ಕೆಪಿಎಸ್ ಮ್ಯಾಗ್ನೇಟ್ ಯೋಜನೆ ಹೆಸರಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವುದನ್ನು ವಿರೋಧಿಸಿ ನ್ಯಾಮತಿ ತಾಲೂಕಿನ ಸಾಲಬಾಳು ಮತ್ತು ಸೋಗಿಲು ಗ್ರಾಮಗಳಲ್ಲಿ ಸೋಮವಾರ ಎಐಡಿಎಸ್ಒ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

- ಎಐಡಿಎಸ್ಒ ನೇತೃತ್ವದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದ ಪೋಷಕರು

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ/ ನ್ಯಾಮತಿ

ಕೆಪಿಎಸ್ ಮ್ಯಾಗ್ನೇಟ್ ಯೋಜನೆ ಹೆಸರಲ್ಲಿ ಸರ್ಕಾರಿ ಶಾಲೆಗಳ ಮುಚ್ಚುವುದನ್ನು ವಿರೋಧಿಸಿ ನ್ಯಾಮತಿ ತಾಲೂಕಿನ ಸಾಲಬಾಳು ಮತ್ತು ಸೋಗಿಲು ಗ್ರಾಮಗಳಲ್ಲಿ ಸೋಮವಾರ ಎಐಡಿಎಸ್ಒ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಎಐಡಿಎಸ್ಒ ಜಿಲ್ಲಾಧ್ಯಕ್ಷೆ ಪೂಜಾ ನಂದಿಹಳ್ಳಿ ಮಾತನಾಡಿ, ಹೊನ್ನಾಳಿ ತಾಲೂಕಿನಲ್ಲಿ 39 ಕೆಪಿಎಸ್ ಶಾಲೆ ಯೋಜನೆ ನಡೆದಿದ್ದು, 5 ಕಿ.ಮೀ. ವ್ಯಾಪ್ತಿಯ ಒಟ್ಟು 160 ಶಾಲೆಗಳ ವಿಲೀನದ ಪಟ್ಟಿ ಸಿದ್ಧವಾಗಿದೆ. ಮೊದಲ ಹಂತದಲ್ಲಿ ಸವಳಂಗ, ಯರೇಚಿಕ್ಕನಹಳ್ಳಿ, ಅರಬಗಟ್ಟೆ, ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲು ಸಿದ್ಧತೆ ನಡದಿದೆ. ದ್ವಿಭಾಷಾ ನೀತಿಯ ಹೆಸರಿನಲ್ಲಿ ಕನ್ನಡ ಕಗ್ಗೊಲೆಯಾಗುತ್ತಿದೆ. ಕೇವಲ 5 ದಿನಗಳ ರಬೇತಿ ನೀಡಿ ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ ಮಾಡಲು ಹೇಗೆ ಸಾಧ್ಯ? ಮಕ್ಕಳ ಮಾತೃಭಾಷೆಯ ಹಕ್ಕನ್ನು ಕಸಿದುಕೊಳ್ಳುವ ಹುನ್ನಾರ ನಡೆಯುತ್ತಿದೆ ಎಂದು ಟೀಕಿಸಿದರು.

ಸಾಲಬಾಳು ಗ್ರಾಮದ ಬಂಜಾರ ಯುವ ಸಂಘಟನೆ ತಾಲೂಕು ಅಧ್ಯಕ್ಷ ಮಂಜಾನಾಯ್ಕ ಮಾತನಾಡಿ, ನಮ್ಮೂರ ಶಾಲೆ ಮುಚ್ಚಲು ಬಿಡಬಾರದು. ಒಂದು ವರ್ಷದ ಹಿಂದೆ ಹೋರಾಟ ಮಾಡಿ ಶಿಥಿಲಾವಸ್ಥೆಯ ಶಾಲೆಯನ್ನು ಕೆಡವಿ ಹೊಸ ಕಟ್ಟಡ ನಿರ್ಮಿಸಿಕೊಂಡಿದ್ದೇವೆ. ಈ ಜಾಗವನ್ನು ಅನ್ಯ ಚಟುವಟಿಕೆಗಳಿಗೆ ಬಳಸಲು ಬಿಟ್ಟುಕೊಡುವುದಿಲ್ಲ ಎಂದರು.

ಚಟ್ನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ತಾತ್ಯನಾಯ್ಕ ಮಾತನಾಡಿ, ಎಲ್ಲ ಶಾಸಕರು, ಸಂಸದರ ಖಾಸಗಿ ಶಾಲೆಗಳಿಗೆ ಸರ್ಕಾರ ಮೊದಲು ಕಡಿವಾಣ ಹಾಕಲಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರುದ್ರೇಶ್ ನಾಯ್ಕ, ಎಸ್.ಕೆ.ಕುಮಾರ ನಾಯ್ಕ, ದೇವೇಂದ್ರ ನಾಯ್ಕ ನಾಗು ಜಿ. ನಾಯ್ಕ, ಸೋಗಿಲು ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಬೋವಿ, ಟಿ.ಜಿ.ಹರೀಶ್, ಅಣ್ಣಪ್ಪ, ಎಚ್.ರಮೇಶ್, ರಾಮಾ ನಾಯ್ಕ, ಶಿವಪ್ಪ, ಮಾರುತಿ ಇತರರು ಪಾಲ್ಗೋಂಡಿದ್ದರು.

- - -

(ಟಾಪ್‌ ಕೋಟ್‌) ಶಿಕ್ಷಣ ಸಚಿವರು, ಒಂದೇ ಮಗುವಿದ್ದರೂ ಶಾಲೆಯನ್ನು ಮುಚ್ಚುವುದಿಲ್ಲ, ನನ್ನ ರಕ್ತದಲ್ಲಿ ಕನ್ನಡ ಇದೆ, ಶಾಲೆ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಲೇ ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ.

- ಮಂಜುನಾಥ ಕುಕ್ಕವಾಡ, ಉಪಾಧ್ಯಕ್ಷ, ಜಿಲ್ಲಾ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ.

- - -

-9ಎಚ್.ಎಲ್.ಐ1:

ಕೆಪಿಎಸ್ ಮ್ಯಾಗ್ನೇಟ್ ಯೋಜನೆ ಹೆಸರಲ್ಲಿ ಶಾಲೆ ಮುಚ್ಚುವುದನ್ನು ವಿರೋಧಿಸಿ ಸೋಗಿಲು ಗ್ರಾಮಸ್ಥರು ಎಐಡಿಎಸ್ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.