ಬಿಜೆಪಿ ರೈತ ಮೋರ್ಚಾದ ಗ್ರಾಮ ಪರಿಕ್ರಮ ಯಾತ್ರೆ ಆರಂಭ

| Published : Feb 13 2024, 12:47 AM IST

ಸಾರಾಂಶ

ಭಾಲ್ಕಿ ತಾಲೂಕಿನ ಖಟಕಚಿಂಚೋಳಿ ಗ್ರಾಮದ ಹನುಮಾನ ಮಂದಿರದಲ್ಲಿ ಗ್ರಾಮ ಪರಿಕ್ರಮ ಯಾತ್ರೆಗೆ ಗೋ ಪೂಜೆ ಮತ್ತು ನೇಗಿಲು ಪೂಜೆ ಮಾಡುವುದರ ಮೂಲಕ ಪರಿಕ್ರಮ ಯಾತ್ರೆಗೆ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ಭಾಲ್ಕಿ ತಾಲೂಕಿನ ಖಟಕಚಿಂಚೋಳಿ ಗ್ರಾಮದ ಹನುಮಾನ ಮಂದಿರದಲ್ಲಿ ಗ್ರಾಮ ಪರಿಕ್ರಮ ಯಾತ್ರೆಗೆ ಗೋ ಪೂಜೆ ಮತ್ತು ನೇಗಿಲು ಪೂಜೆ ಮಾಡುವುದರ ಮೂಲಕ ಬಿಜೆಪಿ ರೈತ ಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯರು ಮತ್ತು ಗ್ರಾಮ ಪರಿಕ್ರಮ ಯಾತ್ರೆ ಜಿಲ್ಲಾ ಸಂಚಾಲಕರಾದ ಕುಶಾಲ್ ಪಾಟೀಲ್ ಗಾದಗಿ ಚಾಲನೆ ನೀಡಿದರು.

ಗ್ರಾಮದ ಮಾದರಿ ಪ್ರಗತಿಪರ ಕೃಷಿಕರಿಗೆ ಸನ್ಮಾನಿಸಿ ಗೌರವಿಸಲಾಯಿತು. ಈ ಸಂಧರ್ಭದಲ್ಲಿ ರೈತ ಮೋರ್ಚಾ ಜಿಲ್ಲಾಧ್ಯಕ್ಷರಾದ ಸಂಜುಕುಮರ್ ಪಾಟೀಲ್, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅಶೋಕ್ ಪಾಟೀಲ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿರಾದಾರ, ರೈತ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ ಹರಕಂಚಿ, ಬಾಬುರಾವ್ ಧೂಪೆ, ಸುದರ್ಶನ್ ಗಡ್ರೆ, ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಬಸವರಾಜ ಅಷ್ಟಗಿ, ಭಾಲ್ಕಿ ರೈತ ಮೋರ್ಚಾ ಅಧ್ಯಕ್ಷ ಜ್ಞಾನೋಬ ಮಲ್ಕಾಪುರೆ, ಬಸವಕಲ್ಯಾಣ ಮಂಡಲ ಅಧ್ಯಕ್ಷ ಶಿವರುದ್ರಪ್ಪ ತಾಟೆ, ಹುಮನಾಬಾದ್ ಮಂಡಲ ಅಧ್ಯಕ್ಷ ರಾಮರಾವ್ ಕೆರೂರ್, ಭಾಲ್ಕಿ ಮಂಡಲ ಅಧ್ಯಕ್ಷ ಪಂಡಿತ್ ಶೇಡೊಳೆ.ಮಂಡಲ ಪ್ರಧಾನ ಕಾರ್ಯದರ್ಶಿ ಸುರೇಶ್ ಹುಬ್ಲೇಕಾರ್, ಸತೀಶ್ ಪಾಟೀಲ,ರೈತ ಮೋರ್ಚಾ ಪದಾಧಿಕಾರಿಗಳು, ಗ್ರಾಮದ ಪ್ರಗತಿಪರ ರೈತರು, ಗ್ರಾಮದ ಪ್ರಮುಖರು.ಮತ್ತಿತರರು ಉಪಸ್ಥಿತರಿದ್ದರು.