ಖಾಸಗಿ ಶಾಲೆಗೆ ಹೋಲಿಸಿದಲ್ಲಿ ಸರ್ಕಾರಿ ಶಾಲೆ ಮಕ್ಕಳು ಹೆಚ್ಚು ಪ್ರತಿಭಾನ್ವಿತರಾಗಿದ್ದು, ಅವರಿಗೆ ಸೂಕ್ತ ರೀತಿಯಲ್ಲಿ ಸಮುದಾಯ ಪ್ರೋತ್ಸಾಹಿಸಿದಲ್ಲಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುವಲ್ಲಿ ಸಂದೇಹವಿಲ್ಲ ಎಂದು ಶಿವಮೊಗ್ಗ ಉತ್ತರ ರೋಟರಿ ಮಾಜಿ ಗವರ್ನರ್ ಚಂದ್ರಶೇಖರ್ ಹೇಳಿದರು.
ಶಿಕಾರಿಪುರ: ಖಾಸಗಿ ಶಾಲೆಗೆ ಹೋಲಿಸಿದಲ್ಲಿ ಸರ್ಕಾರಿ ಶಾಲೆ ಮಕ್ಕಳು ಹೆಚ್ಚು ಪ್ರತಿಭಾನ್ವಿತರಾಗಿದ್ದು, ಅವರಿಗೆ ಸೂಕ್ತ ರೀತಿಯಲ್ಲಿ ಸಮುದಾಯ ಪ್ರೋತ್ಸಾಹಿಸಿದಲ್ಲಿ ಸಮಾಜಕ್ಕೆ ದೊಡ್ಡ ಕೊಡುಗೆ ನೀಡುವಲ್ಲಿ ಸಂದೇಹವಿಲ್ಲ ಎಂದು ಶಿವಮೊಗ್ಗ ಉತ್ತರ ರೋಟರಿ ಮಾಜಿ ಗವರ್ನರ್ ಚಂದ್ರಶೇಖರ್ ಹೇಳಿದರು.
ಪಟ್ಟಣದ ರಥಬೀದಿಯಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಶಿವಮೊಗ್ಗ ರೋಟರಿ ಕ್ಲಬ್ ಉತ್ತರ ವತಿಯಿಂದ ಮೇಕ್ ಸ್ಕೂಲ್ ಹ್ಯಾಪಿ ಪ್ರಾಜೆಕ್ಟ್ ಯೋಜನೆಯಡಿ ಬೆಂಚ್ ಹಾಗೂ ಡೆಸ್ಕ್‌ಗಳನ್ನು ವಿತರಿಸಿ ಅವರು ಮಾತನಾಡಿದರು.ಸಾಮಾಜಿಕ ಸೇವೆ ರೋಟರಿ ಸಂಸ್ಥೆಯ ಪರಮ ಗುರಿಯಾಗಿದ್ದು, ಈ ದೆಸೆಯಲ್ಲಿ ಸೌಲಭ್ಯ ವಂಚಿತ ಸಮುದಾಯಕ್ಕೆ ಅಗತ್ಯವಾದ ಸೌಲಭ್ಯಗಳನ್ನು ವಿತರಿಸುವಲ್ಲಿ ಸಂಸ್ಥೆ ಮುಂಚೂಣಿಯಲ್ಲಿದೆ. ಸರ್ಕಾರ ಶಾಲೆಯ ಅಭಿವೃದ್ಧಿಗೆ ಅತಿ ಹೆಚ್ಚಿನ ಅನುದಾನ ನೀಡುತ್ತಿದ್ದು, ಕೆಲ ಶಾಲೆಗಳಲ್ಲಿ ಅಗತ್ಯ ಸೌಲಭ್ಯವಿಲ್ಲದೆ ಮಕ್ಕಳು ವಂಚಿತವಾಗದಂತೆ ಜಾಗ್ರತೆ ವಹಿಸಲಾಗುತ್ತಿದೆ ಎಂದು ತಿಳಿಸಿದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸಂಗೀತಾ ವಹಿಸಿದ್ದರು.ಈ ಸಂದರ್ಭದಲ್ಲಿ ಪ್ರಾಜೆಕ್ಟ್ ಯೋಜನಾಧಿಕಾರಿ ದತ್ತಾತ್ರಿ, ರೋಟರಿ ಸದಸ್ಯ ಸರ್ಜಾ ಜಗದೀಶ್, ವೆಂಕಟೇಶ್, ಶಿಕಾರಿಪುರ ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎಂ.ಆರ್.ರಘು, ಡಾ.ವೀರೇಂದ್ರ ಪಾಟೀಲ್, ಶಾಲೆಯ ಹಳೆ ವಿದ್ಯಾರ್ಥಿನಿ ಪ್ರಭ, ಕಾಶಿಬಾಯಿ, ಜಯಮ್ಮ ಇತರರಿದ್ದರು.
ಸಹ ಶಿಕ್ಷಕಿ ಗಾಯತ್ರಿ ದೇವಿ ಪ್ರಾಸ್ತಾವಿಕವಾಗಿ ಮಾತನಾಡಿದರು.