ಸಾರಾಂಶ
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಸ್ವಂತ ತವರು ತಾಲೂಕಿನಲ್ಲಿಯೇ ಸರ್ಕಾರಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕು ನಿವೃತ್ತಿಯಾಗುವ ಕ್ಷಣ ಒದಗಿಬಂದಿರುವುದು ನನ್ನ ಪೂರ್ವಜನ್ಮದ ಪುಣ್ಯ ಮತ್ತು ಸೌಭಾಗ್ಯ ಎನಿಸುತ್ತದೆ. ಇಲ್ಲಿನ ಸೇವೆ ಆತ್ಮತೃಪ್ತಿ ತಂದಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗದ ನಿವೃತ್ತ ಎಇಇ ವಿಜಯ ಮಿಶ್ರೀಕೋಟಿ ಹೇಳಿದರು.ಇಲ್ಲಿನ ತಾಲೂಕು ಪಂಚಾಯತಿ ಸಭಾಭವನದಲ್ಲಿ ಸರ್ಕಾರಿ ಸೇವೆಯಿಂದ ವಯೋನಿವೃತ್ತಿ ಹೊಂದಿದ ಪ್ರಯುಕ್ತ ತಮಗೆ ಏರ್ಪಡಿಸಿದ ಬೀಳ್ಕೋಡುವ ಸಮಾರಂಭದಲ್ಲಿ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಗೊಳಿಸಲಾಗಿದೆ. ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಆಡಳಿತ ಮಂಡಳಿ, ಜನಪ್ರತಿನಿಧಿಗಳು ಸೇರಿದಂತೆ ಹುಕ್ಕೇರಿ ತಾಲೂಕಿನ ಸಾರ್ವಜನಿಕರು ಸಾಕಷ್ಟು ಸಹಕಾರ ನೀಡಿರುವುದನ್ನು ನೆನೆದು ಕೆಲಕಾಲ ಭಾವುಕರಾದರು.
ಬೆಳಗಾವಿ ಪಿಆರ್‌ಇ ಇಇ ಆನಂದ ಬಣಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಿಆರ್‌ಇ ಎಇಇ ಎಂ.ಎಸ್.ಬಿರಾದಾರ ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್.ಮಲ್ಲಾಡದ ಮಾತನಾಡಿ ಮಿಶ್ರೀಕೋಟಿ ಅವರ ಕಾರ್ಯ ಸಾಧನೆಗಳ ಬಗ್ಗೆ ಶ್ಲಾಘಿಸಿ ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದರು.ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷ ದಸ್ತಗೀರ ಬಸ್ಸಾಪುರೆ, ಕಸಾಪ ಅಧ್ಯಕ್ಷ ಪ್ರಕಾಶ ಅವಲಕ್ಕಿ, ಪ್ರಭಾರಿ ಎಇಇ ರಾಜೇಂದ್ರ ಜಾಧವ, ನಿವೃತ್ತ ಅಧಿಕಾರಿ ಎ.ಬಿ.ಪಟ್ಟಣಶೆಟ್ಟಿ, ಅಭಿಯಂತರರಾದ ಬಿ.ಡಿ.ನಾಯಿಕವಾಡಿ, ಚೇತನ ಕಡಕೋಳ, ಸಂತೋಷ ಪಾಟೀಲ, ವಿಕಾಸ ಸವನೂರೆ, ಈರಪ್ಪ ಪಾಟೀಲ, ಗುತ್ತಿಗೆದಾರರಾದ ರವಿಂದ್ರ ಜಿಂಡ್ರಾಳಿ, ಈರಣ್ಣ ಬಿಸಿರೊಟ್ಟಿ, ರತ್ನಾಕರ ಬೋನಿ, ಮಾರ್ತಂಡ ಗೋಟೂರಿ, ಸಂಜಯ ಕಂಠಿ, ಡಿ.ಆರ್.ಪಿಡಾಯಿ, ಅಶೋಕ ತಳವಾರ, ಅಕ್ಷಯ ವೀರಮುಖ, ಅಡಿವೆಪ್ಪ ಕರೆನ್ನವರ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಎಸ್.ಎಸ್.ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾಹಿತಿ ಲೀಲಾ ರಜಪೂತ ನಿರೂಪಿಸಿದರು. ದೀಪಕ ಕುಲಕರ್ಣಿ ಪರಿಚಯಿಸಿದರು. ನಾಗಯ್ಯ ಹಿರೇಮಠ ವಂದಿಸಿದರು. ಇದೇ ವೇಳೆ ವಿಜಯ ಮತ್ತು ರೂಪಾ ಮಿಶ್ರೀಕೋಟಿ ದಂಪತಿಯನ್ನು ವಿವಿಧ ಇಲಾಖೆ ಅಧಿಕಾರಿಗಳು, ವೃಂದ ನೌಕರರು, ಗುತ್ತಿಗೆದಾರರು ಹಾಗೂ ಸಾರ್ವಜನಿಕರು ಸನ್ಮಾನಿಸಿ ಗೌರವಿಸಿದರು.-----------
ಸ್ವಂತ ತವರು ತಾಲೂಕಿನಲ್ಲಿಯೇ ಸರ್ಕಾರಿ ಸೇವೆ ಸಲ್ಲಿಸುವ ಅವಕಾಶ ಸಿಕ್ಕು ನಿವೃತ್ತಿಯಾಗುವ ಕ್ಷಣ ಒದಗಿಬಂದಿರುವುದು ನನ್ನ ಪೂರ್ವಜನ್ಮದ ಪುಣ್ಯ ಮತ್ತು ಸೌಭಾಗ್ಯ ಎನಿಸುತ್ತದೆ. ಇಲ್ಲಿನ ಸೇವೆ ಆತ್ಮತೃಪ್ತಿ ತಂದಿದೆ.-ವಿಜಯ ಮಿಶ್ರೀಕೋಟಿ, ನಿವೃತ್ತ ಎಇಇ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಉಪವಿಭಾಗ.
----------------------ಸರ್ಕಾರಿ ಸೇವೆಯಲ್ಲಿ ಬಡ್ತಿ, ವರ್ಗಾವಣೆ ಸಹಜ ಪ್ರಕ್ರಿಯೆಯಾಗಿದೆ. ಹಾಗೆಯೇ ನಿವೃತ್ತಿ ಕೂಡ ಹೊಂದಲೇಬೇಕು. ಅದರಂತೆ ಮಿಶ್ರೀಕೋಟಿ ನಿವೃತ್ತಿ ಜೀವನ ಸುಖಕರವಾಗಿರಲಿ. ಎಲ್ಲರೊಂದಿಗೆ ಬೆರೆಯುವ ಗುಣ, ಸಮಯಪ್ರಜ್ಞೆಯನ್ನು ಮಿಶ್ರೀಕೋಟಿ ಅವರಿಂದ ಕಲಿತುಕೊಳ್ಳಬೇಕು.
-ಆನಂದ ಬಣಗಾರ, ಬೆಳಗಾವಿ ಪಿಆರ್‌ಇ ಇಇ.---------------
ಶಿಸ್ತು, ಯೋಜನಾಬದ್ಧ ಆಡಳಿತದಿಂದ ಮಿಶ್ರೀಕೋಟಿ ವೃತ್ತಿಯಲ್ಲಿ ನೈಪುಣ್ಯತೆ ಹೊಂದಿ ಮಾದರಿ ಅಧಿಕಾರಿಯಾಗಿ ಹೊರಹೊಮ್ಮಿದ್ದಾರೆ. ಅವರು ಮಾಡಿರುವ ವಿವಿಧ ಅಭಿವೃದ್ಧಿ ಕೆಲಸಗಳು ಅಚ್ಚಳಿಯದೇ ಉಳಿದಿದ್ದು ಛಲಬಿಡದೇ ತಿವಿಕ್ರಮನಂತೆ ಅನೇಕ ಕೆಲಸಗಳನ್ನು ಸಾಧಿಸಿ ತೋರಿದ ಮಿಶ್ರೀಕೋಟಿ ಉತ್ತಮ ಒಡನಾಡಿ, ಅಚ್ಚುಮೆಚ್ಚಿನ ಅಧಿಕಾರಿ.-ಎಂ.ಎಸ್.ಬಿರಾದಾರ ಪಾಟೀಲ, ಪಿಆರ್‌ಇ ಎಇಇ.
------------------ಯಶಸ್ವಿ ಮತ್ತು ಪರಿಣಾಮಕಾರಿ ಕೆಲಸದಿಂದ ಮಿಶ್ರೀಕೋಟಿ ಯುವ ನೌಕರರು ಮತ್ತು ಸಿಬ್ಬಂದಿಗಳಿಗೆ ಆದರ್ಶರಾಗಿದ್ದಾರೆ. ಸರಳ, ಸಜ್ಜನ, ಸೌಮ್ಯ ಸ್ವಭಾವದ ಅವರ ಗುಣಲಕ್ಷಣಗಳು ಮೆಚ್ಚುವಂಥದ್ದಾಗಿದೆ.
-ಟಿ.ಆರ್.ಮಲ್ಲಾಡದ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ.