ಸಾರಾಂಶ
ಬಿಆರ್‌ಟಿಎಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸ್ಥಿತಿ- ಗತಿ ಹಾಗೂ ಅವುಗಳ ನಿರ್ವಹಣೆ ವಿಚಾರವಾಗಿ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಆದರೆ, ಸರ್ಕಾರ ಮಾತ್ರ ಯಾವುದೇ ಕ್ರಮ ವಹಿಸುತ್ತಿಲ್ಲ.
ಹುಬ್ಬಳ್ಳಿ: ಸಾವಿರಾರು ಕೋಟಿ ರುಪಾಯಿ ವೆಚ್ಚದಲ್ಲಿ ಆರಂಭಿಸಿರುವ ಬಿಆರ್‌ಟಿಎಸ್ ಯೋಜನೆ ಬಗ್ಗೆ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದರೂ ಕ್ರಮ ವಹಿಸಿಲ್ಲ ಎಂದು ವಿಧಾನಸಭೆ ವಿಪಕ್ಷ ಉಪನಾಯಕ, ಶಾಸಕ ಅರವಿಂದ ಬೆಲ್ಲದ ಕಿಡಿ ಕಾರಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ನಿತ್ಯ ಒಂದಿಲ್ಲ ಒಂದು ಕಡೆ ಬಿಆರ್‌ಟಿಎಸ್ ಬಸ್ ಅಪಘಾತ ಸಂಭವಿಸುತ್ತಿದೆ. ಆದರೆ, ಭಾನುವಾರ ವಿದ್ಯಾಗಿರಿಯ ಜೆಎಸ್ಎಸ್ ಬಳಿ ನಡೆದ ಘಟನೆ ಭೀಕರವಾಗಿದೆ. ಇದೊಂದು ಆತಂಕಕಾರಿ ಘಟನೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಾಲೆ- ಕಾಲೇಜು ರಜೆ ಇದ್ದಿದ್ದರ ಪರಿಣಾಮ ಸಂಭವನೀಯ ದುರಂತ ತಪ್ಪಿದಂತಾಗಿದೆ ಎಂದರು.ಬಿಆರ್‌ಟಿಎಸ್ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸ್ಥಿತಿ- ಗತಿ ಹಾಗೂ ಅವುಗಳ ನಿರ್ವಹಣೆ ವಿಚಾರವಾಗಿ ಹಲವು ಬಾರಿ ಸರ್ಕಾರದ ಗಮನಕ್ಕೆ ತಂದಿದ್ದೇನೆ. ಆದರೆ, ಸರ್ಕಾರ ಮಾತ್ರ ಯಾವುದೇ ಕ್ರಮ ವಹಿಸುತ್ತಿಲ್ಲ.
ಕೆಲವು ತಿಂಗಳು ಹಿಂದೆ ಬಸ್ ಸ್ಥಿತಿ ಸುಧಾರಣೆ, ನಿರ್ವಹಣೆ ಸೇರಿ ಚಿಗರಿ ಸಂಚಾರದ ಸಮಸ್ಯೆಗಳ ನಿವಾರಣೆಗೆ ಅನುದಾನ ನೀಡುವಂತೆ ಬಿಆರ್‌ಟಿಎಸ್ ಹಾಗೂ ಅದರ ನಿರ್ವಹಣೆ ಹೊಣೆ ಹೊತ್ತಿರುವು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಪತ್ರ ಬರೆದರೂ ಸರ್ಕಾರ ಕ್ರಮ ವಹಿಸಿಲ್ಲ.ಸರ್ಕಾರದ ನಿರ್ಲಕ್ಷ್ಯದಿಂದ ಸಾರ್ವಜನಿಕರು ಜೀವ ಭಯದೊಂದಿಗೆ ಚಿಗರಿ ಬಸ್‌ಗಳಲ್ಲಿ ಸಂಚರಿಸುವಂತಾಗಿದೆ. ಕೂಡಲೇ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಚಿಗರಿ ಬಸ್‌ಗಳ ಸುಧಾರಣೆಗೆ ಅನುದಾನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಏನಾದರೂ ಅನಾಹುತ ಸಂಭವಿಸಿ ಸಾವು- ನೋವುಗಳು ಉಂಟಾದಲ್ಲಿ ಸರ್ಕಾರವೇ ನೇರ ಹೊಣೆ ಎಂದು ಎಚ್ಚರಿಸಿದ್ದಾರೆ.