ಸಾರಾಂಶ
ಶ್ರೀರಂಗಪಟ್ಟಣ: ಎಲ್ಲ ವರ್ಗದ ಮಕ್ಕಳಿಗೂ ಉನ್ನತ ಶಿಕ್ಷಣ ಉಚಿತವಾಗಿ ಸಿಗುವಂತೆ ರಾಜ್ಯ ಸರ್ಕಾರ ಶಿಕ್ಷಣ ಗ್ಯಾರಂಟಿ ಯೋಜನೆ ಜಾರಿಗೆ ತರಬೇಕು ಎಂದು ಬಿಜೆಪಿ ಮುಖಂಡ ಇಂಡುವಾಳು ಸಚ್ಚಿದಾನಂದ ಆಗ್ರಹಿಸಿದರು.
2025ನೇ ಸಾಲಿನಲ್ಲಿ ಎಂಬಿಬಿಎಸ್ ಕೋರ್ಸ್ ಗೆ ಉಚಿತ ಪ್ರವೇಶ ಪಡೆದಿರುವ ಸತೀಶ್ ಅವರ ಪುತ್ರ ಸ್ಕಂದರಿಗೆ ಗುರುವಾರ ಪಟ್ಟಣದಲ್ಲಿ ಎನ್. ಶಂಕರೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.ಇತ್ತೀಚಿನ ವರ್ಷಗಳಲ್ಲಿ ಬಡ ಮಕ್ಕಳು ಉತ್ತಮ ಶಿಕ್ಷಣ ಪಡೆಯುವುದು ದುಬಾರಿಯಾಗಿದೆ. ಪೋಷಕರು ಲಕ್ಷಗಟ್ಟಲೆ ಹಣ ಖರ್ಚು ಮಾಡುತ್ತಿದ್ದಾರೆ. ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ಸಾಲ ಮಾಡಿರುವ ಉದಾಹರಣೆಗಳೂ ಇವೆ. ಈ ಹೊರೆ ತಗ್ಗಿಸಬೇಕಾದರೆ ಸರ್ಕಾರ ಪ್ರಾಥಮಿಕ ಹಂತದಿಂದ ಸ್ನಾತಕೋತ್ತರ ಶಿಕ್ಷಣದವರೆಗೆ ಉಚಿತ ಶಿಕ್ಷಣ ಸಿಗುವಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಒತ್ತಾಯಿಸಿದರು.
ಕೌಶಲ್ಯ ಆಧಾರಿತ ಶಿಕ್ಷಣ ವ್ಯವಸ್ಥೆ ಜಾರಿಯಾಗಬೇಕು. ಉದ್ಯೋಗ ಗ್ಯಾರಂಟಿ ನೀಡುವ ಮೂಲಕ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಬೇಕು. ಬಡ ಮಕ್ಕಳ ಸಾಧನೆಗೆ ನೆರವಾಗಬೇಕು ಎಂದು ಹೇಳಿದರು.ಬಳಿಕ ಪಟ್ಟಣದ ಲಕ್ಷ್ಮೀದೇವಿ ಯುವಕರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಗಣಪತಿ ಪೂಜಾ ಮಹೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ.ಇ.ಸುಧಾಕರ್, ಪುರಸಭೆ ಸದಸ್ಯರಾದ ಗಂಜಾಂ ಶಿವು, ಕೃಷ್ಣಪ್ಪ, ಎಸ್.ಟಿ.ರಾಜು, ಎಂ.ಶ್ರೀನಿವಾಸ್, ಎಸ್.ಪ್ರಕಾಶ್, ಮಾಜಿ ಸದಸ್ಯರಾದ ವಿಶ್ವನಾಥ್, ಎಚ್.ಎಸ್.ಪುಟ್ಟರಾಮು, ಮುಖಂಡರಾದ ಉಮೇಶ್ ಕುಮಾರ್, ಎಂ.ಜೆ.ಪುಟ್ಟರಾಜು, ಪ್ರಭಾಕರ್, ಎಸ್.ರಘು, ವೆಂಕಟೇಶ್, ಸುಭಾಷ್, ಶಿವು, ಹರ್ಷ, ಪ್ರೇಮ್, ಸನತ್, ಶಂಕರ್, ಮದನ್, ಚೇತನ್, ಧನಂಜಯ, ದಿವಾಕರ್, ಅಭಿಜಿತ್, ಆನಂದ್, ಭೈರವ, ಪವನ್, ವಾಸು, ರವಿ ಇತರರು ಹಾಜರಿದ್ದರು.