ಸಾರಾಂಶ
ಕನ್ನಡಪ್ರಭ ವಾರ್ತೆ ಮುಧೋಳ ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಉನ್ನತ ಮಟ್ಟದ ಪದವಿ ಪಡೆಯಲು ಬಿವಿವಿಯಂತಹ ಶಿಕ್ಷಣ ಸಂಸ್ಥೆಗಳು ಕಾರಣವಾಗಿವೆ. ಹೀಗಾಗಿ ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಬೇಕು. ತಮ್ಮ ಜ್ಞಾನಾಭಿವೃದ್ಧಿಯಾಗಬೇಕಾದರೆ ಮೊಬೈಲ್ ಹಿಡಿಯುವ ಕೈಯಲ್ಲಿ ಪುಸ್ತಕ ಹಿಡಿಯುವುದು ಅವಶ್ಯಕವಿದೆ ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿ ಆಡಳಿತ ವಿಭಾಗದ ಕುಲಸಚಿವ ಎಸ್.ಎಸ್.ಸೋಮನಾಳ ಹೇಳಿದರು.
ಕನ್ನಡಪ್ರಭ ವಾರ್ತೆ ಮುಧೋಳ
ಗ್ರಾಮೀಣ ಪ್ರದೇಶದ ವಿದ್ಯಾರ್ಥಿನಿಯರು ಉನ್ನತ ಮಟ್ಟದ ಪದವಿ ಪಡೆಯಲು ಬಿವಿವಿಯಂತಹ ಶಿಕ್ಷಣ ಸಂಸ್ಥೆಗಳು ಕಾರಣವಾಗಿವೆ. ಹೀಗಾಗಿ ವಿದ್ಯಾರ್ಥಿಗಳು ಸತತ ಅಧ್ಯಯನಶೀಲರಾಗಬೇಕು. ತಮ್ಮ ಜ್ಞಾನಾಭಿವೃದ್ಧಿಯಾಗಬೇಕಾದರೆ ಮೊಬೈಲ್ ಹಿಡಿಯುವ ಕೈಯಲ್ಲಿ ಪುಸ್ತಕ ಹಿಡಿಯುವುದು ಅವಶ್ಯಕವಿದೆ ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿವಿ ಆಡಳಿತ ವಿಭಾಗದ ಕುಲಸಚಿವ ಎಸ್.ಎಸ್.ಸೋಮನಾಳ ಹೇಳಿದರು.ನಗರದ ದಾನಮ್ಮದೇವಿ ಮಹಿಳಾ ಮಹಾವಿದ್ಯಾಲಯದ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮೂಹ ಮಾಧ್ಯಮಗಳನ್ನು ನಿಮ್ಮ ಜ್ಞಾನ ಸಾಧನೆಯ ಮಾಧ್ಯಮವಾಗಿ ಬಳಕೆ ಮಾಡುವುದರ ಮೂಲಕ ತಾವು ಕಂಡ ಗುರಿಯಲ್ಲಿ ಯಶಸ್ವಿಯಾಗಿರಿ ಎಂದು ಹೇಳಿದರು.
ಪ್ರಾಚಾರ್ಯ ಪ್ರೊ.ಎಂ.ಎಂ.ಹಿರೇಮಠ ಅಧ್ಯಕ್ಷತೆ ಮಾತನಾಡಿ, ವಿದ್ಯಾರ್ಥಿನಿಯರು ಕೇವಲ ಪಠ್ಯ ವಿಷಯಗಳ ಕಡೆಗಷ್ಟೇ ಗಮನಹರಿಸದೆ ಮುಂದಿನ ದಿನಗಳಲ್ಲಿ ವಿಶ್ವವಿದ್ಯಾಲಯವು ಆಯೋಜನೆ ಮಾಡುವ ಯುವಜನೋತ್ಸವದಂತಹ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಈ ಮೂಲಕ ಬಹುಮಾನ ಪಡೆದು ಮಹಾವಿದ್ಯಾಲಯಕ್ಕೆ ಕೀರ್ತಿ ತರುವಂತವರಾಗಬೇಕೆಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷ ಪ್ರೊ.ಎಸ್.ಕೆ ಸಾರವಾಡ ಸ್ವಾಗತಿಸಿದರು. ಡಾ.ಪಿ.ವಿ.ಮನಗೂಳಿ ಪರಿಚಯಿಸಿದರು. ಪ್ರೊ.ಬಿ.ಎನ್.ಬಾರಕೇರ ಹಾಗೂ ಪ್ರೊ.ಎಸ್.ಬಿ.ಕಬ್ಬಿಣದ ನಿರೂಪಿಸಿದರು. ಪ್ರೊ.ಎಲ್.ಬಿ.ಹನುಮರ ವಂದಿಸಿದರು. ಮಹಾವಿದ್ಯಾಲಯದ ಎಲ್ಲ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.