ಕನ್ನಡಪ್ರಭ ವಾರ್ತೆ ಕಾಗವಾಡ ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಕೇಂದ್ರದಲ್ಲಿ ಹಿಂದೆ ಇದ್ದ ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಸಹಕಾರ ಸಂಘಗಳು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಅರ್ಧನಾರೇಶ್ವರ ಎಂಬ ಸಮಿತಿ ರಚಿಸಿ, ಅದಕ್ಕೆ ಅರ್ಧನಾರೇಶ್ವರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದರು. ಹೀಗಾಗಿ, ಸಹಕಾರ ಕ್ಷೇತ್ರಗಳು ಅಭಿವೃದ್ಧಿಯಾಗಿ ದೇಶಕ್ಕೆ ಮಾದರಿಯಾಗಿವೆ ಎಂದು ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಸಹಕಾರ ಕ್ಷೇತ್ರದಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು ಎಂದು ಕೇಂದ್ರದಲ್ಲಿ ಹಿಂದೆ ಇದ್ದ ಆರ್ಥಿಕ ತಜ್ಞ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಮಂತ್ರಿಯಾಗಿದ್ದಾಗ ಸಹಕಾರ ಸಂಘಗಳು ಸ್ವಾವಲಂಬಿಗಳಾಗಬೇಕು ಎಂಬ ಉದ್ದೇಶದಿಂದ ಅರ್ಧನಾರೇಶ್ವರ ಎಂಬ ಸಮಿತಿ ರಚಿಸಿ, ಅದಕ್ಕೆ ಅರ್ಧನಾರೇಶ್ವರ ಅವರನ್ನೇ ಅಧ್ಯಕ್ಷರನ್ನಾಗಿ ಮಾಡಿದ್ದರು. ಹೀಗಾಗಿ, ಸಹಕಾರ ಕ್ಷೇತ್ರಗಳು ಅಭಿವೃದ್ಧಿಯಾಗಿ ದೇಶಕ್ಕೆ ಮಾದರಿಯಾಗಿವೆ ಎಂದು ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.

ಕಾಗವಾಡ ತಾಲೂಕಿನ ಕೃಷ್ಣಾ ಕಿತ್ತೂರ ಗ್ರಾಮದಲ್ಲಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 75ನೇ ವರ್ಷದ ಅಮೃತ ಮಹೋತ್ಸವ ಹಾಗೂ ನೂತನ ಕಟ್ಟಡದ ಉದ್ಘಾಟಿಸಿ ಮಾತನಾಡಿದರು. ಈ ಹಿಂದೆ ಸಹಕಾರ ಸಚಿವನಾಗಿದ್ದ ಸಂದರ್ಭದಲ್ಲಿ ವೈಧ್ಯನಾಥನ್ ವರದಿಯನ್ನು ಜಾರಿಗೆ ತಂದು ರಾಜ್ಯದಲ್ಲಿ ಹಾನಿಯಲ್ಲಿರುವ ಕೃಷಿ ಪತ್ತಿನ ಸಹಕಾರಿ ಸಂಘಗಳನ್ನು ಏಕಕಾಲಕ್ಕೆ ಪುನಃಶ್ವೇತನಗೊಳಿಸಲು ಉದ್ದೇಶಿಸಿತ್ತು. ನಬಾರ್ಡ್‌ ಹಾಗೂ ರಾಜ್ಯ ಸರಕಾರದಿಂದ ಸುಮಾರು ₹ 750 ಕೋಟಿ ಹಣದಲ್ಲಿ ನಷ್ಟದಲ್ಲಿದ್ದ 4883 ಸಹಕಾರಿ ಸಂಘಗಳನ್ನು ಪುನಃಶ್ಚೇತನಗೊಳಿಸಲಾಗಿತ್ತು ಎಂದರು. ಕೃಷ್ಣಾ ಕಿತ್ತೂರ ಸಂಘ ಇಷ್ಟೊಂದು ಸುಸಜ್ಜಿತ ಕಟ್ಟಡ ನಿರ್ಮಿಸಿದ್ದಾರೆಂದರೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಸೇವೆ ಪ್ರಾಮಾಣಿಕವಾಗಿದೆ ಎಂದು ಶ್ಲಾಘಿಸಿದರು.ಕೃಷ್ಣಾ ಕಿತ್ತೂರ ಗುರುದೇವಾಶ್ರಮದ ಬಸವೇಶ್ವರ ಶ್ರೀಗಳು, ಗುಣದಾಳ ಕಲ್ಯಾಣ ಹಿರೇಮಠದ ಡಾ.ವಿವೇಕಾನಂದ ಸ್ವಾಮಿಗಳು ಆಶೀರ್ವಚನ ನೀಡಿ, ಜೀವನದಲ್ಲಿ ಎಷ್ಟು ಹಣ ಗಳಿಸುತ್ತಾನೆ ಎಂಬುದು ಮುಖ್ಯವಲ್ಲ, ಎಷ್ಟು ಉಳಿಸುತ್ತಾನೆ ಎಂಬುದು ಮುಖ್ಯ. ಸಂಪಾದಿಸಿದ ಹಣದಲ್ಲಿ ಒಂದಿಷ್ಟು ಈ ಸಂಸ್ಥೆಯಲ್ಲಿ ಇಡಿ, ಕಷ್ಟಕಾಲದಲ್ಲಿ ಉಪಯೋಗಕ್ಕೆ ಬರುತ್ತವೆ ಎಂದು ಹೇಳಿದರು.ಸಮಾರಂಭದಲ್ಲಿ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷೆ ಪಾರ್ವತಿ ಮಂಟೂರ, ಆಡಳಿತ ಮಂಡಳಿ ನಿರ್ದೇಶಕರಾದ ವಿಶ್ವನಾಥ ಪಾಟೀಲ, ಅಣ್ಣಾಸಾಬ ಪಾಟೀಲ, ಅಪ್ಪಾಸಾಬ ಕರಬಸನವರ, ಶ್ರೀಶೈಲ ತ್ರಿಕಾಣಿ, ಕಾಶಿಬಾಯಿ ಮೊಕಾಶಿ, ಮುನೀರ ಅಲಾಸೆ, ಸದಾಶಿವ ಶೇಗುಣಸಿ, ಗೋಪಾಲ ಕಾಂಬಳೆ, ಕಾಶಿನಾಥ ಕೋಳಿ, ಶೋಭಾ ಪಾಟೀಲ, ಮುಖ್ಯ ಕಾರ್ಯನಿರ್ವಾಹಕ ಗುರುಪಾದ ಜತ್ತಿ ಸೇರಿದಂತೆ ಸಂಘದ ಎಲ್ಲ ಸದಸ್ಯರು, ಗ್ರಾಮಸ್ಥರು, ಸಹಕಾರಿ ಧುರೀಣರು ಭಾಗವಹಿಸಲಿದ್ದರು. ಈರಪ್ಪ ಜಂಬಗಿ ಸ್ವಾಗತಿಸಿದರು, ಶಿವಗೌಡ ಚೌಘಲಾ ನಿರ್ವಹಿಸಿದರು, ವಿವೇಕ ಜತ್ತಿ ವಂದಿಸಿದರು.---

ಕೋಟ್‌ಸಹಕಾರಿ ಚಳುವಳಿಗೆ 120 ವರ್ಷಗಳ ಇತಿಹಾಸವಿದೆ. ಸಹಕಾರಿ ಕ್ಷೇತ್ರ ದೇಶದ ಆರ್ಥಿಕ ಪ್ರಗತಿಗೆ ಸಾಕಷ್ಟು ಕೊಡುಗೆ ನೀಡಿದೆ. ದೇಶದಲ್ಲಿ ಸುಮಾರು 34 ಲಕ್ಷ ಕುಟುಂಬಗಳು ₹ 23 ಸಾವಿರ ಕೋಟಿ ಬಡ್ಡಿರಹಿತ ಸಾಲ ಪಡೆದ ಮೊದಲ ರಾಜ್ಯ ಕರ್ನಾಟಕ. ಈ ಸಹಕಾರಿ ಸಂಘಗಳ ಮೂಲಕ ಲಕ್ಷಾಂತರ ಜನರಿಗೆ ಉದ್ಯೋಗಾವಕಾಶಗಳು ಸೇರಿ ಬಡವರಿಗೆ ಆರ್ಥಿಕ ಸಹಾಯ ನೀಡುವ ಮೂಲಕ ದೇಶ ಆರ್ಥಿಕ ಸಬಲತೆಗೆ ಕಾರಣಿಕರ್ತರು ಯಾರಾದರೂ ಇದ್ದರೆ ಅದು ಸಹಕಾರ ಭೀಷ್ಮ ಲಕ್ಷ್ಮಣ ಸವದಿ.ರಾಜು ಕಾಗೆ, ಕಾಗವಾಡ ಶಾಸಕ