ಸಾರಾಂಶ
ಕಡಿಮೆ ಅಪಾಯವಿರುವ ಹೆರಿಗೆಗಳನ್ನು ಸ್ವಾಭಾವಿಕವಾಗಿ ಹೆರಿಗೆ ಮಾಡಿಸಲು ಪ್ರತ್ಯೇಕ ಜಿಡಿಜ್ಛಿಛ್ಟಿ ಔಛಿ ಔಚಿಟ್ಠ್ಟ ಇಚ್ಟಛಿ ಖ್ಞಿಜಿಠಿ ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ಈ ಘಟಕದಲ್ಲಿ ಸ್ವಾಭಾವಿಕ ಹೆರಿಗೆಗಳನ್ನು ಮಾಡಿಸಲು ನುರಿತ ಪ್ರಸವ ಸಹಾಯಕಿಯರನ್ನು ನಿಯೋಜಿಸಿ ಶಸ್ತ್ರಚಿಕಿತ್ಸೆಗಳ ಪ್ರಮಾಣವನ್ನು ಕಡಿಮೆ ಮಾಡಲು ಯೋಜಿಸಲಾಗಿದೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆ ಮಾದರಿಯಲ್ಲಿ ಮಂಡ್ಯ ಜಿಲ್ಲಾಸ್ಪತ್ರೆಯ ಆವರಣದಲ್ಲಿ ತಾಯಿ ಹಾಲಿನ ಬ್ಯಾಂಕ್ ತೆರೆಯಲು ಉದ್ದೇಶಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿನ ಅಮೃತಧಾರೆ ತಾಯಿ ಹಾಲು ಸಂಗ್ರಹ ಕೇಂದ್ರಕ್ಕೆ ಜಿಪಂ ಸಿಇಒ ನೇತೃತ್ವದ ತಂಡ ಭೇಟಿ ನೀಡಿ ಮಾಹಿತಿ ಪಡೆಯಿತು.ತಾಯಿ ಹಾಲು ಕೊರತೆಯುಳ್ಳ ಮಕ್ಕಳಿಗೆ ಬೇರೆ ತಾಯಂದಿರಿಂದ ಸುರಕ್ಷಿತವಾಗಿ ಸಂಗ್ರಹಿಸಲ್ಪಟ್ಟ ಹಾಲನ್ನು ನೀಡುವುದರಿಂದ ಶಿಶು ಮರಣ ಪ್ರಮಾಣವನ್ನು ಕಡಿಮೆ ಮಾಡಬಹುದು. ಶಿಶುಗಳ ಆರೋಗ್ಯ ಮತ್ತು ಪೌಷ್ಟಿಕತೆಗೆ ತಾಯಿ ಹಾಲು ಮಹತ್ವವಾದುದು. ವಾಣಿವಿಲಾಸ ಆಸ್ಪತ್ರೆಯ ಮಾದರಿಯಲ್ಲಿ ಮಂಡ್ಯ ಜಿಲ್ಲೆಯಲ್ಲಿಯೂ ತಾಯಿ ಹಾಲಿನ ಬ್ಯಾಂಕ್ ತೆರೆಯಲಾಗುವುದು ಎಂದು ತಿಳಿಸಿದ್ದಾರೆ.ಎಂಎಲ್‌ಸಿಯು ಸ್ಥಾಪನೆಗೆ ಕ್ರಮ:
ಕಡಿಮೆ ಅಪಾಯವಿರುವ ಹೆರಿಗೆಗಳನ್ನು ಸ್ವಾಭಾವಿಕವಾಗಿ ಹೆರಿಗೆ ಮಾಡಿಸಲು ಪ್ರತ್ಯೇಕ ಜಿಡಿಜ್ಛಿಛ್ಟಿ ಔಛಿ ಔಚಿಟ್ಠ್ಟ ಇಚ್ಟಛಿ ಖ್ಞಿಜಿಠಿ ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ. ಈ ಘಟಕದಲ್ಲಿ ಸ್ವಾಭಾವಿಕ ಹೆರಿಗೆಗಳನ್ನು ಮಾಡಿಸಲು ನುರಿತ ಪ್ರಸವ ಸಹಾಯಕಿಯರನ್ನು ನಿಯೋಜಿಸಿ ಶಸ್ತ್ರಚಿಕಿತ್ಸೆಗಳ ಪ್ರಮಾಣವನ್ನು ಕಡಿಮೆ ಮಾಡಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.ವಾಣಿ ವಿಲಾಸ ಆಸ್ಪತ್ರೆಯ ಭೇಟಿಯ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ (ಅಭಿವೃದ್ಧಿ) ಪಿ.ಲಕ್ಷ್ಮೀ, ಮಿಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ಪಿ.ನರಸಿಂಹಮೂರ್ತಿ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರ ನಾಗರಾಜು, ಆರೋಗ್ಯ ಇಲಾಖೆಯ ಆರ್‌ಸಿಎಚ್ ಡಾ. ಅಶ್ವಥ್, ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಡಾ. ಮನೋಹರ್, ಶಿಶು ವೈದ್ಯರಾದ ಡಾ.ಕೀರ್ತಿ ಮತ್ತು ಡಾ.ಚೇತನ್ ಇತರರಿದ್ದರು.