೊಮಾ ಎಂಜಿನಿಯರಿಂಗ್ ಪ್ರವೇಶಕ್ಕೆ ಅಧಿಸೂಚನೆ ಹೊರಡಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ರೇವಣಸಿದ್ದಯ್ಯ ಮಾಲಗಿತ್ತಿ ಹೇಳಿದರು.

ಈ ಕುರಿತು ಶುಕ್ರವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ೨೦೨೫-೨೬ನೇ ಸಾಲಿನ ಪ್ರಥಮ ಸೆಮಿಸ್ಟರ್‌ಗೆ ಕಾಲೇಜು ಹಂತದಲ್ಲಿ (ಮೊದಲು ಬಂದವರಿಗೆ ಆದ್ಯತೆ ಮೇರೆಗೆ) ಪ್ರವೇಶಾತಿ ಆರಂಭವಾಗಿವೆ. ೧೦ನೇ ತರಗತಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳು ದಿ.೧೦-೦೬-೨೦೨೫ ರೊಳಗೆ ಎಲ್ಲಾ ಮೂಲ ದಾಖಲೆಗಳೊಂದಿಗೆ (ಎಸ್‌ಎಸ್‌ಎಲ್‌ಸಿ ಮೂಲ ಅಂಕಪಟ್ಟಿ, ವರ್ಗಾವಣೆ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಹಾಗೂ ವ್ಯಾಸಂಗ ಪ್ರಮಾಣ ಪತ್ರ) ಗಳನ್ನು ಸಂಸ್ಥೆಗೆ ಖುದ್ದಾಗಿ ಬೇಟಿ ನೀಡಿ ಪ್ರವೇಶಾತಿ ಪಡೆಯಬಹುದಾಗಿದೆ. ಕಡು ಬಡತನದಿಂದ ಬಂದಿರುವ ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದಿಂದ ವಂಚಿತವಾಗಬಾರದು ಎಂದ ಉದ್ದೇಶದಿಂದ ಸರ್ಕಾರವು (೨ಎ/೩ಎ/೩ಬಿ ಮತ್ತು ಪಜಾ/ಪಗಂ) ಶುಲ್ಕ ಮರು ಪಾವತಿ ಮಾಡುತ್ತಿದೆ ಎಂದಿರುವ ಅವರು, ಕಾಲೇಜಿನ ವಿದ್ಯಾರ್ಥಿಗಳಿಗೆ ವಸತಿ ಸೌಲಭ್ಯ, ಗುಣಮಟ್ಟದ ಶಿಕ್ಷಣ, ವಿದ್ಯಾರ್ಥಿಗಳ ವೈಯಕ್ತಿಕ ಕಾಳಜಿ ಮತ್ತು ಮಾರ್ಗದರ್ಶನ, ಸುಸಜ್ಜಿತ ಕಟ್ಟಡ ಮತ್ತು ಪ್ರಯೋಗಾಲಯ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯ, ವಿದ್ಯಾರ್ಥಿ ೩ ವರ್ಷದ ಅವಧಿಯಲ್ಲಿ ಒಂದು ವೇಳೆ ೧ ವರ್ಷ ಪ್ರವೇಶ ಪಡೆದು ವಿದ್ಯಾರ್ಥಿ ಉತ್ತೀರ್ಣನಾಗಿ ೨ನೇ ವರ್ಷ ಅನಿವಾರ್ಯ ಕಾರಣಗಳಿಂದಾಗಿ ಕೋರ್ಸನ್ನು ತ್ಯಜಿಸಿದ್ದರೂ ೧ ವರ್ಷದ ಪ್ರಮಾಣ ಪತ್ರವನ್ನು ಪಡೆಯಬಹುದು. ಇದು ೨ ಮತ್ತು ೩ನೇ ವರ್ಷದ ವಿದ್ಯಾರ್ಥಿಗಳಿಗೆ ಅನ್ವಯಿಸುತ್ತದೆ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಗಣಕಯಂತ್ರ ವಿಭಾಗ, ದೂರ ಸಂಪರ್ಕ ವಿಭಾಗ, ಸಿವಿಲ್ ವಿಭಾಗ, ಮೆಕ್ಯಾನಿಕಲ್ ವಿಭಾಗ, ಅಟೋಮೂಬೈಲ್ ವಿಭಾಗಗಳಿದ್ದು ಡಿಪ್ಲೊಮಾ ಸೆಮಿಸ್ಟರ್‌ನಲ್ಲಿ ಪ್ರವೇಶಾತಿ ಪಡೆಯುವ ಮೂಲಕ ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಲು ಮುಂದಾಗಬೇಕು ಎಂದು ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.