ನೀನು ನಿರಂತರವಾಗಿ ಅಭ್ಯಾಸ ಮಾಡಿದರೆ ಒಳ್ಳೆಯ ಗಾಯಕನಾಗುತ್ತೀಯೇ ಎಂದು ನನ್ನ ಹಾಡಿಗೆ ಪ್ರೋತ್ಸಾಹಿಸಿದ ದಿನಗಳು ಹಾಗೂ ಪ್ರಸಿದ್ಧ ಕರೀಘಟ್ಟದ ಪ್ರಕೃತಿ ವೀಕ್ಷಣೆಗೆ ಬರುತ್ತೇನೆ ಎಂದು ಆಸೆ ವ್ಯಕ್ತಪಡಿಸಿದ್ದರು. ಅವರ ಅನಾರೋಗ್ಯದ ಕಾರಣ ಅವರನ್ನು ಮತ್ತೆ ಭೇಟಿಯಾಗದೆ ಅವರೊಂದಿಗೆ ಕಳೆದಿದ್ದ ಆ ಸುಧೀನಗಳನ್ನು ಎಂದಿಗೂ ಮರೆಯಲಾರೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಚಿತ್ರರಂಗದ ಗಾನ ಸರಸ್ವತಿ ಎಸ್.ಜಾನಕಮ್ಮರ ನಿಧನಕ್ಕೆ ರಾಜ್ಯ ಪ್ರಶಸ್ತಿ ವಿಜೇತ ಪರಿಸರ ರಮೇಶ್ ನಮನ ಸಲ್ಲಿಸಿ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಗಳಿಗೆಯನ್ನು ಸ್ಮರಿಸಿದ್ದಾರೆ.ಕಳೆದ 60 ವರ್ಷಗಳಿಂದ ಕಲಾ ಸೇವೆಯಲ್ಲಿ ಎಲ್ಲರಿಗೂ ಸರಸ್ವತಿಯಂತೆ ತನ್ನ ಗಾನ ಸುಧೆ ಹರಿಸಿದ ಎಸ್.ಜಾನಕಮ್ಮ ಅವರೊಂದಿಗೆ ಇತ್ತೀಚೆಗೆ 2021ರಲ್ಲಿ ಸುಮಾರು ಒಂದುವರೆ ವರ್ಷಗಳ ಕಾಲ ತಾಲೂಕಿನ ಚಿಕ್ಕಂಕನಹಳ್ಳಿತೋಟದ ತೊಟ್ಟಿ ಮನೆಯೊಂದರಲ್ಲಿ ಅವರ ಮಗ ಮುರುಳಿ ಕೃಷ್ಣ ಅವರೊಂದಿಗೆ ವಾಸವಿದ್ದರು. ಅವರನ್ನು ನಾನು ಭೇಟಿ ಮಾಡಿ ಅರ್ಧ ದಿನ ಕಳೆದಿದ್ದು ಇನ್ನು ನೆನಪು ಮಾತ್ರ. ಅಲ್ಲದೇ, ನನ್ನಿಂದ ಅವರೇ ಹಾಡಿದ ಗೀತೆಗಳನ್ನು ಹಾಡಿಸಿ ಕೇಳಿ ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು.
ನೀನು ನಿರಂತರವಾಗಿ ಅಭ್ಯಾಸ ಮಾಡಿದರೆ ಒಳ್ಳೆಯ ಗಾಯಕನಾಗುತ್ತೀಯೇ ಎಂದು ನನ್ನ ಹಾಡಿಗೆ ಪ್ರೋತ್ಸಾಹಿಸಿದ ದಿನಗಳು ಹಾಗೂ ಪ್ರಸಿದ್ಧ ಕರೀಘಟ್ಟದ ಪ್ರಕೃತಿ ವೀಕ್ಷಣೆಗೆ ಬರುತ್ತೇನೆ ಎಂದು ಆಸೆ ವ್ಯಕ್ತಪಡಿಸಿದ್ದರು. ಅವರ ಅನಾರೋಗ್ಯದ ಕಾರಣ ಅವರನ್ನು ಮತ್ತೆ ಭೇಟಿಯಾಗದೆ ಅವರೊಂದಿಗೆ ಕಳೆದಿದ್ದ ಆ ಸುಧೀನಗಳನ್ನು ಎಂದಿಗೂ ಮರೆಯಲಾರೆ ಎಂದು ರಮೇಶ್ ಹೇಳಿದ್ದಾರೆ.ಗಾನ ಸರಸ್ವತಿ ಎಸ್.ಜಾನಕಮ್ಮ ಕೊನೆ ದಿನಗಳನ್ನು ಮೈಸೂರಿನಲ್ಲಿ ಕಳೆದಿದ್ದಾರೆ. ಇಲ್ಲಿನ ಮಣ್ಣಿಗೆ ತನ್ನ ಶರೀರವನ್ನು ನೀಡಿರುವುದು ಕನ್ನಡಿಗರಿಗೆ ಹೆಮ್ಮೆ ಎನಿಸುತ್ತಿದೆ. ನಮ್ಮ ಮೈಸೂರಿನ ಮಣ್ಣಿನಲ್ಲಿ ಲೀನವಾಗಿರುವ ಜಾನಕಮ್ಮರ ನೆನಪಿನಾರ್ಥ ಸರ್ಕಾರ ಸ್ಮಾರಕ ನಿರ್ಮಿಸಿ ಸಂಗೀತ ಪ್ರೇಮಿಗಳಿಗೆ ನೀಡಿದರೆ, ಅವರ ಸಂಗೀತದ ಸುದೆಗೆ ಇನ್ನಷ್ಟು ಗೌರವ ನೀಡಿದಂತಾಗುತ್ತದೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಗ್ರಾಪಂ ಆಡಳಿತ ನಿರ್ಲಕ್ಷ್ಯ: ಇಂಡುವಾಳು ಗ್ರಾಮದಲ್ಲಿ ಮೂಲ ಸೌಲಭ್ಯದ ಕೊರತೆ ಆಕ್ರೋಶಮಂಡ್ಯ:ತಾಲೂಕಿನ ಇಂಡುವಾಳು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರು, ನೈರ್ಮಲ್ಯದ ಸಮಸ್ಯೆ ಕಾಡುತ್ತಿದ್ದು, ಗ್ರಾಮಸ್ಥರು ಪರದಾಡುವಂತಾಗಿದೆ. ಪಂಚಾಯ್ತಿ ಆಡಳಿತ ಅಭಿವೃದ್ಧಿ ಅಧಿಕಾರಿ ಕೈಯಲ್ಲಿದ್ದರೂ ಗ್ರಾಮದ ಸ್ವಚ್ಛತೆ ಇಲ್ಲವಾಗಿದೆ. ಮೂಲ ಸೌಲಭ್ಯ ನಿರ್ವಹಣೆ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಹಲವು ರಸ್ತೆಗಳಲ್ಲಿ ಚರಂಡಿ ಇಲ್ಲ. ಕೊಳಚೆ ನೀರು ಮಣ್ಣಿನ ರಸ್ತೆಯಲ್ಲೇ ಹರಿಯುತ್ತಿದೆ. ಇದರಿಂದ ಸೊಳ್ಳೆಗಳ ಕಾಟ ತೀವ್ರವಾಗಿದೆ. ಮಾತ್ರವಲ್ಲ ಕೆಲವು ಕಡೆ ಗಬ್ಬು ವಾಸನೆಯಿಂದಾಗಿ ಮೂಗುಮುಚ್ಚಿ ತಿರುಗಾಡಬೇಕಾದ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದ್ದಾರೆ.ಮತ್ತೆ ಹಲವು ರಸ್ತೆಗಳಲ್ಲಿ ಬೇಲಿಗಳ ಮೇಲೆ ಗಿಡಗಂಟಿಗಳು ಬೆಳೆದಿದೆ. ವಿದ್ಯುತ್ ತಂತಿಗಳಿಗೂ ಹಬ್ಬಿಕೊಂಡು ಅಪಾಯ ಆಹ್ವಾನಿಸುತ್ತಿದೆ. ತಿಪ್ಪೆಗುಂಡಿಗಳು ಎಲ್ಲೆಂದರಲ್ಲಿ ಕಸ ಎರಚಾಡುತ್ತಿವೆ. ಗ್ರಾಮದ ಎರಡು ಶುದ್ಧ ಕುಡಿಯುವ ನೀರಿನ ಘಟಕಗಳೂ ಕೆಟ್ಟು ನಿಂತು ಗ್ರಾಮಸ್ಥರು ಶುದ್ಧ ಕುಡಿಯುವ ನೀರಿಗಾಗಿ ದೂರದ ಕಲ್ಲಹಳ್ಳಿಗೆ ಎಡತಾಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.ದೇವರಾಜ ಬಡಾವಣೆಯ ನೀರಿನ ಘಟಕ ಕೆಟ್ಟು ಪಾಳು ಬಿದ್ದು ವರ್ಷಗಳೇ ಕಳೆದರೂ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಜನಪ್ರತಿನಿಧಿಗಳಿಲ್ಲದ ಗ್ರಾಪಂ ಆಡಳಿತವನ್ನು ಹೇಳುವವರು ಕೇಳುವವರಿಲ್ಲದಂತಾಗಿದೆ ಎಂದು ಗ್ರಾಮಸ್ಥರಾದ ರೈತ ಮುಖಂಡ ಈ.ಬಸವರಾಜು, ಸಿದ್ದೇಗೌಡ, ವಿಜಯಕುಮಾರ್ ಸೇರಿದಂತೆ ಹಲವರು ಆಕ್ರೋಶ ಹೊರ ಹಾಕಿದ್ದಾರೆ.