ಸರ್ಕಾರಿ ಬಸ್, ಓಮ್ನಿ ಡಿಕ್ಕಿ: ಮೂವರ ಸಾವು

| Published : Apr 12 2024, 01:04 AM IST

ಸಾರಾಂಶ

ನ್ಯಾಮತಿ ತಾಲೂಕು ವ್ಯಾಪ್ತಿಯ ಚಿನ್ನಿಕಟ್ಟೆ ಗ್ರಾಮದ ಬಳಿ ಶಿವಮೊಗ್ಗ- ಶಿಕಾರಿಪುರ ರಸ್ತೆಯಲ್ಲಿ ಗುರುವಾರ ಕೆಎಸ್‍ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂರು ಸಾವು ಕಂಡು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಹೊನ್ನಾಳಿ: ನ್ಯಾಮತಿ ತಾಲೂಕು ವ್ಯಾಪ್ತಿಯ ಚಿನ್ನಿಕಟ್ಟೆ ಗ್ರಾಮದ ಬಳಿ ಶಿವಮೊಗ್ಗ- ಶಿಕಾರಿಪುರ ರಸ್ತೆಯಲ್ಲಿ ಗುರುವಾರ ಕೆಎಸ್‍ಆರ್‌ಟಿಸಿ ಬಸ್ ಮತ್ತು ಓಮ್ನಿ ಕಾರು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೂರು ಸಾವು ಕಂಡು, ಮೂವರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಓಮಿನಿಯಲ್ಲಿದ್ದ ದೇವರಾಜ್ (27) ನಂಜುಂಡಪ್ಪ (83), ಸೂರಗೊಂಡನಕೊಪ್ಪದ ರಾಕೇಶ್ (30) ಮೃತ ದುರ್ದೈವಿಗಳು. ಗುರುವಾರ ಮಧ್ಯಾಹ್ನ ಶಿವಮೊಗ್ಗ ತಾಲೂಕು ಹರಮಘಟ್ಟದ ಆರು ಜನರು ಶಿಕಾರಿಪುರದ ಕಡೆ ಓಮ್ನಿ ವಾಹನದಲ್ಲಿ ಪ್ರಯಾಣಿಸುತ್ತಿದ್ದರು. ಬಸ್‍ನಲ್ಲಿ ಇದ್ದವರಿಗೆ ಸಣ್ಣಪುಟ್ಟ ಪೆಟ್ಟಾಗಿವೆ. ನ್ಯಾಮತಿ ಠಾಣೆಯಲ್ಲಿ ದೂರು ದಾಖಲಾಗಿದೆ.

- - - -11ಎಚ್.ಎಲ್.ಐ4: