ಬರ ನಿರ್ಲಕ್ಷ್ಯಿಸಿದ ಅಧಿಕಾರಿಗಳ ವಿರುದ್ಧ ಜಿಪಂ ಸಿಇಒ ಜಿ.ಪ್ರಭು ಕೆಂಡ

| Published : Apr 17 2024, 01:17 AM IST / Updated: Apr 17 2024, 01:18 AM IST

ಬರ ನಿರ್ಲಕ್ಷ್ಯಿಸಿದ ಅಧಿಕಾರಿಗಳ ವಿರುದ್ಧ ಜಿಪಂ ಸಿಇಒ ಜಿ.ಪ್ರಭು ಕೆಂಡ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಕೃತಿ ವಿಕೋಪ ಪರಿಸ್ಥಿತಿಯಲ್ಲಿ ಕರ್ತವ್ಯಕ್ಕೆ ಚ್ಯುತಿ ಮಾಡುವವರಿಗೆ 6 ತಿಂಗಳ ಶಿಕ್ಷೆ ಇದೆ ಎಂದು ತುಮಕೂರು ಜಿಲ್ಲಾ ಪಂಚಾಯ್ತಿ ಸಿಇಒ ಪ್ರಭು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ಪ್ರಕೃತಿ ವಿಕೋಪ ಪರಿಸ್ಥಿತಿಯಲ್ಲಿ ಕರ್ತವ್ಯಕ್ಕೆ ಚ್ಯುತಿ ಮಾಡುವವರಿಗೆ 6 ತಿಂಗಳ ಶಿಕ್ಷೆ ಇದೆ ಎಂದು ತುಮಕೂರು ಜಿಲ್ಲಾ ಪಂಚಾಯ್ತಿ ಸಿಇಒ ಪ್ರಭು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಇಲ್ಲಿಯ ತಾಲೂಕು ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕುಡಿಯುವ ನೀರಿನ ತೊಂದರೆ ಹಾಗೂ ಬರ ನಿರ್ವಹಣೆ ಕುರಿತು ತಾಲೂಕು ಮಟ್ಟದ ಅಧಿಕಾರಿಗಳು ಮತ್ತು ಪಿಡಿಒಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಬರ ನಿರ್ವಹಣೆ ಮತ್ತು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಎಚ್ಚರಿಕೆ ಅರಿತು ಕೆಲಸ ಮಾಡಿದರೆ ಒಳಿತು, ಇಲ್ಲದಿದ್ದಲ್ಲಿ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು. ಗ್ರಾಮೀಣ ಭಾಗದ ಜನರಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ತುರ್ತು ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿ ತಿ ವ್ಯಾಪ್ತಿಯಲ್ಲಿ ಖಾಸಗಿಯವರ ಕೊಳವೆ ಬಾವಿ ಇಲ್ಲವೇ ಟ್ಯಾಂಕರ್ ಗಳ ಮೂಲಕ ಪೂರೈಸಬೇಕು. ಇದು ಪಾರದರ್ಶಕವಾಗಿ ರಬೇಕು. ನೀರು ಸರಬರಾಜು ಮಾಡುವ ಕೊಳವೆಬಾವಿ ಮಾಲೀಕರು, ಟ್ಯಾಂಕರ್ ಮಾಲೀಕರ ಬ್ಯಾಂಕ್ ಖಾತೆಗೆ ಹಣ ಹಾಕಬೇಕು ಎಂದರು. ಜನಸಂಖ್ಯೆ ಹೆಚ್ಚು ಇರುವ ಗ್ರಾಮಗಳಲ್ಲಿ ನೀರಿನ ತೊಂದರೆಯಾಗಿದ್ದರೆ ಕೂಡಲೇ ಜಿ.ಪಂ ಎಇಇಗೆ ಮಾಹಿತಿ ನೀಡಿ ಹೊಸ ಬೋರ್‌ವೆಲ್ ಕೊರೆಸಲು ಕ್ರಮ ಕೈಗೊಳ್ಳಬೇಕು. ಇಲ್ಲವೇ ಹಳೆ ಬೋರ್‌ವೆಲ್ ಇನ್ನಷ್ಟು ಆಳದವರೆಗೂ ಕೊರೆಸಿ ಕುಡಿಯುವ ನೀರನ್ನು ಒದಗಿಸಬೇಕು. ಬೇಸಿಗೆ ಕಾಲವಾಗಿದ್ದರಿಂದ ಜನರು ನೀರನ್ನು ಮಿತವಾಗಿ ಬಳಸುವಂತೆ ಅರಿವು ಮೂಡಿಸಬೇಕು. ಗ್ರಾಮೀಣ ಭಾಗದಲ್ಲಿ ಟ್ಯಾಂಕ್ ಅಕ್ಕಪಕ್ಕದಲ್ಲಿ ಬಟ್ಟೆ, ಪಾತ್ರೆ ತೊಳೆಯುವುದು, ಗಿಡಗಳಿಗೆ ಪೈಪ್ ಮೂಲಕ ಹಾಕಿಕೊಳ್ಳುವು ದನ್ನು ತಡೆಯಬೇಕು. ಅದೇ ರೀತಿ ತೆರಿಗೆ ವಸೂಲಾತಿಯಲ್ಲಿ ತಾಲೂಕು ಬಹಳ ಹಿಂದೆ ಇದೆ. ತೆರಿಗೆ ವಸೂಲಾತಿ ಮಾಡಿದರೆ ನಿಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಹಣ ಸಿಗುತ್ತದೆ. ಮುಂದಿನ ೧೫ ದಿನಗಳೊಳಗೆ ಶೇಕಡಾ ೮೦ರಷ್ಟು ತೆರಿಗೆ ವಸೂಲು ಆಗದಿದ್ದರೆ ಸಂಬಂಧಿಸಿದ ಇಒ ಮತ್ತು ಪಿಡಿಒಗಳ ಸಂಬಳವನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಸಿದರು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಬಾರದೆ ಸ್ಥಗಿತಗೊಂಡಿರುವ ಬೋರ್ ವೆಲ್ ಗಳನ್ನು ಕೂಡಲೇ ಪಿಡಿಒಗಳು ಪಟ್ಟಿ ಮಾಡಿ ಬೋರ್‌ವೆಲ್‌ನ ಆರ್.ಆರ್. ನಂಬರ್ ರದ್ದುಪಡಿಸಬೇಕು. ಬೋರ್‌ವೆಲ್‌ಗಳಿಗೆ ನಿರಂತರ ಜ್ಯೋತಿ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಆರೇಳು ಗಂಟೆ ನೀಡುವ ತ್ರೀ ಪೇಸ್ ವಿದ್ಯುತ್ ನಲ್ಲಿ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಿಲ್ಲ. ಯಾವ ಬೋರ್‌ವೆಲ್ ಗಳು ನಿರಂತರ ವಿದ್ಯುತ್ ಸಂಪರ್ಕಕ್ಕೆ ಸೇರಿಲ್ಲ ಕೂಡಲೇ ವಿದ್ಯುತ್ ಸಂಪರ್ಕ ನೀಡಲು ಬೆಸ್ಕಾಂಗೆ ಪತ್ರ ಬರೆದು ಕೋರಬೇಕು ಎಂದರು. ಜಲ ಜೀವನ್ ಮಿಷನ್ ಯೋಜನೆಯಲ್ಲಿ ಮನೆ ಮನೆಗೆ ಕೊಳಾಯಿ ಮೂಲಕ ಕುಡಿಯುವ ನೀರನ್ನು ನೀಡುವ ಕಾಮಗಾರಿ ಕೆಲವು ಕಡೆಗಳಲ್ಲಿ ಗುಣಮಟ್ಟದಲ್ಲಿ ಲೋಪದೋಷಗಳು ಕಂಡು ಬಂದಿವೆ. ಉತ್ತಮ ಗುಣಮಟ್ಟದ ಪೈಪ್, ನಲ್ಲಿಗಳು ಸೇರಿ ಉತ್ತಮ ಗುಣಮಟ್ಟದ ಸಲಕರಣೆ ಹಾಕಿ ಕಾಮಗಾರಿ ನಿರ್ವಹಿಸಬೇಕು. ಗುತ್ತಿಗೆದಾರರು ಒಂದು ವರ್ಷ ನಿರ್ವಹಣೆ ಮಾಡಬೇಕಿ ದೆ. ಯಾವುದೇ ತೊಂದರೆಯಾದರೇ ಗುತ್ತಿಗೆದಾರರೇ ಹೊಣೆ ಮಾಡಬೇಕು. ಗುಣಮಟ್ಟದ ಕಾಮಗಾರಿ ಮಾಡದ ಗುತ್ತಿಗೆದಾ ರರನ್ನು ಬ್ಲಾಕ್ ಲೀಸ್ಟ್ ಗೆ ಸೇರಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸಭೆಯಲ್ಲಿ ಸಹಾಯಕ ಚುನಾವಣಾಧಿಕಾರಿ ಮಂಜುನಾಥ್, ತಹಸೀಲ್ದಾರ್ ವೈ.ಎಂ.ರೇಣುಕುಮಾರ್, ಇ.ಓ. ಶಿವರಾಜಯ್ಯ, ಕುಡಿಯುವ ನೀರು ನೈರ್ಮಲ್ಯ ಇಲಾಖೆ ಎಇಇ ನರಸಿಂಹಮೂರ್ತಿ, ಎ.ಇ.ರವಿಕುಮಾರ್, ಸೇರಿದಂತೆ ವಿವಿಧ ಇಲಾಖಾ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಓಗಳು, ಕಾರ್ಯದರ್ಶಿಗಳು ಇದ್ದರು.