ಸಾರಾಂಶ
ಕನ್ನಡಪ್ರಭ ವಾರ್ತೆ ಹೆಬ್ರಿ
ಹೆಬ್ರಿ ಪರಿಸರದಲ್ಲಿ ಸಮಾಜದಲ್ಲಿ ಹಲವಾರು ಜನೋಪಯೋಗಿ ಸೇವೆಗಳನ್ನು ಮಾಡುವ ಮೂಲಕ ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅತ್ಯುತ್ತಮ ಕ್ಲಬ್ ಆಗಿ ಮೂಡಿ ಬಂದಿದೆ. ಬಡವರಿಗೆ ಸಂಕಷ್ಟಗಳ ಕಾಲದಲ್ಲಿ ಉಳಿಯಲು ಮನೆ ಕಟ್ಟಿ ಕೊಡುವುದು ದೇವಸ್ಥಾನವನ್ನು ಕಟ್ಟಿಕೊಟ್ಟಷ್ಟೇ ಪುಣ್ಯದ ಕಾರ್ಯ ಎಂದು ಲಯನ್ಸ್ ಕ್ಲಬ್ ಗವರ್ನರ್ ಮಹಮ್ಮದ್ ಹನೀಫ್ ಹೇಳಿದ್ದಾರೆ.ಹೆಬ್ರಿಯ ಅಮರಾವತಿ ಹೊಟೇಲ್ ಸಭಾಂಗಣದಲ್ಲಿ ಬುಧವಾರ ನಡೆದ ಹೆಬ್ರಿ ಸಿಟಿ ಲಯನ್ಸ್ ಕ್ಲಬ್‌ಗೆ ಗವರ್ನರ್ ಅಧೀಕೃತ ಬೇಟಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ರಿತೇಶ್, ಸನತ್ ಶೆಟ್ಟಿ, ವಿವಿಧ ಕ್ಷೇತ್ರಗಳ ಸಾಧಕರಾದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹೆಬ್ರಿ ಗ್ರಾಮ ಪಂಚಾಯಿತಿ ಸದಸ್ಯ ಎಚ್.ಜನಾರ್ದನ್, ಸಮಾಜ ಸೇವಕ ಹೆಬ್ರಿ ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಶಂಕರ ಶೇರಿಗಾರ್, ಮುಖ್ಯಮಂತಿಗಳ ಚಿನ್ನದ ಪಧಕ ಪುರಸ್ಕೃತ ಪೊಲೀಸ್ ಹೆಬ್ರಿಯ ಮಹೇಶ್ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು.
ಸಮಾಜಸೇವಕರಾದ ಹೊಟೇಲ್ ಉದ್ಯಮಿ ಚಾರ ದಯಾನಂದ ಶೆಟ್ಟಿ ಅವರು ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ನೂತನ ಸದಸ್ಯರಾಗಿ ಸೇರ್ಪಡೆಗೊಂಡರು.ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾನದಿ ನಾಗೇಶ ನಾಯಕ್, ಕಾರ್ಯದರ್ಶಿ ಹರೀಶ ಶೆಟ್ಟಿ, ಕೋಶಾಧಿಕಾರಿ ಆಶಾ ಬಿ ಶೆಟ್ಟಿ ಸಹಿತ ಹಲವರನ್ನು ಲಯನ್ಸ್ ಕ್ಲಬ್ ಗವರ್ನರ್ ಮಹಮ್ಮದ್ ಹನೀಫ್ ಗೌರವಿಸಿದರು. ಹೆಬ್ರಿ ಸಿಟಿ ಲಯನ್ಸ್ ಕ್ಲಬ್ ಅಧ್ಯಕ್ಷ ಸೀತಾನದಿ ನಾಗೇಶ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಲಯನ್ಸ್ ಕ್ಲಬ್ ಜಿಲ್ಲಾ ಸಂಪುಟದ ಕೋಶಾಧಿಕಾರಿ ಶ್ರೀನಿವಾಸ ಪೈ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಬೇಳಂಜೆ ಹರೀಶ ಪೂಜಾರಿ, ಕಾರ್ಯದರ್ಶಿ ಅಜೆಕಾರು ಥೋಮಸ್ ಲುಕಸ್, ವಲಯಾಧ್ಯಕ್ಷ ರಘುರಾಮ ಶೆಟ್ಟಿ, ವಿವಿಧ ಘಟಕಗಳ ಪ್ರಮುಖರು, ಸದಸ್ಯರು ಉಪಸ್ಥಿತರಿದ್ದರು.
ಲಯನ್ಸ್ ಮುಖಂಡ ಹೆಬ್ರಿ ಟಿ.ಜಿ.ಆಚಾರ್ಯ ನಿರೂಪಿಸಿದರು. ಹರೀಶ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು. ನಾಗೇಶ ನಾಯಕ್ ಸ್ವಾಗತಿಸಿದರು. ಆಶಾ ಬಿ. ಶೆಟ್ಟಿ ವಂದಿಸಿದರು.