ಸರ್ಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲಿದ್ದಂತೆ: ನಿರಂಜನಾರಾಧ್ಯ

| Published : Nov 06 2025, 01:30 AM IST

ಸಾರಾಂಶ

ಖಾಯಂ ಶಿಕ್ಷಕರನ್ನು ನೇಮಿಸಿ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ನಿಭಾಯಿಸುವುದರೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀತಿ ಜಾರಿಗೊಳಿಸುವ ಅಗತ್ಯತೆ ಇದೆ.

ಕನ್ನಡಪ್ರಭ ವಾರ್ತೆ ಕನಕಪುರ

ಸರ್ಕಾರಿ ಶಾಲೆಗಳು ಸಂವಿಧಾನದ ತೊಟ್ಟಿಲುಗಳಿದ್ದಂತೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯ ಡಾ. ವಿ ಪಿ ನಿರಂಜನಾರಾಧ್ಯ ತಿಳಿಸಿದರು.

ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕುವೆಂಪು ಸಭಾಂಗಣದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ರಿ (ರಿ) ಹಾಗೂ ಕನ್ನಡ ವಿಭಾಗ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಕಾರದೊಂದಿಗೆ ಏರ್ಪಡಿಸಿದ್ದ ಗಡಿಭಾಗದ ಕನ್ನಡ ಶಾಲೆಗಳ ಸ್ಥಿತಿಗತಿ ಹಾಗೂ ಪರಿಹಾರೋಪಾಯಗಳು ಸಮಾಲೋಚನಾ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರದ ಪ್ರಗತಿಗೆ ಶಿಕ್ಷಣ ಅಮೂಲ್ಯವಾದದ್ದು, ಆ ನಿಟ್ಟಿನಲ್ಲಿ ಸರ್ಕಾರ ಗಡಿಭಾಗದ ಶಾಲೆಗಳ ಸರ್ವಂಗೀಣ ಅಭಿವೃದ್ಧಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ವಿಶೇಷವಾಗಿ ಗಡಿ ಭಾಗದ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ವಿಶೇಷ ನೀತಿ ರೂಪಿಸಿ, ಖಾಯಂ ಶಿಕ್ಷಕರನ್ನು ನೇಮಿಸಿ ಮೂಲಭೂತ ಸೌಲಭ್ಯಗಳ ಕೊರತೆಗಳನ್ನು ನಿಭಾಯಿಸುವುದರೊಂದಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀತಿ ಜಾರಿಗೊಳಿಸುವ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.

ಆದಿಚುಂಚನಗಿರಿ ಶಾಖಾ ಮಠದ ಶ್ರೀ ಅನ್ನ ದಾನೇಶ್ವರನಾಥ ಸ್ವಾಮೀಜಿ ಮಾತನಾಡಿ, ಗಡಿ ಭಾಗದ ಸರ್ಕಾರಿ ಶಾಲೆಗಳ ಉನ್ನತೀಕರಣಕ್ಕೆ ಸರ್ಕಾರ ಹಾಗೂ ಸ್ಥಳೀಯ ಸಂಘ,ಸಂಸ್ಥೆಗಳು ಉನ್ನತ ಸರ್ಕಾರಿ ಅಧಿಕಾರಿ ಗಳು ಒಂದೊಂದು ಶಾಲೆಗಳನ್ನು ದತ್ತು ತೆಗೆದುಕೊಂಡು ಗುಣಮಟ್ಟದ ಶಾಲಾ ಅಭಿವೃದ್ಧಿಗೆ ಶ್ರಮಿಸಿ ತಮ್ಮ ಸಾಮಾಜಿಕ ಬದ್ಧತೆಯನ್ನು ತೋರುವ ಮೂಲಕ ಕನ್ನಡ ಶಾಲೆಗಳ ಉಳಿವಿಗೆ ಶ್ರಮಿಸುವ ಕಾಯಕವನ್ನು ಮಾಡವ ಅಗತ್ಯತೆ ಇದೆ ಎಂದರು.

ಮಾತೃಶ್ರೀ ನಮನ ಚಾರಿಟಬಲ್ ಟ್ರಸ್ಟ್ (ರಿ.) ಸಂಸ್ಥಾಪಕ ಅಧ್ಯಕ್ಷ ಚಂದ್ರ ಎಂ ಮಾತನಾಡಿ,ನಮ್ಮ ಸಂಸ್ಥೆ ಹಲವು ವರ್ಷಗಳಿಂದ ರಾಜ್ಯದ ಗಡಿ ಭಾಗದ ಕನಕಪುರ ತಾಲೂಕಿ ನಾದ್ಯಂತ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ನಿರಂತರ ವಾಗಿ ಶ್ರಮಿಸಲಾಗುತ್ತಿದೆ, ನಮ್ಮೂರ ಶಾಲೆಗೆ ನಮ್ಮೂರ ಯೋಜನೆ ಕಾರ್ಯಕ್ರಮದಡಿಯಲ್ಲಿ ಹಲವು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ತಿಳಿಸಿದರು.

ಕೋಡಿಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ. ಕೆ ಟಿ ವೆಂಕಟೇಶ್ ಗಡಿಭಾಗದ ಕನ್ನಡ ಶಾಲೆಗಳ ಸ್ಥಿತಿಗತಿ ಹಾಗೂ ಪರಿಹಾರೋಪಾಯಗಳ ವಿಷಯವನ್ನು ಮಂಡಿಸಿ ಚರ್ಚಿಸಿದರು, ಪ್ರಾಂಶುಪಾಲೆ ಡಾ. ಕೋಮಲ ಎ.ಸಿ ಅಧ್ಯಕ್ಷತೆ ವಹಿಸಿದ್ದರು.

ಮಾತೃಶ್ರೀ ಸಂಸ್ಥೆ ಗೌರವ ಅಧ್ಯಕ್ಷ ಡಾ. ಡಿ ವೆಂಕಟರಮಣ ಸ್ವಾಮಿ (ಗುಂಡಣ್ಣ),ಸಹ ಪ್ರಾಧ್ಯಾಪಕ ಡಾ. ವಿಶ್ವರಾಧ್ಯ ಜಿ, ಸಾರ್ವಜನಿಕ ಆಸ್ಪತ್ರೆ ಓಬಿಜಿ ತಜ್ಞೆ ಡಾ. ಪ್ರತಿಮಾ ದೇವಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಮಾಲೋಚನಾ ಸಭೆಯ ಚರ್ಚೆ ವೇದಿಕೆಯಲ್ಲಿ ಗಡಿ ಭಾಗದ ಸರ್ಕಾರಿ ಶಾಲಾ ಶಿಕ್ಷಕರಾದ ಸತೀಶ್,ಮಹದೇವ ರಾವ್ ಎಸ್, ನಟರಾಜ ವೈ ಸಿ, ಅವಿನಾಶ್, ಕನ್ನಡಪರ ಚಿಂತಕ ಪರಿಸರಪ್ರೇಮಿ ಮರಸಪ್ಪ ರವಿ, ಮಹಮ್ಮದ್ ಯಾಕೂಬ್ ಪಾಷಾ,ಕೂ.ಗಿ ಗಿರಿಯಪ್ಪ,ಸಿ.ಚಂದ್ರಾಜ್ ,ಲೋಕೇಶ,ಶಾಲಾ ಎಸ್. ಡಿ.ಎಂ.ಸಿ ಸದಸ್ಯರು,ಕನ್ನಡ ಉಪನ್ಯಾಸಕರು ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು,

ಸಾರ್ವಜನಿಕರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01: