ಸಾರಾಂಶ
ಇಂದಿನ ಶಿಕ್ಷಣ ವ್ಯವಸ್ಥೆ ಹಾಳಾಗಿದ್ದು ಸರ್ಕಾರ ಶಿಕ್ಷಣದ ಕುರಿತು ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಸಮಾಜದ ಸ್ಥಿತಿ ಹದಗೆಡುವುದರಲ್ಲಿ ಸಂಶಯವಿಲ್ಲ ಎಂದು ಬೆಟ್ಟದ ಹಳ್ಳಿ ಗವಿಮಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ಕಳವಳಿಸಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ಇಂದಿನ ಶಿಕ್ಷಣ ವ್ಯವಸ್ಥೆ ಹಾಳಾಗಿದ್ದು ಸರ್ಕಾರ ಶಿಕ್ಷಣದ ಕುರಿತು ಇದೇ ರೀತಿ ನಿರ್ಲಕ್ಷ್ಯ ವಹಿಸಿದರೆ ಮುಂದಿನ ದಿನಗಳಲ್ಲಿ ಸಮಾಜದ ಸ್ಥಿತಿ ಹದಗೆಡುವುದರಲ್ಲಿ ಸಂಶಯವಿಲ್ಲ ಎಂದು ಬೆಟ್ಟದ ಹಳ್ಳಿ ಗವಿಮಠಾಧ್ಯಕ್ಷರಾದ ಶ್ರೀ ಚಂದ್ರಶೇಖರ ಸ್ವಾಮೀಜಿ ಕಳವಳಿಸಿದರು.ತಾಲೂಕಿನ ಬೆಟ್ಟದಹಳ್ಳಿ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಸನಿವಾಸ ಪ್ರೌಢಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಹಿಂದಿನ ಶಿಕ್ಷಣ ವ್ಯವಸ್ಥೆ ಬಹಳ ಉತ್ತಮವಾಗಿತ್ತು. ಆಗ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವೆ ತಂದೆ ತಾಯಿ ಅಂತಹ ಸಂಬಂಧಗಳು ಇದ್ದವು. ಅಂದಿನ ಪಠ್ಯಕ್ರಮದಲ್ಲೂ ಸಹ ನೈತಿಕ ಮೌಲ್ಯಗಳ ಕುರಿತು ಸಾಕಷ್ಟು ಪಾಠಗಳಿರುತ್ತಿದ್ದವು. ಜೊತೆಗೆ ಮಕ್ಕಳಿಗೆ ಏನು ಕಲಿಸಬೇಕು ಎಂದು ಶಿಕ್ಷಣ ತಜ್ಞರು ನಿರ್ಧಾರ ಮಾಡಿ ಅದನ್ನು ಸರ್ಕಾರಕ್ಕೆ ತಿಳಿಸುತ್ತಿದ್ದರು. ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಸಹ ಶಿಕ್ಷಕರು ಸಾಕಷ್ಟು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಮಕ್ಕಳನ್ನು ತಿದ್ದಿ ತೀಡುತ್ತಿದ್ದರು. ಆದರೆ ಇಂದಿನ ದಿನಗಳಲ್ಲಿ ಸರ್ಕಾರಕ್ಕೆ ಶಿಕ್ಷಣ ಕ್ಷೇತ್ರದ ಕಡೆಗೆ ತಾತ್ಸಾರ ಮನೋಭಾವ ಬಂದಿದ್ದು ಮುಂದಿನ ದಿನಗಳಲ್ಲಿ ಹೀಗೆ ಮುಂದುವರೆದರೆ ಮುಂದಿನ ಯುವ ಪೀಳಿಗೆಗೆ ಕಷ್ಟದ ಪರಿಸ್ಥಿತಿ ಎದುರಾಗುತ್ತದೆ. ಸರ್ಕಾರ ಎಚ್ಚೆತ್ತುಕೊಂಡು ಗ್ರಾಮೀಣ ಭಾಗದಲ್ಲಿ ಇರುವ ಶಾಲೆಗಳನ್ನು ಉಳಿಸಬೇಕು ಎಂದರು.ಮಠಮಾನ್ಯಗಳನ್ನು ರಕ್ಷಿಸಲು ಹಳೆ ವಿದ್ಯಾರ್ಥಿಗಳು ಹಾಗೂ ದಾನಿಗಳು ಹೆಚ್ಚು ಸಹಕಾರವನ್ನು ನೀಡಬೇಕು. ಆಗ ಮಾತ್ರ ಮಠ ಮಾನ್ಯಗಳು ಉಳಿಯಲು ಸಾಧ್ಯವಾಗುತ್ತದೆ. ಹಳೆ ವಿದ್ಯಾರ್ಥಿಗಳು ತಾವು ಓಧಿದ ಶಾಲೆಯನ್ನು ನೆನಪುಮಾಡಿಕೊಂಡು ಶಾಲೆಗಳಿಗೆ ಹಾಗೂ ಗುರುಗಳಿಗೆ ಗುರುವಂದನಾ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಖಜಾಂಚಿ ನಂಜುಂಡಪ್ಪ , ಮುಖ್ಯ ಶಿಕ್ಷಕ ಸೋಮಶೇಖರ್ , ನಿವೃತ್ತ ಶಿಕ್ಷಕರಾದ ರಂಗಪ್ಪ , ಸಿದ್ದರಾಮಯ್ಯ, ಕ್ಷೇತ್ರಪಾಲಪ್ಪ , ಹಳೆಯ ವಿದ್ಯಾರ್ಥಿಗಳಾದ ಮಹೇಶ್, ಹರೀಶ್ ,ಉಮೇಶ್, ಸಂಗಮೇಶ್ , ಸಿದ್ದರಾಮು, ರುದ್ರೇಶ್, ಮಂಜುನಾಥ್, ಮೋಹನ್ , ಶಶಿಕಲಾ ಶಿವಗಂಗಾ ,ಮಮತಾ ,ವನಜಾಕ್ಷಿ, ಪೂರ್ಣಿಮಾ ಇತರರಿದ್ದರು.