ಕನಿಷ್ಠ ಕೂಲಿ ಆದೇಶ ಜಾರಿ ಮಾಡುವಂತೆ ಒತ್ತಾಯಿಸಿ ಗ್ರಾಪಂ ನೌಕರರ ಪ್ರತಿಭಟನೆ

| Published : Jul 29 2025, 01:01 AM IST

ಕನಿಷ್ಠ ಕೂಲಿ ಆದೇಶ ಜಾರಿ ಮಾಡುವಂತೆ ಒತ್ತಾಯಿಸಿ ಗ್ರಾಪಂ ನೌಕರರ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ವೈಜ್ಞಾನಿಕ ಕನಿಷ್ಠ ಕೂಲಿ ಆದೇಶವನ್ನು ವಿಳಂಬ ಮಾಡದೇ ತಕ್ಷಣ ಜಾರಿ ಮಾಡಬೇಕೆಂದು ಒತ್ತಾಯಿಸಿ ನಗರದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ವೈಜ್ಞಾನಿಕ ಕನಿಷ್ಠ ಕೂಲಿ ಆದೇಶವನ್ನು ವಿಳಂಬ ಮಾಡದೇ ತಕ್ಷಣ ಜಾರಿ ಮಾಡಬೇಕೆಂದು ಒತ್ತಾಯಿಸಿ ನಗರದಲ್ಲಿ ಗ್ರಾಮ ಪಂಚಾಯಿತಿ ನೌಕರರ ಸಂಘದಿಂದ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ಮಾತನಾಡಿ,ಸರ್ಕಾರವು "ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ದುಡಿಯುವ ನೌಕರರಿಗೆ ಕನಿಷ್ಠ ವೇತನವನ್ನು ನೀಡುತ್ತಿರುವ ಬಗ್ಗೆ ಉಚ್ಚನ್ಯಾಯಾಲಯದಲ್ಲಿ ರಾಜ್ಯ ಸಂಘವು ಪ್ರಶ್ವೆ ಮಾಡಿತ್ತು ವಾದ-ವಿವಾದಗಳು ನಡೆದು ಏಕ ಸದಸ್ಯ ಪೀಠವು ಸುಪ್ರೀಂ ಕೋರ್ಟ್ ಮಾರ್ಗದರ್ಶನದಂತೆ ಕನಿಷ್ಠ ವೇತನ ನಿಗದಿ ಪಡಿಸಲು ೧೦ ವಾರಗಳ ಗಡುವು ನೀಡಿತ್ತು. ಸರ್ಕಾರ ಕನಿಷ್ಟ ವೇತನದ ಅಧಿಸೂಚನೆ ರದ್ದು ಮಾಡಿ ಮತ್ತೆ ಸರ್ಕಾರ ಕನಿಷ್ಠ ವೇತನ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು ತಿಳಿಸಿದೆ ಎಂದರು.

ಕರವಸೂಲಿಗಾರ/ಗುಮಾಸ್ತ/ಕ್ಲರ್ಕ್ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಈ ಹುದ್ದೆಗಳಲ್ಲಿ ಕೆಲಸ ನಿರ್ವಹಿಸುವವವರಿಗೆ ಮೂಲ ವೇತನ ₹೩೮,೦೨೧ ನಿಗದಿಪಡಿಸಬೇಕು. ವಾಟರ್‌ಮೆನ್ (ನೀರುಗಂಟಿ), ಪಂಪ್ ಆಪರೇಟರ್ ಕಂ ಮೆಕ್ಯಾನಿಕ್ ಹುದ್ದೆಗಳಿಗೆ ಮೂಲ ವೇತನ ₹೩೩,೦೬೨ ನಿಗದಿಪಡಿಸಬೇಕೆಂದು ಒತ್ತಾಯಿಸಿದರು. ಅಟೆಂಡರ್/ಜವಾನರಿಗೆ ಮೂಲ ವೇತನ ₹೨೮,೭೫೦,ಸ್ವಚ್ಛತಾಗಾರರಿಗೆ ₹೨೫,೦೦೦ ನಿಗದಿ ಮಾಡಬೇಕು. ಕನಿಷ್ಟ ವೇತನದ ಜಾರಿಯನ್ನು ಕಳೆದ ಜನವರಿಯಿಂದಲೇ ಜಾರಿ ಮಾಡೆಬೇಕು, ಗ್ರಾಮ ಪಂಚಾಯಿತಿಗಳಲ್ಲಿ ದುಡಿಯುವ ಸಿಬ್ಬಂದಿಗಳಿಗೆ ಸೇವಾ ಹಿರಿತನದ ಮಾನ್ಯತೆ ನೀಡಿ ಶೇ.೨ ಹೆಚ್ಚಳವನ್ನು ಪ್ರತಿ ವರ್ಷ ಪರಿಗಣಿಸಿ ಹೆಚ್ಚುವರಿ ಭತ್ಯೆ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಬಸವಣ್ಣ, ಪ್ರದಾನಕಾರ್ಯದರ್ಶಿ ಅಮ್ಮನಪುರ ಸುರೇಶ್, ಖಜಾಂಚಿ ದೊರೆಸ್ವಾಮಿ, ಕೃಷ್ಣ, ಕೃಷ್ಣನಾಯಕ, ಆರ್. ಮಹದೇವಸ್ವಾಮಿ, ರಾಜಣ್ಣ ಇತರರು ಭಾಗವಹಿಸಿದ್ದರು.