ಸಾರಾಂಶ
ಬ್ಯಾಂಡ್ ಸೆಟ್, ಮಂಗಳವಾದ್ಯದೊಂದಿಗೆ ವೀರಭದ್ರ ಕುಣಿತ ಗಣಪತಿ ವಿಸರ್ಜನೆ ಮೆರವಣಿಗೆ ಕಳೆ ತಂದಿತು.
ಕನ್ನಡಪ್ರಭ ವಾರ್ತೆ ಟಿ. ನರಸೀಪುರ
ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಆವರಣದಲ್ಲಿ ಖಾಸಗಿ ಬಸ್ ಏಜೆಂಟರ ಸಂಘದ ವತಿಯಿಂದ ಗೌರಿ, ಗಣೇಶ ಹಬ್ಬದ ಅಂಗವಾಗಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ವಿಜೃಂಭಣೆಯಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿದ ಬಳಿಕ ತ್ರಿವೇಣಿ ಸಂಗಮದಲ್ಲಿ ವಿಸರ್ಜಿಸಲಾಯಿತು.ಬ್ಯಾಂಡ್ ಸೆಟ್, ಮಂಗಳವಾದ್ಯದೊಂದಿಗೆ ವೀರಭದ್ರ ಕುಣಿತ ಗಣಪತಿ ವಿಸರ್ಜನೆ ಮೆರವಣಿಗೆ ಕಳೆ ತಂದಿತು. ಉತ್ಸವ ಮೂರ್ತಿಯ ಮುಂದೆ ಪೊಲೀಸ್ ಇನ್ಸ್ಪೆಕ್ಟರ್ ಧನಂಜಯ ಅವರೇ ಭದ್ರತೆಯ ನೇತೃತ್ವವನ್ನು ವಹಿಸಿದ್ದರು.
ಸಂಘದ ಗೌರವಾಧ್ಯಕ್ಷ ರಾಜಣ್ಣ, ಅಧ್ಯಕ್ಷ ಶ್ರೀನಿವಾಸ್, ಗ್ರಾಪಂ ಮಾಜಿ ಅಧ್ಯಕ್ಷ ಎ.ಜೆ. ವೆಂಕಟೇಶ್, ವಿಚಾರವಾದಿ ಕೆ.ಎನ್. ಪ್ರಭುಸ್ವಾಮಿ, ಉದ್ಯಮಿ ಉಮೇಶ್ ಶೆಟ್ಟಿ, ಮಲ್ಲಪ್ಪ, ಶಿವಣ್ಣ, ಏಜೆಂಟರ ಸಂಘದ ಉಪಾಧ್ಯಕ್ಷ ಕುಮಾರ್, ಜಿ.ರಮೇಶ್, ಕಾರ್ಯದರ್ಶಿ ರಾಜಣ್ಣ, ಪಿ. ನಾಗರಾಜು, ಟಿ.ಸಿ. ಮಹದೇವು, ಗಿರೀಶ್, ನಾಗಲಿಂಗು, ಸಿದ್ದಪ್ಪ, ಮಾಧು, ಚೇತನ್, ಲಕ್ಷ್ಮಣ, ನಾರಾಯಣ್, ಟಿ.ಎಸ್.ಸ್ವಾಮಿ, ಮುದ್ದಣ್ಣ, ಸುಬ್ರಹ್ಮಣ್ಯ ಇದ್ದರು.