ಬೇಸಿಗೆ ರಜೆ ನೀಡಲು ಪದವಿ ಕಾಲೇಜು ಅಧ್ಯಾಪಕರ ಆಗ್ರಹ

| Published : Apr 14 2024, 01:50 AM IST

ಬೇಸಿಗೆ ರಜೆ ನೀಡಲು ಪದವಿ ಕಾಲೇಜು ಅಧ್ಯಾಪಕರ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಗುವಿವಿ ವ್ಯಾಪ್ತಿಯ ಸರಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಕಾಲೇಜು ಅಧ್ಯಾಪಕರಿಗೆ ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಕುಲಪತಿಗಳಲ್ಲಿ ಆಗ್ರಹಿಸಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಬೇಸಿಗೆ ರಜೆ ನೀಡಬೇಕೆಂದು ಕರ್ನಾಟಕ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಅಡಿಯಲ್ಲಿ ಬರುವ ಗುವಿವಿ ವ್ಯಾಪ್ತಿಯ ಸರಕಾರಿ, ಅನುದಾನಿತ, ಅನುದಾನ ರಹಿತ ಮತ್ತು ಖಾಸಗಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪದವಿ ಕಾಲೇಜು ಅಧ್ಯಾಪಕರಿಗೆ ಹೈದ್ರಾಬಾದ ಕರ್ನಾಟಕ ಸರಕಾರಿ ಕಾಲೇಜು ಅಧ್ಯಾಪಕರ ಸಂಘವು ಕುಲಪತಿಗಳಲ್ಲಿ ಆಗ್ರಹಿಸಿದೆ.

ಶೈಕ್ಷಣಿಕ ವ್ಯವ್ಯಸ್ಥೆಯಲ್ಲಿ ಉಂಟಾದ ವ್ಯತ್ಯಾಸಗಳನ್ನು ಸರಿದೂಗಿಸಿಕೊಳ್ಳಲು ವಿಶ್ವವಿದ್ಯಾಲಯವು ಕೇವಲ ಅಧ್ಯಾಪಕರನ್ನೆ ಮಾತ್ರ ಗುರಿಯಾಗಿಸಿಕೊಂಡಿದೆ. ಇದರಿಂದಾಗಿ ಅಧ್ಯಾಪಕರ ಶೈಕ್ಷಣಿಕ ಸಾಮಥ್ರ್ಯವು ತೀವ್ರವಾಗಿ ಕುಂಟಿತಗೊಳ್ಳುತ್ತಿದೆ.ಅಂದರೆ ಮಧ್ಯಂತರ ರಜೆ ಆಗಿರಬಹುದು ಅಥವಾ ಬೇಸಿಗೆ ರಜೆ ಆಗಿರಬಹುದು ಯಾವುದೇ ಪ್ರಕಾರದ ರಜೆಗಳು ಇಲ್ಲದಂತಾಗಿ ಅಧ್ಯಾಪಕರು ಮಾನಸಿಕ ಒತ್ತಡದಲ್ಲಿದ್ದಾರೆ. ಈಗಾಗಲೇ ರಾಜ್ಯದ ಬೇರೆ ಬೇರೆ ವಿಶ್ವವಿದ್ಯಾಲಯಗಳು ರಜೆ ನೀಡಿದ್ದು ತಾವೂ ಅದೇ ಮಾರ್ಗ ಅನುಸರಿಸಿ, ಏ. 20 ರಿಂದ ಮೇ 20 ರ ವರೆಗೆ ರಜೆ ನೀಡಬೇಕು. ರಣ ಬೇಸಿಗೆಯಿಂದ ನಮಗೆ ಮುಕ್ತಿ ಕೊಡಬೇಕು ಎಂದು ಅಧ್ಯಾಪಕರು ಕೋರಿದ್ದಾರೆ.

ಸರಕಾರಿ ಕಾಲೇಜುಗಳ ಕಟ್ಟಡಗಳು ಈಗಾಗಲೇ ಚುನಾವಣೆಗಾಗಿ ಸರಕಾರ ಕಬ್ಜಾ ಮಾಡಿಕೊಂಡ ಕಾರಣಕ್ಕಾಗಿ ವಿದ್ಯಾರ್ಥಿಗಳು ಸಹ ಕಾಲೇಜಿಗೆ ಸರಿಯಾಗಿ ಹಾಜರಾಗುತ್ತಿಲ್ಲ. ಈಗಾಗಲೇ 2 ಮತ್ತು 4ನೇ ಸೆಮೆಸ್ಟರ್ ಪಠ್ಯಕ್ರಮವು ಸಹ ಪೂರ್ಣಗೊಳಿಸಲಾಗಿದೆ. ಹಾಗಾಗಿ ವಿಶ್ವವಿದ್ಯಾಲಯದ ಅಕಾಡೆಮಿಕ್ ಕ್ಯಾಲೆಂಡರ್ ಹಾಗೂ ಪರೀಕ್ಷೆ ವಿಭಾಗ ತಾಳಮೇಳವಿಲ್ಲದ ಪ್ರಯುಕ್ತ ಅಧ್ಯಾಪಕರ ವಿಶೇಷ ರಜೆಗಳು ಈಗಾಗಲೇ ಮುಗಿದಿರುತ್ತವೆ. ಹಾಗಾಗಿ ಆಯಾ ಕಾಲೇಜಿನ ಪ್ರಾಂಶುಪಾಲರು ಅಧ್ಯಾಪಕರನ್ನು ಉತ್ತರ ಪತ್ರಿಕೆಗಳ ಮೌಲ್ಯಮಾಪನ ಕಾರ್ಯ ಕೈಗೊಳ್ಳುವುದಕ್ಕೆ ಹಲವಾರು ನಿರ್ಬಂಧಗಳನ್ನು ಹಾಕುತ್ತಿದ್ದಾರೆ. ಒಂದು ವೇಳೆ ಕಾಲೇಜು ಅಧ್ಯಾಪಕರಿಗೆ ರಜೆಯ ಅವಧಿಯ ಅಂತರವನ್ನು ಸರಿದೂಗಿಸಿಕೊಳ್ಳಲು ತಕ್ಷಣವೇ ‘ಗಳಿಕೆ ರಜೆ’ ನೀಡಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದೂ ಸಂಘ ಆಗ್ರಹಿಸಿದೆ.

ಕುಲಪತಿ ಪ್ರೊ.ದಯಾನಂದ ಅಗಸರ ಅವರಿಗೆ ಮನವಿ ಸಲ್ಲಿಸಲಾಯಿತು. ಕುಲಸಚಿವರಾದ ಡಾ.ಮೇಧಾವಿನಿ ಕಟ್ಟಿ ಮತ್ತು ಹಣಕಾಸು ಅಧಿಕಾರಿಗಳಾದ ಗಾಯಿತ್ರಿ ಅ‍ರಿಗೆ ಸಂಘದ ಪರವಾಗಿ ಮನವಿ ಸಲ್ಲಿಸಲಾಯ್ತು. ಗುವಿವಿ ಖಾಸಗಿ ಕಾಲೇಜು ಅಧ್ಯಾಪಕರ ಸಂಘದ ಅಧ್ಯಕ್ಷರಾದ ಡಾ. ನೀಲಕಂಠ ಕಣ್ಣಿ,ಕರ್ನಾಟಕ ರಾಜ್ಯ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಡಾ.ಜಗನ್ನಾಥ ತಳವಾರ, ಪಂಡಿತ ಬಿ.ಕೆ, ಡಾ.ಶರಣಪ್ಪ ಗುಂಡಗುರ್ತಿ, ಡಾ.ಮಾರುತಿ ಮಾರಪಳ್ಳಿ, ಡಾ.ವೆಂಕಟೇಶ ಪೂಜಾರಿ,ಡಾಲಕ್ಷ್ಮಣ ಬೋಸ್ಲೆ, ಡಾ.ಅಂಬರಾಯ ಹಾಗರಗಿ,ಡಾ.ದಯಾನಂದ ಹಾಗೂ ನೂರಾರು ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.