ಕಾರಿನಲ್ಲೇ ಶವವಾದ ಗ್ರಾಪಂ ಸಹಾಯಕ ಲೆಕ್ಕಪರಿಶೋಧಕ

| Published : Apr 20 2025, 01:54 AM IST

ಸಾರಾಂಶ

ಚನ್ನರಾಯಪಟ್ಟಣದ ರಾಮೇಶ್ವರ ಬಡಾವಣೆ ಬಳಿ ಅವರದೇ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶಿವಪ್ರಸಾದ್ (32) ತೀವ್ರ ಕುಡಿತದ ಚಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ರಾಮೇಶ್ವರ ಬಡಾವಣೆಯ ಬಳಿ ಸಾಕಷ್ಟು ಸಮಯದಿಂದ ಕಾರು ನಿಂತಿದ್ದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾರಿನೊಳಗೆ ಕೀ ಇದ್ದು ಕಾರು ಲಾಕ್‌ ಆಗಿತ್ತು. ಮೆಕ್ಯಾನಿಕ್‌ ಕರೆಸಿ ಕಾರಿನ ಬಾಗಿಲು ತೆರೆದಾಗ ಅದರೊಳಗೆ ಶಿವಪ್ರಸಾದ್‌ ಮೃತಪಟ್ಟಿದ್ದರು.

ಕನ್ನಡಪ್ರಭ ವಾರ್ತೆ ಹಾಸನ

ಚನ್ನರಾಯಪಟ್ಟಣ ತಾಲೂಕಿನ ದಿಡಿಗ ಗ್ರಾಮ ಪಂಚಾಯ್ತಿಯಲ್ಲಿ ಅಸಿಸ್ಟೆಂಟ್ ಅಕೌಂಟೆಂಟ್ ಆಗಿದ್ದ ಶಿವಪ್ರಸಾದ್‌ ಎಂಬುವವರು ತನ್ನದೇ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಚನ್ನರಾಯಪಟ್ಟಣದ ರಾಮೇಶ್ವರ ಬಡಾವಣೆ ಬಳಿ ಅವರದೇ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶಿವಪ್ರಸಾದ್ (32) ತೀವ್ರ ಕುಡಿತದ ಚಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ರಾಮೇಶ್ವರ ಬಡಾವಣೆಯ ಬಳಿ ಸಾಕಷ್ಟು ಸಮಯದಿಂದ ಕಾರು ನಿಂತಿದ್ದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾರಿನೊಳಗೆ ಕೀ ಇದ್ದು ಕಾರು ಲಾಕ್‌ ಆಗಿತ್ತು. ಮೆಕ್ಯಾನಿಕ್‌ ಕರೆಸಿ ಕಾರಿನ ಬಾಗಿಲು ತೆರೆದಾಗ ಅದರೊಳಗೆ ಶಿವಪ್ರಸಾದ್‌ ಮೃತಪಟ್ಟಿದ್ದರು. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.