ಸಾರಾಂಶ
ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಪ್ರಪಂಚದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯವು ಅಗತ್ಯವಿದೆ ಎಂದು ಗೋಕುಲ ಶಿಕ್ಷಣ ಪ್ರತಿಷ್ಠಾನದ ಮುಖ್ಯ ಶೈಕ್ಷಣಿಕ ಸಲಹೆಗಾರ ಹಾಗೂ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಾಜಿ ಉಪಕುಲಪತಿ ಡಾ. ಕರಿಸಿದ್ದಪ್ಪ ತಿಳಿಸಿದರು. ಮೊದಲು ತಮ್ಮನ್ನು ತಾವು ಅರ್ಥ ಮಾಡಿಕೊಂಡು ಸಮಾಜ ನಮ್ಮಿಂದ ಏನ್ನನ್ನು ನೀರೀಕ್ಷೆ ಮಾಡುತ್ತಿದೆ ಎಂಬ ಬಗ್ಗೆ ಯೋಚಿಸಿ ಅದಕ್ಕೆ ಅನುಗುಣವಾಗಿ ಶಿಕ್ಷಣ ಪಡೆದಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಲು ಸಾಧ್ಯ. ತಾಯಿಯೇ ಮೊದಲ ಗುರು, ತಾಯಿಗಿಂತ ಬೇರೆ ಗುರು ಸಿಗಲು ಸಾಧ್ಯವಿಲ್ಲ ಎಂದರು.
ಹಾಸನ: ಅಭಿವೃದ್ಧಿ ಪಥದತ್ತ ಸಾಗುತ್ತಿರುವ ಪ್ರಪಂಚದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆಗೆ ಕೌಶಲ್ಯವು ಅಗತ್ಯವಿದೆ ಎಂದು ಗೋಕುಲ ಶಿಕ್ಷಣ ಪ್ರತಿಷ್ಠಾನದ ಮುಖ್ಯ ಶೈಕ್ಷಣಿಕ ಸಲಹೆಗಾರ ಹಾಗೂ ರಾಮಯ್ಯ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಮಾಜಿ ಉಪಕುಲಪತಿ ಡಾ. ಕರಿಸಿದ್ದಪ್ಪ ತಿಳಿಸಿದರು.
ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ ಕಂದಲಿಯ ನವ್‌ಕಿಸ್ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, ಪದವಿ ಪಡೆಯುವುದಷ್ಟೇ ಮುಖ್ಯವಲ್ಲ, ಶಿಕ್ಷಣ ಪಡೆದ ನಂತರ ಉದ್ಯೋಗ ಹುಡುಕಿಕೊಂಡು ಹೊರಟಾಗ ನಿಜವಾದ ಸವಾಲುಗಳು ಎದುರಾಗುತ್ತವೆ. ಆಗ ಶಿಕ್ಷಣದ ಜೊತೆಗೆ ಕೌಶಲ್ಯ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಲಹೆ ನೀಡಿದರು. ಮೊದಲು ತಮ್ಮನ್ನು ತಾವು ಅರ್ಥ ಮಾಡಿಕೊಂಡು ಸಮಾಜ ನಮ್ಮಿಂದ ಏನ್ನನ್ನು ನೀರೀಕ್ಷೆ ಮಾಡುತ್ತಿದೆ ಎಂಬ ಬಗ್ಗೆ ಯೋಚಿಸಿ ಅದಕ್ಕೆ ಅನುಗುಣವಾಗಿ ಶಿಕ್ಷಣ ಪಡೆದಲ್ಲಿ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬದುಕಲು ಸಾಧ್ಯ. ತಾಯಿಯೇ ಮೊದಲ ಗುರು ಅವರು ಪ್ರತಿದಿನ ಇಡೀ ಕುಟುಂಬವನ್ನು ಎಲ್ಲವನ್ನೂ ಸಂಭಾಳಿಸಿ ಎಲ್ಲದರಲ್ಲೂ ಸಮತೋಲನ ಕಾಯ್ದುಕೊಂಡು ಕುಟುಂಬ ನಿರ್ವಹಣೆ ಮಾಡುವ ತಾಯಿಗಿಂತ ಬೇರೆ ಗುರು ಸಿಗಲು ಸಾಧ್ಯವಿಲ್ಲ ಎಂದರು.ಗುರು, ಹಿರಿಯರು ಹಾಗೂ ಕುಟುಂಬ ಹಾಗೂ ಸ್ನೇಹಿತರಿಗೆ ಗೌರವ ನೀಡದ ವ್ಯಕ್ತಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಿಲ್ಲ, ಆದುದರಿಂದ ವಿಧ್ಯಾರ್ಥಿ ಹಂತದಲ್ಲೇ ತಮ್ಮ ಉತ್ತಮ ಸಂಸ್ಕಾರ ಕಲಿಯುವುದು ಅಗತ್ಯ, ವಿಧ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕೌಶಲ್ಯಗಳನ್ನು ನೀಡುವ ನಿಟ್ಟಿನಲ್ಲಿ ನಾವ್ ಕಿಸ್ ಕಾಲೇಜ್ ಆಫ್ ಇಂಜಿನಿಯರಿಂಗ್ ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ. ವೇಣುಗೋಪಾಲ ರಾವ್, ಸಂಸ್ಥೆಯ ಪ್ರಾಧ್ಯಾಪಕರಾದ ಡೀನ್ ಡಾ.ಶ್ರೀಪಾದ್ ಮಾರ್ಕಂಡೆ, ಪ್ರೊ. ಡಾ. ಬಬಿತಾ ಜೈನ್, ಸಂಯೋಜಕರಾದ ಸತೀಶ್, ಸಹಾಯಕ ಸಂಯೋಜಕರಾದ ಡಾ.ವಿನುತ, ಡಾ. ಮಂಜುನಾಥ್, ಡಾ. ಮೋಹನ್ ಕುಮಾರ್, ಡಾ. ರಾಘವೇಂದ್ರ, ಡಾ. ಕಿರಣ್ ಕುಮಾರ್, ಡಾ. ಮೈನಾ, ಮಂಜುನಾಥ್, ವರದರಾಜು, ವಿಶ್ವನಾಥ್ ಇತರರು ಇದ್ದರು.