ಗ್ರಾ.ಪಂ ಸದಸ್ಯರು ಸಾರ್ವಜನಿಕರ ಸೇವಕರಾಗಿ ಕಾರ್ಯನಿರ್ವಹಿಸಿ

| Published : Aug 01 2024, 12:18 AM IST

ಗ್ರಾ.ಪಂ ಸದಸ್ಯರು ಸಾರ್ವಜನಿಕರ ಸೇವಕರಾಗಿ ಕಾರ್ಯನಿರ್ವಹಿಸಿ
Share this Article
  • FB
  • TW
  • Linkdin
  • Email

ಸಾರಾಂಶ

Gram Panam members act as servants of the public

-ನಗರಂಗೆರೆ ಗ್ರಾ.ಪಂ ನೂತನ ಅಧ್ಯಕ್ಷೆ ಮಂಗಳಮ್ಮರಂಗಸ್ವಾಮಿಯನ್ನು ಅಭಿನಂದಿಸಿದ ಶಾಸಕ ಟಿ.ರಘುಮೂರ್ತಿ

-------

ಕನ್ನಡಪ್ರಭ ವಾರ್ತೆ ಚಳ್ಳಕೆರೆ

ಜನರು ನೀಡುವ ಅಧಿಕಾರವನ್ನು ಜನರ ಒಳಿತಿಗಾಗಿಯೇ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವ ರಾಜಕಾರಣಿಗಳನ್ನು ಜನರು ಸದಾಗೌರವಿಸುತ್ತಾರೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿವೃದ್ಧಿಗಿಂತ ಮುಖ್ಯವಾಗಿ ಸ್ಥಳೀಯ ಸಂಸ್ಥೆಗೆ ಆದ್ಯತೆ ನೀಡಬೇಕಿದೆ. ಮೂಲಭೂತ ಸೌಕರ್ಯ ಒದಗಿಸಲು ಸರ್ಕಾರದ ನಿಬಂಧನೆಗಳನ್ನು ಪಾಲಿಸಬೇಕು. ಪ್ರಾಮಾಣಿಕ ಕಾರ್ಯದಿಂದ ಮಾತ್ರ ಜನರ ವಿಶ್ವಾಸ ನಮ್ಮ ಮೇಲೆ ಸದಾ ಇರುತ್ತದೆ ಎಂದು ಕ್ಷೇತ್ರದ ಶಾಸಕ, ಕರ್ನಾಟಕ ರಾಜ್ಯ ಸಣ್ಣಕೈಗಾರಿಕೆ ಅಭಿವೃದ್ದಿ ನಿಗಮ ಅಧ್ಯಕ್ಷ ಟಿ.ರಘುಮೂರ್ತಿ ತಿಳಿಸಿದರು.

ಅವರು, ಮಂಗಳವಾರ ಸಂಜೆ ಶಾಸಕರ ಭವನದಲ್ಲಿ ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಸಿದ್ದಾಪುರದ ಮಂಗಳಮ್ಮರಂಗಸ್ವಾಮಿಯವರನ್ನು ಅಭಿನಂದಿಸಿ ಮಾತನಾಡಿದರು. ನಗರಂಗೆರೆ ಗ್ರಾಮ ಪಂಚಾಯಿತಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ಪ್ರಾಮುಖ್ಯತೆ ಹೊಂದಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸ್ಥಾನ ಗ್ರಾಮೀಣ ಭಾಗದಲ್ಲಿ ಹೆಚ್ಚು ಗೌರವವಿರುವ ಹುದ್ದೆಯಾಗಿದೆ. ಮಂಗಳಮ್ಮರ ರಂಗಸ್ವಾಮಿ ತಮ್ಮ ಅವಧಿಯಲ್ಲಿ ಉತ್ತಮ ಸೇವೆ ನಿರ್ವಹಿಸಿ ಖ್ಯಾತಿಯಾಗಲಿ ಎಂದು ಶುಭ ಹಾರೈಸಿದರು.

ಗ್ರಾಮ ಪಂಚಾಯಿತಿ ವತಿಯಿಂದ ಶಾಸಕ ಟಿ.ರಘುಮೂರ್ತಿಯವನ್ನು ಅಭಿನಂದಿಸಲಾಯಿತು. ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ಹೆಚ್ಚು ಅನುದಾನ ನೀಡುವಂತೆ ಸದಸ್ಯರು ಮನವಿ ಮಾಡಿದರು. ಮಾಜಿ ಅಧ್ಯಕ್ಷ ಎಂ.ಕುಮಾರಸ್ವಾಮಿ, ಸದಸ್ಯರಾದ ಎನ್.ಮಂಜುನಾಥ, ಅಂಗಡಿರಮೇಶ್, ಎಂ.ಹಿದಾಯಿತ್‌ವುಲ್ಲಾ, ರಂಗಸ್ವಾಮಿ, ಷಣ್ಮುಖಪ್ಪ ಮುಂತಾದವರು ಉಪಸ್ಥಿತರಿದ್ದರು.

-----

ಪೋಟೋ: ೩೧ಸಿಎಲ್‌ಕೆ೧

ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ತಾಲೂಕಿನ ನಗರಂಗೆರೆ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಮಂಗಳಮ್ಮರಂಗಸ್ವಾಮಿಯವರನ್ನು ಶಾಸಕ ಅಭಿನಂದಿಸಿದರು.