ಸಾರಾಂಶ
ಪಟ್ಟಣದ ಶಾಲಿನಿ ಇಂಟರ್ನ್ಯಾಷನಲ್ ಸ್ಕೂಲ್‌ನ ಶಾಲಿನಿ ಜ್ಯೂನಿಯರ್ ವಿಂಗ್ಸ್ ನ ಯುಕೆಜಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ಸವ ಸಮಾರಂಭವನ್ನು ಆಚರಿಸಲಾಯಿತು.
ಚನ್ನರಾಯಪಟ್ಟಣ: ಪಟ್ಟಣದ ಶಾಲಿನಿ ಇಂಟರ್ನ್ಯಾಷನಲ್ ಸ್ಕೂಲ್‌ನ ಶಾಲಿನಿ ಜ್ಯೂನಿಯರ್ ವಿಂಗ್ಸ್ ನ ಯುಕೆಜಿ ವಿದ್ಯಾರ್ಥಿಗಳಿಗೆ ಸ್ನಾತಕೋತ್ಸವ ಸಮಾರಂಭವನ್ನು ಆಚರಿಸಲಾಯಿತು. ಪುಟ್ಟ ಮಕ್ಕಳ ಪ್ರತಿಭೆ ಮತ್ತು ಆತ್ಮವಿಶ್ವಾಸವನ್ನು ಪ್ರದರ್ಶಿಸುವಂತಹ ಹಲವಾರು ಮನರಂಜನೆಯ ಕಾರ್ಯಕ್ರಮಗಳು ನಡೆದವು. ಮಕ್ಕಳು ನೃತ್ಯ ಮತ್ತು ಭಾಷಣಗಳ ಮೂಲಕ ತಮ್ಮ ಪೋಷಕರನ್ನು ಸಂತಸ ಪಡಿಸಿದರು. ಈ ಸಮಾರಂಭದಲ್ಲಿ ಡಿವೈಎಸ್‌ಪಿ ಕುಮಾರ್ ರವರು ಹಾಜರಿದ್ದು, ಇದು ಮಕ್ಕಳಿಗೆ ಹೊಸ ಅಧ್ಯಾಯದ ಪ್ರಾರಂಭ. ಅವರ ಭವಿಷ್ಯ ಬೆಳಕಿನಿಂದ ತುಂಬಿರಲಿ ಎಂದು ಹಾರೈಸಿ ಮಕ್ಕಳಿಗೆ ಸ್ನಾತಕೋತ್ಸವ ಪ್ರಮಾಣ ಪತ್ರಗಳನ್ನು ವಿತರಿಸಿದರು. ಶಾಲೆಯ ಕಾರ್ಯದರ್ಶಿ ಸಿ. ಎನ್. ಅಶೋಕ್, ಪ್ರಾಂಶುಪಾಲೆ ಮಮತಾ ಸೋಮಶೇಖರ್, ಮುಖ್ಯೋಪಾಧ್ಯಾಯರಾದ ದೀಪ್ತಿ ಸೋಫಿಯಾ, ಶಿಕ್ಷಕರು ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.