ಸಾರಾಂಶ
ತಾಲೂಕಿನ ಗ್ರಾಮ ಪಂಚಾಯಿತಿ ನೌಕರರು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಕ್ಷ್ಮೇಶ್ವರ ತಾಪಂ ಕಚೇರಿ ಎದುರು ಲಕ್ಷ್ಮೇಶ್ವರ ತಾಲೂಕಿನ ಗ್ರಾಪಂ ನೌಕರರ ಸಂಘ ಹಾಗೂ ಸಿಐಟಿಯು ಸಂಘದ ಸಹಯೋಗದಲ್ಲಿ ಬುಧವಾರ ತಾಪಂ ಎದುರು ಪ್ರತಿಭಟನೆ ನಡೆಸಿ ತಾಪಂ ಇಓ ಕೃಷ್ಣಪ್ಪ ಧರ್ಮರ ಅವರಿಗೆ ಮನವಿ ಸಲ್ಲಿಸಿದರು.
ಲಕ್ಷ್ಮೇಶ್ವರ: ತಾಲೂಕಿನ ಗ್ರಾಮ ಪಂಚಾಯಿತಿ ನೌಕರರು ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಕ್ಷ್ಮೇಶ್ವರ ತಾಪಂ ಕಚೇರಿ ಎದುರು ಲಕ್ಷ್ಮೇಶ್ವರ ತಾಲೂಕಿನ ಗ್ರಾಪಂ ನೌಕರರ ಸಂಘ ಹಾಗೂ ಸಿಐಟಿಯು ಸಂಘದ ಸಹಯೋಗದಲ್ಲಿ ಬುಧವಾರ ತಾಪಂ ಎದುರು ಪ್ರತಿಭಟನೆ ನಡೆಸಿ ತಾಪಂ ಇಓ ಕೃಷ್ಣಪ್ಪ ಧರ್ಮರ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಲಕ್ಷ್ಮೇಶ್ವರ ತಾಲೂಕಿನ ಗ್ರಾಪಂ ನೌಕರರ ಸಂಘದ ಅಧ್ಯಕ್ಷ ಬಸವರಾಜ ಅರ್ಕಸಾಲಿ ಮಾತನಾಡಿ, ಗ್ರಾಪಂ ನೌಕರರು ಕಳೆದ ಹಲವು ವರ್ಷಗಳಿಂದ ನಮ್ಮ ಬೇಡಿಕೆಗಳಾದ ವೇತನ ಪರಿಷ್ಕರಣೆ, ಆರೋಗ್ಯ ಸೇವೆ, ಪಿಂಚಣಿ ಹಾಗೂ ಗ್ರಾಪಂ ನೌಕರರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಹಲವು ವರ್ಷಗಳಿಂದ ಸರ್ಕಾರವನ್ನು ಒತ್ತಾಯಿಸುತ್ತ ಬಂದಿದ್ದಾರೆ. ಇಲ್ಲಿಯವರೆಗೂ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವ ಕಾರ್ಯ ಮಾಡಿಲ್ಲ, ಆದ್ದರಿಂದ ನಮ್ಮ ಬೇಡಿಕೆಗಳಿಗೆ ಸರ್ಕಾರ ಕೂಡಲೆ ಒಪ್ಪಿಗೆ ನೀಡಬೇಕು ಎಂದು ಅವರು ಹೇಳಿದರು.ಮಹಾಂತೇಶ ಸುಣಗಾರ ಮಾತನಾಡಿ, ಗ್ರಾಪಂ ನೌಕರರು ಕಳೆದ ಹಲವು ವರ್ಷಗಳಿಂದ ಕಡಿಮೆ ಸಂಬಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ ಗ್ರಾಪಂ ನೌಕರರ ಸಂಬಳ ಹೆಚ್ಚಳ, ಪಿಂಚಣಿ ಯೋಜನೆ ಹಾಗೂ ಆರೋಗ್ಯ ಭತ್ಯೆ ನೀಡುವ ಮೂಲಕ ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದರು.ಈ ವೇಳೆ ಮಹಾಂತೇಶ ಮೂಲಿಮನಿ, ನಿಂಗರಾಜ ಬಾಗವಾಡ, ಸಿದ್ದು ಹರದಗಟ್ಟಿ, ಹನುಮಂತಗೌಡ ಮರಿಲಿಂಗನಗೌಡರ, ಶಂಕ್ರಪ್ಪ ಶಿರಹಟ್ಟಿ, ನಾಗರಾಜ ಜಾಡರ, ಶಂಕ್ರಪ್ಪ ಗೋಣೆಪ್ಪನವರ, ಹಾಲೇಶ ಪಾಟೀಲ ಸೇರಿದಂತೆ ಅನೇಕರು ಇದ್ದರು.