ಕೊಡಗು ವಿದ್ಯಾಲಯದಲ್ಲಿ ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಸಮಾರಂಭ

| Published : Apr 07 2024, 01:54 AM IST

ಸಾರಾಂಶ

ಕೊಡಗು ವಿದ್ಯಾಲಯ ಶಾಲೆಯಲ್ಲಿ ಪದವಿ ಪ್ರದಾನ ಸಮಾರಂಭ ಜರುಗಿತು. ಈ ಸಂದರ್ಭ ಮಕ್ಕಳಿಂದ ವಿಭಿನ್ನ ರೀತಿಯ ನೃತ್ಯ ಪ್ರದರ್ಶನ ನಡೆಯಿತು.

ಕನ್ನಡಪ್ರಭ ವಾರ್ತೆ ಮಡಿಕೇರಿ

ನಗರದ ಕೊಡಗು ವಿದ್ಯಾಲಯ ಶಾಲೆಯಲ್ಲಿ ಯು ಕೆ ಜಿ ಮಕ್ಕಳಿಗೆ ಪದವಿ ಪ್ರದಾನ ಸಮಾರಂಭ ಜರುಗಿತು.

ಸುಂಟಿಕೊಪ್ಪದ ಶಾಂತಿ ಭವನ್ ನರ್ಸರಿ ಶಾಲೆಯ ಸಂಸ್ಥಾಪಕಿ ಲಿಂಡಾ ಸಿಂಗಮ್ ಯುಕೆಜಿ ಮಕ್ಕಳಿಗೆ ಪದವಿ ಪ್ರದಾನ ಮಾಡಿ ಮಾತನಾಡಿ, ಸಣ್ಣ ಮಕ್ಕಳು ಉದ್ಯಾನವನದಲ್ಲಿ ಇರುವ ಹೂವಿನ ಹಾಗೆ. ಪುಪ್ಪ ಸಸಿಯಲ್ಲಿರುವ ಮೊಗ್ಗು ಎಷ್ಟು ಸುಂದರವಾದ ಹೂವಾಗಿ ಅರಳುತ್ತದೋ, ಅದೇ ರೀತಿ ಸುಂದರ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ತಾಳ್ಮೆ ಮುಖ್ಯ ಎಂದು ಪೋಷಕರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲ ಸುಮಿತ್ರ ಕೆ.ಎಸ್., ಆಡಳಿತ ನಿರ್ವಹಣಾಧಿಕಾರಿ ರವಿ ಪಿ, ಆಡಳಿತ ಮಂಡಳಿ ಸದಸ್ಯ ಸಿ. ಎಸ್. ಗುರುದತ್ತ್, ಹಿರಿಯ ವಕೀಲರು ಹಾಗೂ ಶಾಲೆಯ ಕಾನೂನು ಸಲಹೆಗಾರ ಕಿಶೋರ್ ಡಿ. ಜಿ, ಪೋಷಕರು, ಬೋಧಕ ಹಾಗೂ ಬೋಧಕೇತರ ವರ್ಗದವರು ಪಾಲ್ಗೊಂಡಿದ್ದರು.

ಪ್ಲೆ ಹೋಮ್, ಎಲ್ ಕೆ ಜಿ, ಯುಕೆಜಿ ಹಾಗೂ ಒಂದನೇ ತರಗತಿಯ ಪುಟಾಣಿ ಮಕ್ಕಳಿಂದ ವಿಭಿನ್ನ ರೀತಿಯ ನೃತ್ಯ ಪ್ರದರ್ಶನ ನೆರೆದಿದ್ದ ಪೋಷಕರ ಕಣ್ಮನ ಸೆಳೆದವು.

ಕಾರ್ಯಕ್ರಮದ ಕೊನೆಯಲ್ಲಿ ಆಕಾಶ ಬುಟ್ಟಿಯನ್ನು ಹಾರಿಸಲಾಯಿತು.