ಸಾರಾಂಶ
ಸೇವೆ ಎಂಬ ಪದವೇ ನಿಸ್ವಾರ್ಥ ದಯೆ ಎಂಬ ಪದವೇ ಪರಮಾರ್ಥ ಇದನ್ನು ಮನಗೊಂಡು ಪ್ರತಿಯೊಬ್ಬರು ಬಡ ವಿದ್ಯಾರ್ಥಿಗಳ ನೆರವಿಗೆ ದಾವಿಸೋಣ, ಪುಟ್ಟ ಕಲಾವಿದರಾಗಿ ಅದರಲ್ಲಿ ಬಳಗವನ್ನು ಕಟ್ಟಿ ನಮ್ಮ ಕೈಲಾದ ಸೇವೆಗಳನ್ನು ಮಾಡುತ್ತ 20 ಸರ್ಕಾರಿ ಶಾಲೆ ಮಕ್ಕಳಿಗೆ ಶಾಲೆಗೆ ಉಪಯುಕ್ತವಾದ ಡೈರಿ ಶಿಕ್ಷಣ ಕಲಿಸಿದ ಗುರುಗಳಿಗೆ ಹಾಗೂ ಮಕ್ಕಳಿಗೆ ಬಿಸಿ ಊಟ ನೀಡುತ್ತಿರುವ ಸಹಾಯಕರಿಗೆ ಸೇವಾ ಪ್ರಶಸ್ತಿ ಹಾಗೂ ಮಕ್ಕಳಿಗೆ ವಿದ್ಯಾ ಸಾಮಾಗ್ರಿ ವಿತರಣ ಮಾಡಲಾಗಿದೆ ಇದು 100 ಶಾಲೆಗೆ ನೀಡುವ ಉದ್ದೇಶ ನಮ್ಮ ಬಳಗದ ವತಿಯಿಂದ ನಡೆಸಲಾಗುತ್ತಿದೆ, ಪ್ರತಿಯೊಬ್ಬರು ಇಂತಹ ಸೇವಾ ಕಾರ್ಯದಲ್ಲಿ ತೋಡಗಿಸಿಕೋಳ್ಳಬೇಕು,
ಕನ್ನಡಪ್ರಭ ವಾರ್ತೆ ಸರಗೂರು
ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಿ ಎಂದು ಆರ್ಯಭಟ ಪ್ರಶಸ್ತಿ ಪುರಸ್ಕೃತ ರವಿ ಸಂತು ಕರೆ ನೀಡಿದರು.ತಾಲೂಕಿನ ಆಗತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಸಹಯೋಗದೊಂದಿಗೆ ರವಿಸಂತು ಬಳಗದ ಪರವಾಗಿ ಸೇವಾರತ್ನ ಪ್ರಶಸ್ತಿ ಮತ್ತು ಮಕ್ಕಳಿಗೆ ವಿದ್ಯಾ ಸಾಮಗ್ರಿ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಸೇವೆ ಎಂಬ ಪದವೇ ನಿಸ್ವಾರ್ಥ ದಯೆ ಎಂಬ ಪದವೇ ಪರಮಾರ್ಥ ಇದನ್ನು ಮನಗೊಂಡು ಪ್ರತಿಯೊಬ್ಬರು ಬಡ ವಿದ್ಯಾರ್ಥಿಗಳ ನೆರವಿಗೆ ದಾವಿಸೋಣ, ಪುಟ್ಟ ಕಲಾವಿದರಾಗಿ ಅದರಲ್ಲಿ ಬಳಗವನ್ನು ಕಟ್ಟಿ ನಮ್ಮ ಕೈಲಾದ ಸೇವೆಗಳನ್ನು ಮಾಡುತ್ತ 20 ಸರ್ಕಾರಿ ಶಾಲೆ ಮಕ್ಕಳಿಗೆ ಶಾಲೆಗೆ ಉಪಯುಕ್ತವಾದ ಡೈರಿ ಶಿಕ್ಷಣ ಕಲಿಸಿದ ಗುರುಗಳಿಗೆ ಹಾಗೂ ಮಕ್ಕಳಿಗೆ ಬಿಸಿ ಊಟ ನೀಡುತ್ತಿರುವ ಸಹಾಯಕರಿಗೆ ಸೇವಾ ಪ್ರಶಸ್ತಿ ಹಾಗೂ ಮಕ್ಕಳಿಗೆ ವಿದ್ಯಾ ಸಾಮಾಗ್ರಿ ವಿತರಣ ಮಾಡಲಾಗಿದೆ ಇದು 100 ಶಾಲೆಗೆ ನೀಡುವ ಉದ್ದೇಶ ನಮ್ಮ ಬಳಗದ ವತಿಯಿಂದ ನಡೆಸಲಾಗುತ್ತಿದೆ, ಪ್ರತಿಯೊಬ್ಬರು ಇಂತಹ ಸೇವಾ ಕಾರ್ಯದಲ್ಲಿ ತೋಡಗಿಸಿಕೋಳ್ಳಬೇಕು, ಇದೇ ಊರಿನ ಈಶಾಲೆಯಲ್ಲೇ ಶಿಕ್ಷಣ ಕಲಿತ ಜವರನಾಕ ಪಿ. ರಾಜ್ಯ ಪ್ರಶಸ್ತಿ ಪುರಸ್ಕೃ ಪ್ರಶಸ್ತಿ ಪಡೆದಿದ್ದಾರೆ, ಇವರ ನಿರ್ದೆಶನದಂತೆ ಈಶಾಲೆಗೆ ನೆರವು ನೀಡಲು ತಿಳಿಸಿದರು ಅವರಿಗೂ ನಮ್ಮ ಬಳಗದವತಿಯಿಂದ ಅಭಿನಂದನೆ ಎಂದರು,ಶಾಲಾ ಮುಖ್ಯ ಶಿಕ್ಷಕಾರ ಸಿದ್ದರಾಜು ಮಾತನಾಡಿ, ಸರ್ಕಾರಿ ಶಾಲೆಗಳ ಮಕ್ಕಳ ನೆರವಿಗೆ ಪ್ರತಿಯೊಬ್ಬರು ಧಾವಿಸಿ ನಿಮ್ಮ ಕೈಲಾದ ಸೇವೆ ಮಾಡುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಲು ಮುಂದಾಗಿ, ಗ್ರಾಮೀಣ ಭಾಗದ ಕಾಡಂಚಿನ ಪ್ರದೇಶದ ಸರ್ಕಾರಿ ಶಾಲೆಯನ್ನು ಗಮನಿಸಿ ಇಲ್ಲಿ ಶಿಕ್ಷಕ ವೃಂದಕ್ಕೆ ಹಾಗೂ ಮಕ್ಕಳಿಗೆ ರೋಟರಿ ಸಹಯೋಗದೊಂದಿಗೆ ರವಿಸಂತು ಬಳಗದ ಪರವಾಗಿ ಸೇವಾರತ್ನ ಪ್ರಶಸ್ತಿ ಮತ್ತು ಮಕ್ಕಳಿಗೆ ವಿದ್ಯಾ ಸಾಮಾಗ್ರಿ ವಿತರಣೆ ಮಾಡುತ್ತಿರುವುದು ಶ್ಲಾಘನೀಯವಾದದು ಎಂದು ತಿಳಿಸಿದರು.
ಪಿ. ಜವರನಾಯಕ, ರವಿಸಂತು ಬಳಗದ ಕಲಾವಿದರಾದ ಸಿಂಚನ, ಶ್ರೀಕಂಠ, ಮಮತಾ, ಶ್ರುತಿ, ಪದ್ಮ, ಕಿರಣ್, ರವಿ ಹಂಸಲೇಖ, ಭವ್ಯ, ಪ್ರವೀಣ್, ಶ್ರೀನಿವಾಸ್, ಲೋಕೇಶ್, ಚಂದ್ರು, ಮಹೇಶ್, ಜಾನಪದ ಕೃಷ್ಣಪ್ಪ, ಚೇತನ್, ಕವಿಸೂರಿ ಸಾಗರೆ, ಗ್ರಾಪಂ ಸದಸ್ಯ ಮಹದೇವನಾಯಕ, ಮಾಜಿ ಸದಸ್ಯ ಜವರನಾಯಕ, ಮುಖಂಡರಾದ ತಿಮ್ಮನಾಯಕ, ವೈಕುಂಠನಾಯಕ, ಲಕ್ಷ್ಮಣ, ವೆಂಕಟನಾಯಕ, ಜವರೇಗೌಡ, ರಾಜೇಶ್, ಶಾಲಾ ಶಿಕ್ಷಕರಾದ ಸಿ. ಶಿವಣ್ಣ, ಬಂಗಾರಯ್ಯ, ಕುಮಾರಿ, ಜಯರಾಮ್, ಅರುಣ್ ಕುಮಾರಿ, ಅರುಣಾಕ್ಷಿ, ರೀಟಾ, ಚನ್ನಮ್ಮ, ಚಿಕ್ಕಮ್ಮ, ಮಂಜುಳ, ಶಾಲಾ ಮಕ್ಕಳು ಗ್ರಾಮಸ್ಥರು ಇದ್ದರು.