ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಜಿಂದಾಲ್ ಸ್ಟೀಲ್ ಕಂಪನಿಗೆ 3667 ಎಕರೆ ಜಮೀನನ್ನು ಮಾರಾಟ ಮಾಡಲು ಮುಂದಾಗಿರುವ ಸರ್ಕಾರ ನಿರ್ಣಯವನ್ನು ವಾಪಸ್ಸು ಪಡೆಯಬೇಕು.ಬಹಳ ದೀರ್ಘಕಾಲದಿಂದ ಇತ್ಯರ್ಥವಾಗದೆ ಇರುವ ಬಗರ್ ಹುಕ್ಕುಂ ಸಾಗುವಳಿದಾರರ ಪ್ರಶ್ನೆಗಳನ್ನು ಸರ್ಕಾರ ಚರ್ಚಿಸಿ, ಬಡ ರೈತರ ಪರ ನಿಲ್ಲಬೇಕೆಂದು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜಿ.ಸಿ.ಬಯ್ಯಾರೆಡ್ಡಿ ತಿಳಿಸಿದರು.ಜನಚಳವಳಿ ಕೇಂದ್ರದಲ್ಲಿ ಸಿಪಿಐ(ಎಂ) ಪಕ್ಷದ ರಾಜ್ಯ ಸಮ್ಮೇಳನದ ಯಶಸ್ವಿಗಾಗಿ ಕರೆಯಲಾಗಿದ್ದ ಸ್ವಾಗತ ಸಮಿತಿ ರಚನಾ ಸಭೆಯಲ್ಲಿ ಅವರು ಮಾತನಾಡಿದರು.ದೇಶದ ಸ್ವಾತಂತ್ರ್ಯ ಚಳುವಳಿಗೆ ಕೊಡುಗೆ ನೀಡಿರುವ ಇತಿಹಾಸ ಹೊಂದಿರುವ ತುಮಕೂರು ಜಿಲ್ಲೆಯಲ್ಲಿ ಸಿಪಿಐ(ಎಂ) ಪಕ್ಷದ ರಾಜ್ಯ ಸಮ್ಮೇಳನವನ್ನು ಸಂಘಟಿಸಲಾಗಿದೆ, ಭಾರತದ ಜಾತ್ಯತೀತ, ಪ್ರಜಾಪ್ರಭುತ್ವ, ಗಣರಾಜ್ಯದ ಉಳಿವಿಗಾಗಿ, ಎಲ್ಲಾ ದುಡಿಯುವ ಜನತೆಯ ಹಕ್ಕುಗಳ ರಕ್ಷಣೆಗಾಗಿ, ದೇಶದ ಐಕ್ಯತೆ, ಸಮಗ್ರತೆ ಮತ್ತು ಸಾರ್ವಭೌಮತೆ ಉಳಿವಿಗಾಗಿ ಗಣರಾಜ್ಯದ ಸಂವಿಧಾನಿಕ ಮೌಲ್ಯಗಳು ತೀವ್ರ ದಾಳಿಗೆ ಒಳಗಾಗಿವೆ. ಸಂಸದೀಯ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲಗುತ್ತಿದೆ. ಕೋಮುವಾದಿ ಫ್ಯಾಸಿಸಂ ಕರಾಳ ಛಾಯೆ ಅವರಿಸುತ್ತಿದೆ. ಭಾರತದ ರೈತರು, ಕಾರ್ಮಿಕರು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರ ಮತ್ತಿತರ ಜನರ ಆಶಯಗಳಿಗೆ ವಿರುದ್ಧವಾಗಿ ಸರ್ಕಾರದ ನಡೆಗಳು ನಡೆಯುತ್ತಿವೆ, ದೇಶದ ದುಡಿಯುವ ಜನರಲ್ಲಿ ವರ್ಗ ಐಕ್ಯತೆ ಮೂಡಿಸುವುದರ ಜೊತೆಗೆ ವರ್ಗ ಸಂಘರ್ಷದ ಮೂಲಕವೇ ಸಾಮಾಜಿಕ ಪರಿವರ್ತನೆ ಮತ್ತು ಶೋಷಣೆಯಿಂದ ಮುಕ್ತಿ ಎಂದು ದೃಢವಾಗಿ ನಂಬಿರುವ ಭಾರತ ಕಮೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಈ ನಿಟ್ಟಿನಲ್ಲಿ ರಾಜ್ಯ ಸಮ್ಮೇಳನವನ್ನು ಸಂಘಟಿಸಲಾಗುತ್ತಿದೆ ಎಂದರು.
ಇಂತಹ ಮಹತ್ತರ ಕಾರ್ಯದ ಭಾಗವಾಗಿಯೇ ಭಾರತ ಕಮೂನಿಸ್ಟ್ ಪಕ್ಷ ( ಮಾರ್ಕ್ಸ್ ವಾದಿ ) ಇಂತಹ ಸನ್ನಿವೇಶದಲ್ಲಿ ನಮ್ಮ ದೇಶದ ಜನಸಾಮಾನ್ಯರ-ರೈತ- ಕಾರ್ಮಿಕರ ೨೪ ನೇ ರಾಜ್ಯ ಸಮ್ಮೇಳನವನ್ನು ಡಿಸೆಂಬರ್ 29 ರಿಂದ 31 ವರೆಗೆ ತುಮಕೂರಿನಲ್ಲಿ ನಡೆಸಲು ಮುಂದಾಗಿದ್ದು, ಇದರ ಭಾಗವಾಗಿ ಸ್ವಾಗತ ಸಮಿತಿ ರಚಿಸಲಾಗಿದೆ ಎಂದು ತಿಳಿಸಿದರು.ಸಭೆಯಲ್ಲಿ ಪ್ರೊ. ಕೆ. ದೊರೈರಾಜು ಮಾತನಾಡಿ, ಶ್ರಮಿಕರ, ದಲಿತರ, ಮಹಿಳೆಯರ , ಜನಸಾಮಾನ್ಯರ ಹಕ್ಕುಗಳಿಗೆ ಮೌಲ್ಯಯುತ ಹೋರಾಟವನ್ನು ನಡೆಸುವಲ್ಲಿ ಕಮ್ಯುನಿಸ್ಟ್ ಪಕ್ಷ ಮುಂಚೂಣಿಯಲ್ಲಿದೆ, ಪಂಡಿತ್ ಜವಾಹರ್, ರವೀಂದ್ರ ನಾಯಕ್, ಹಿರಿಯ ಕಲಾವಿದರಾದ ಎನ್. ಎ. ಖಾನ್, ಅಪ್ಸರ್ ಖಾನ್, ಇನ್ಸಾ ರಪೀಕ್ ವಾಷ, ರೈತ ಮುಂದಾಳು ಆರ್.ಎಸ್.ಚನ್ನಬಸಣ್ಣ, ಎ. ಅಜ್ಜಪ್ಪ, ದೊಡ್ಡನಂಜಪ್ಪ, ರಾಜಮ್ಮ,, ಕಾರ್ಮಿಕ ಮುಖಂಡರಾದ ನರಸಿಂಹಮೂರ್ತಿ, ಶಂಬಣ್ಣ ಗೋವಿಂದ ರಾಜು, ಲೋಕೇಶ್, ಕುಮಾರ್, ಪ್ರಕಾಶ್, ಶಿವ ಕುಮಾರ್, ಸ್ವಾಮಿ, ಸ್ವಲಿ, ಪುಟೈಗೌಡ, ಕಲಿಲ್, ಜಿ.ಕಮಲ ಮಾರುತಿ. ಖಾಸಿಂ, ಮಹಿಳಾ ಹೋರಾಟಗಾರ್ತಿ ಮುಮ್ತಾಜ್, ಟಿ.ಆರ್ ಕಲ್ಪನ, ಅನಸೂಯ, ಶಹತಾಜ್ ಸೇರಿ ರೈತ, ಕಾರ್ಮಿಕರ, ಧಮನಿತ, ಮಹಿಳಾ ಚಳುವಳಿಯ ನಾಯಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಸಿಪಿಐ(ಎಂ) ಜಿಲ್ಲಾ ಕಾರ್ಯದರ್ಶಿ ಎನ್.ಕೆ.ಸುಬ್ರಮಣ್ಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಿಪಿಐ(ಎಂ) ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಸೈಯದ್ ಮುಜೀಬ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಿ. ಉಮೇಶ್ ವಂದಿಸಿದರು.