ಸರ್ಕಾರ, ಹೈಕೋರ್ಟ್ ಆದೇಶದ ಮೇರೆಗೆ ಶ್ರೀರಾಮ ದೇವಸ್ಥಾನ ಮುಜರಾಯಿ ಇಲಾಖೆ ವಶಕ್ಕೆ

| Published : Oct 14 2025, 01:00 AM IST

ಸರ್ಕಾರ, ಹೈಕೋರ್ಟ್ ಆದೇಶದ ಮೇರೆಗೆ ಶ್ರೀರಾಮ ದೇವಸ್ಥಾನ ಮುಜರಾಯಿ ಇಲಾಖೆ ವಶಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ತಾಲೂಕಿನ ಹಳೇ ಕಿರಂಗೂರು ಗ್ರಾಮದ ಬಳಿ ಇರುವ ಶ್ರೀರಾಮ ದೇವಸ್ಥಾನ ಸರ್ಕಾರ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಂಡರು.

ಶ್ರೀರಂಗಪಟ್ಟಣ:

ತಾಲೂಕಿನ ಹಳೇ ಕಿರಂಗೂರು ಗ್ರಾಮದ ಬಳಿ ಇರುವ ಶ್ರೀರಾಮ ದೇವಸ್ಥಾನ ಸರ್ಕಾರ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಮುಜರಾಯಿ ಇಲಾಖೆ ವಶಕ್ಕೆ ಪಡೆದುಕೊಂಡರು.ರೈತ ಹೋರಾಟಗಾರ ಕಿರಂಗೂರು ಪಾಪು ಅವರು ಸರ್ಕಾರಿ ಜಾಗದಲ್ಲಿದ್ದ ಶ್ರೀರಾಮ ದೇವಸ್ಥಾನವನ್ನು ಸರ್ಕಾರದ ವಶಕ್ಕೆ ವಹಿಸಿಕೊಳ್ಳಲು ಹೋರಾಟ ನಡೆಸಿ ಅಂತಿಮವಾಗಿ ಯಶಸ್ವಿಯಾಗಿದ್ದಾರೆ.ದೇವಸ್ಥಾನ ಹಾಗೂ ಇದಕ್ಕೆ ಸೇರಿದ್ದ ಜಾಗ ನಮಗೆ ಸೇರಿದ್ದು ಎಂದು ಮಹದೇವ ಹಾಗೂ ಇತರರು ಹೋರಾಟ ನಡೆಸಿ ಸರ್ಕಾರದ ವಶಕ್ಕೆ ವಹಿಸಿಕೊಡಲು ನಿರಾಕರಿಸಿದ್ದರು. ಆದರೆ, ಅಂತಿಮವಾಗಿ ಶ್ರೀರಾಮ ದೇವಸ್ಥಾನ ಸರ್ಕಾರ ಹಾಗೂ ಹೈಕೋರ್ಟ್ ಆದೇಶದ ಮೇರೆಗೆ ಮುಜರಾಯಿ ಇಲಾಖೆ ವಶಪಡಿಸಿಕೊಂಡು ದೇವಾಲಯದಲ್ಲಿ ಸಿಸಿ ಕ್ಯಾಮೆರಾ, ಮುಜರಾಯಿ ಇಲಾಖೆಗೆ ಸೇರಿದ್ದ ಜಾಗ ಎಂದು ನಾಮಫಲಕ ಅಳವಡಿಸಿ ಅಧಿಕೃತವಾಗಿ ತಮ್ಮ ಸುಪರ್ದಿಗೆ ಪಡೆದುಕೊಂಡಿತು.ಮುಜರಾಯಿ ತಹಸೀಲ್ದಾರ್ ತಿಮ್ಮೇಗೌಡ, ಶ್ರೀರಂಗಟಪಟ್ಟಣ ತಹಸೀಲ್ದಾರ್ ಚೇತನಾ ಯಾದವ್, ರಂಗನಾಥಸ್ವಾಮಿ ದೇವಾಲಯದ ಇಒ ಉಮಾ, ವೃತ್ತ ನಿರೀಕ್ಷ ಬಿ.ಜಿ ಕುಮಾರ್ ಸೇರಿದಂತೆ ಇತರೆ ಅಧಿಕಾರಿಗಳು ಆಗಮಿಸಿದ್ದ ವೇಳೆ ಎರಡು ಕಡೆಗಳಿಂದಲೂ ವಾದ-ವಿವಾದ ನಡೆದು ಅಂತಿಮವಾಗಿ 2 ದಿನಗಳ ಕಾಲಾವಕಾಶ ನೀಡಿ ಬಂದಿದ್ದಾರೆ.

ಶಾಸಕರ ವಿರುದ್ಧ ಅಸಂವಿಧಾನಾತ್ಮಕ ಪದ ಬಳಕೆ: ಪೊಲೀಸರಿಗೆ ದೂರು

ಕನ್ನಡಪ್ರಭ ವಾರ್ತೆ ಮಳವಳ್ಳಿ

ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಿರುದ್ಧ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಅಸಂವಿಧಾನಾತ್ಮಕ ಪದ ಬಳಕೆ ಮಾಡಿರುವುದನ್ನು ಖಂಡಿಸಿ ಕಾಂಗ್ರೆಸ್ ಮುಖಂಡರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದರು.

ತಾಲೂಕಿನ ನೆಲ್ಲೂರು ಗ್ರಾಮದ ಕೆ.ಹನುಮೇಗೌಡ ಎಂಬ ವ್ಯಕ್ತಿ ಅ.12ರಂದು ಫೇಸ್‌ಬುಕ್ ಲೈವ್‌ನಲ್ಲಿ ಅವ್ಯಾಚ ಶಬ್ದಗಳನ್ನು ಪ್ರಯೋಗ ಮಾಡಿದ್ದು, ಈಗಾಗಲೇ ರೌಡಿ ಶೀಟರ್ ಪಟ್ಟಿಯಲ್ಲಿರುವ ಈತನ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಾಂತ್ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಈ ವೇಳೆ ಮನ್ಮುಲ್ ನಿರ್ದೇಶಕ ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಪಿ.ರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಲಿಂಗರಾಜು, ನಿರ್ದೇಶಕ ಕೆ.ಜೆ.ದೇವರಾಜು, ಮುಖಂಡರಾದ ಪ್ರಕಾಶ್, ಓಂ ಪ್ರಕಾಶ್, ನಾಗೇಂದ್ರ, ಪ್ರಸನ್ನ, ಶಶಿ, ವಿಜಯ್‌ಕುಮಾರ್, ಚನ್ನೇಗೌಡ ಸೇರಿದಂತೆ ಇತರರು ಇದ್ದರು.

ಪೌತಿಖಾತೆ ಮಾಡಲು ಲಂಚ ಗ್ರಾಪಂ ಪಿಡಿಒ ಲೋಕಾಯುಕ್ತ ಬಲೆಗೆ

ಕನ್ನಡಪ್ರಭ ವಾರ್ತೆ ಮದ್ದೂರು

ಪೌತಿಖಾತೆ ಮಾಡಲು ರೈತನಿಂದ ಲಂಚ ಪಡೆಯುತ್ತಿದ್ದ ತಾಲೂಕಿನ ಕೊಪ್ಪ ಹೋಬಳಿ ತಗ್ಗಹಳ್ಳಿ ಗ್ರಾಮ ಪಂಚಾಯ್ತಿ ಪಿಡಿಒ ಸೋಮವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಗ್ರಾಪಂ ಪಿಡಿಒ ಸಚಿನ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದವರು. ತಾಲೂಕಿನ ಚಿಕ್ಕೋನಹಳ್ಳಿಯ ಶಿವಲಿಂಗ ಅವರಿಂದ ಪೌತಿಖಾತೆ ಮಾಡಲು ಸಚಿನ್ 40 ಸಾವಿರ ರು. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಧ್ಯಸ್ಥಿಕೆದಾರರ ಸಮ್ಮುಖದಲ್ಲಿ 32 ಸಾವಿರ ರು. ನೀಡಲು ತೀರ್ಮಾನವಾಗಿತ್ತು.

ಈ ಬಗ್ಗೆ ಶಿವಲಿಂಗಯ್ಯ ಸಚಿನ್ ವಿರುದ್ಧ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಮೊದಲ ಕಂತಾಗಿ 5 ಸಾವಿರ ಲಂಚ ಪಡೆಯುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಎಸ್ಪಿ ಸುರೇಶ್, ಇನ್ಸ್ ಪೆಕ್ಟರ್ ಬ್ಯಾಟರಾಯಗೌಡ, ಸಿಬ್ಬಂದಿ ಕುಮಾರ ಅವರು ಲಂಚ ಪಡೆದ ಆರೋಪ ಮೇಲೆ ಪಿಡಿಒ ಸಚಿನ್ ಬಂಧಿಸಿ ಪ್ರಕರಣ ದಾಖಲಿಸಿಕೊಂಡ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.