ಸರ್ಕಾರಿ ಶಾಲಾ ಕಟ್ಟಡ ಕಳಪೆ ಆರೋಪ

| Published : Aug 07 2024, 01:04 AM IST

ಸಾರಾಂಶ

ಅಫಜಲ್ಪುರ ಪಟ್ಟಣದಲ್ಲಿ ತಹಸೀಲ್ದಾರ್‌ ಕಚೇರಿ ಮುಂಭಾಗದಲ್ಲಿ ನಿರ್ಮಾಣವಾಗುತ್ತಿರುವ ಸರ್ಕಾರಿ ಪ್ರೌಢ ಶಾಲೆಯ ಕಟ್ಟಡ ಕಾಮಗಾರಿ ಸಂಪೂರ್ಣವಾಗಿ ಕಳಪೆಯಾಗಿ ನಿರ್ಮಾಣವಾಗುತ್ತಿದೆ ಎಂದು ಜೈ ಕರವೇ ತಾಲೂಕು ಅಧ್ಯಕ್ಷ, ವಕೀಲರಾದ ಸುರೇಶ ಅವಟೆ ಆರೋಪಿಸಿದರು.

ಚವಡಾಪುರ:

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋಟ್ಯಂತರ ರುಪಾಯಿ ಖರ್ಚು ಮಾಡಿ ನಿರ್ಮಿಸುತ್ತಿರುವ ಶಾಲಾ ಕಟ್ಟಡ ಸಂಪೂರ್ಣವಾಗಿ ಕಳಪೆ ಮಟ್ಟದಿಂದ ಕೂಡಿದೆ. ಕಾಮಗಾರಿಯನ್ನು ಎಂಜಿನಿಯರ್‌ಗಳು ವಿಕ್ಷಣೆ ಮಾಡುತ್ತಿಲ್ಲ. ಎಲ್ಲವೂ ಗೌಂಡಿಗಳ ಮೇಲೆ ಬಿಟ್ಟಿದ್ದಾರೆ ಎನ್ನುವುದಕ್ಕೆ ಶಾಲೆಯ ಕಾಲಂಗಳು ಸಾಕ್ಷಿ ಹೇಳುತ್ತಿವೆ. ಒಂದು ಕಾಲಂ ಗೋಡೆಗೆ ಸಮವಾಗಿದ್ದರೆ ಉಳಿದ ಕಾಲಂಗಳು ಗೋಡೆಯಿಂದ ಹೊರಗಡೆ ಕಾಣುತ್ತಿವೆ. ಕೋಟ್ಯಂತರ ರುಪಾಯಿ ಖರ್ಚಿನಲ್ಲಿ ನಡೆಯುತ್ತಿರುವ ಶಾಲಾ ಕಟ್ಟಡ ಇಷ್ಟೊಂದು ಕಳಪೆ ಮಟ್ಟದಲ್ಲಿ ನಡೆಯುತ್ತಿದ್ದರೂ ಕೂಡ ಸಂಬಂಧ ಪಟ್ಟ ಇಲಾಖೆಗಳ ಅಧಿಕಾರಿಗಳು ಬಂದು ನೋಡುತ್ತಿಲ್ಲ ಎನ್ನುವುದೇ ಸೋಜಿಗದ ಸಂಗತಿಯಾಗಿದೆ. ಕೂಡಲೇ ಸಂಬಂಧ ಪಟ್ಟವರು ಇಲ್ಲಿಗೆ ಭೇಟಿ ನೀಡಿ ಕಳಪೆ ಕಾಮಗಾರಿಯನ್ನು ನಿಲ್ಲಿಸಿ ಮತ್ತೊಮ್ಮೆ ಸರಿಯಾಗಿ ಶಾಲಾ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳದಿದ್ದರೆ ಸಂಘಟನೆ ವತಿಯಿಂದ ಹೋರಾಟ ರೂಪಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.