ಸಾರಾಂಶ
ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಸಂಯುಕ್ತಾಶದಯದಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ದೊರೆತಾಗ ಮಾತ್ರ ಅವು ಸಾರ್ಥಕವಾಗಲಿವೆ. ಯುವ ನಿಧಿ ಯೋಜನೆಗೆ ನೋಂದಣಿ ಕಡಿಮೆಯಾಗಿದ್ದು ಅದಷ್ಟು ಬೇಗ ನೋಂದಣಿ ಮಾಡಿಸಿ.
ಕನ್ನಡಪ್ರಭ ವಾರ್ತೆ ಜಗಳೂರು
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ತಾಲೂಕಿನದ್ಯಾಂತ ಸಮರ್ಪಕವಾಗಿ ಕಾರ್ಯರೂಪಕ್ಕೆ ತರಲಾಗಿದೆ ಎಂದು ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಹೇಳಿದರು.ಪಟ್ಟಣದ ಗುರುಭವನದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಪಟ್ಟಣ ಪಂಚಾಯಿತಿ ಸಂಯುಕ್ತಾಶದಯದಲ್ಲಿ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ತಾಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸಮರ್ಪಕವಾಗಿ ದೊರೆತಾಗ ಮಾತ್ರ ಅವು ಸಾರ್ಥಕವಾಗಲಿವೆ. ಯುವ ನಿಧಿ ಯೋಜನೆಗೆ ನೋಂದಣಿ ಕಡಿಮೆಯಾಗಿದ್ದು ಅದಷ್ಟು ಬೇಗ ನೋಂದಣಿ ಮಾಡಿಸಲು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಿ.ಲೋಕ್ಯಾನಾಯ್ಕ ಮಾತನಾಡಿ ಬಡತನ ನಿರ್ಮೂಲನೆ ಮತ್ತು ಕುಟುಂಬ ನಿರ್ವಹಣೆಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಸರ್ಕಾರ ಐದು ಗ್ಯಾರಂಟಿ ಗಳ ಜಾರಿಗೆ ತಂದಿದೆ. ಈ ಯೋಜನೆಯಿಂದ ಬಡ ವರ್ಗದವರಿಗೆ ಅನುಕೂಲವಾಗಲಿದೆ ಎಂದರು.ಬೆಸ್ಕಾಂ ಎಇ ಮಧುಸೂದನ್ ,ಸಿಡಿಪಿಒ ಬೀರೇಂದ್ರ ಕುಮಾರ್ , ಕೆಎಸ್ಆರ್ ಟಿಸಿ ಯ ಅಬ್ದುಲ್ ರಜಾಕ್ ನಾದಫ್ ತಮ್ಮ ತಮ್ಮ ಇಲಾಖೆಯ ಯೋಜನೆಗಳ ಮಾಹಿತಿ ನೀಡಿದರು.
ಫಲಾನುಭವಿ ಗುರುದೇವಮ್ಮ ಮಾತನಾಡಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಇಬ್ಬರು ಪುತ್ರಿಯರ ಶಿಕ್ಷಣಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇನ್ನೊಬ್ಬ ಫಲಾನುಭವಿ ಮಂಜಳಾ ಸರ್ಕಾರದ ಗ್ಯಾರಂಟಿ ಯೋಜನೆ ಹಾಗೂ ಉಚಿತ ಬಸ್ ವ್ಯವಸ್ಥೆಯಿಂದ ಬಡವರ್ಗದವರಿಗೆ ಹೆಚ್ಚು ಅನುಕೂಲವಾಗಿದೆ ಎಂದರುಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ವ್ಯವಸ್ಥಾಪಕ ರವಿಕುಮಾರ್, ಸಿಡಿಪಿಒ ಬಿರೇಂದ್ರ ಕುಮಾರ್, ಸಾಮಾಜಿಕ ವಲಯಾರಣ್ಯಾಧಿಕಾರಿ ಪರಮೇಶ್ವರಪ್ಪ, ಸಹಾಯಕ ಪಶು ನಿರ್ದೇಶಕ ಲಿಂಗರಾಜ್, ಪಟ್ಟಣ ಪಂಚಾಯಿತಿ ಸದಸ್ಯರಾದ ರವಿ, ಲೂಕ್ಮಾನ್ ಖಾನ್, ಮಹಮದ್ ಅಲಿ, ರಮೇಶ್ ಸೇರಿ ಮತ್ತಿತರರಿದ್ದರು.