ಸಾರಾಂಶ
ಸರ್ಕಾರಿ ಶಾಲೆಗಳಲ್ಲಿ ಬೇಕಾಗಿರುವ ಅಗತ್ಯತೆಗಳನ್ನು ತಿಳಿದು ಅವುಗಳನ್ನು ನೀಗಿಸುವ ಕೆಲಸಗಳನ್ನು ರೋಟರಿ ಸಂಸ್ಥೆ ನಿರ್ವಹಿಸುತ್ತಿದೆ ಹಾಗೂ ಗ್ರಾಮಾಂತರ ಟ್ರಸ್ಟ್ ಜೊತೆಗೂಡಿ ತಾಲೂಕಿನಲ್ಲಿ ಹಲವು ಪ್ರಾಜೆಕ್ಟ್ ಗಳನ್ನು ಕೈಗೆತ್ತಿಗೊಂಡಿದೆ. ಶಾಲೆಯಲ್ಲಿ ಶೌಚಾಲಯ ನಿರ್ಮಾಣ, ಡೆಸ್ಕ್ ಮುಂತಾದ ನೆರವು ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ಸರ್ಕಾರಿ ಶಾಲೆಗಳಿಗೆ ಸಾರ್ವಜನಿಕ ಸಹಭಾಗಿತ್ವ ಅತಿ ಅಗತ್ಯ, ದೇವಸ್ಥಾನಗಳಿಗೆ ಹತ್ತಾರು ಬಾರಿ ಹೋಗುವುದಕ್ಕಿಂತ ಬಡ ಮಕ್ಕಳ ಸೇವೆ ಮಾಡುವುದೇ ಶ್ರೇಷ್ಠ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎ. ನರೇಂದ್ರ ಕುಮಾರ್ ಅಭಿಪ್ರಾಯಪಟ್ಟರು.ನಗರದ ಕೋಟೆ ಸರ್ಕಾರಿ ಆಂಗ್ಲ ಮತ್ತು ಕನ್ನಡ ಬಾಲಕಿಯರ ಶಾಲೆಗೆ ರೋಟರಿ ಕ್ಲಬ್ ಮತ್ತು ಗ್ರಾಮಾಂತರ ಟ್ರಸ್ಟ್ ಹಾಗೂ ಬೆಂಗಳೂರು ಪರಿಸರ ಸಂಘ ಸಹಯೋಗದಲ್ಲಿ ಶಾಲೆಗೆ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕೈತೊಳೆಯುವ ನೀರಿನ ಕೊಳಾಯಿ ನಿರ್ಮಿಸಿ ಹಾಗೂ ಶಾಲೆಗೆ ಡೆಸ್ಕ್ ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರಿ ಶಾಲೆಗೆ ಸೌಲಭ್ಯ
ರೋಟರಿ ಟ್ರಸ್ಟ್ ಅಧ್ಯಕ್ಷ ಅನಿಲ್ ಡಿಸೋಜ ಮಾತನಾಡಿ ರೋಟರಿ ಸಂಸ್ಥೆ ಅಂತಾರಾಷ್ಟ್ರೀಯ ಸಂಸ್ಥೆಯಾಗಿದ್ದು 110 ದೇಶಗಳಲ್ಲಿ ಈ ಸಂಸ್ಥೆ ಹೊಂದಿದ್ದು ಸರ್ಕಾರಿ ಶಾಲೆಗಳಲ್ಲಿ ಬೇಕಾಗಿರುವ ಅಗತ್ಯತೆಗಳನ್ನು ತಿಳಿದು ಅವುಗಳನ್ನು ನೀಗಿಸುವ ಕೆಲಸಗಳನ್ನು ನಿರ್ವಹಿಸುತ್ತಿವೆ ಹಾಗೂ ಗ್ರಾಮಾಂತರ ಟ್ರಸ್ಟ್ ಜೊತೆಗೂಡಿ ನಾವು ತಾಲೂಕಿನಲ್ಲಿ ಹಲವು ಪ್ರಾಜೆಕ್ಟ್ ಗಳನ್ನು ನಿರ್ವಹಿಸಿದ್ದೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷೆ ಅನುರಾಧ ಬಿಸ್ವಾಸ್, ನಿಕಟ ಪೂರ್ವ ಅಧ್ಯಕ್ಷ ರಾಜ, ಸದಸ್ಯ ಪ್ರೀತಂ ಗ್ರಾಮಾಂತರ ಟ್ರಸ್ಟ್ ಸಂಸ್ಥಾಪಕಿ ಉಷಾ ಶೆಟ್ಟಿ ಮತ್ತು ತಂಡ, ಬೆಂಗಳೂರು ಪರಿಸರ ಸಂಘದ ಲಕ್ಷ್ಯಾ ಮತ್ತು ತಂಡ, ನಗರಸಭೆ ಉಪಾಧ್ಯಕ್ಷ ರೂಪ ನವೀನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.