ಸಾರಾಂಶ
ಜಿಲ್ಲಾ ಉಪ್ಪಾರ ಸಮಾಜದ ಕಚೇರಿಯಲ್ಲಿ ಭಗೀರಥ ಜಯಂತಿ
ಕನ್ನಡಪ್ರಭ ವಾರ್ತೆ ಕಡೂರುಮೇ 26ರಂದು ಭಗೀರಥ ಶ್ರೀಗಳ ಸಾನ್ನಿಧ್ಯದೊಂದಿಗೆ ಜಿಲ್ಲಾ ಮಟ್ಟದ ಭಗೀರಥ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಲಾಗುವುದು ಎಂದು ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ಮಲ್ನಾಡ್ ನಾಗರಾಜು ತಿಳಿಸಿದರು.
ಪಟ್ಟಣದ ಜಿಲ್ಲಾ ಉಪ್ಪಾರ ಸಮಾಜದ ಕಚೇರಿಯಲ್ಲಿ ನಡೆದ ಭಗೀರಥ ಜಯಂತಿ ಆಚರಣೆಯಲ್ಲಿ ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಅಂದಿನ ಸಮಾರಂಭದಲ್ಲಿ ಶ್ರೀ ಪುರುಷೋತ್ತಮಾನಂದ ಸ್ವಾಮೀಜಿ ಹಾಗೂ ಶಾಸಕರು, ಗಣ್ಯರು ಭಾಗವಹಿಸಲಿದ್ದು, ಪಟ್ಟಣದ ಬನಶಂಕರಿ ಕಲ್ಯಾಣ ಮಂಟಪದಲ್ಲಿ ಜಯಂತ್ಯುತ್ಸವ ಆಯೋಜಿಸಲಾಗುವುದು. ಪಕ್ಷಾತೀತವಾಗಿ ಸಮಾಜ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.ಕಡೂರು ತಾಲೂಕಿನಾದ್ಯಂತ ಸುಮಾರು 26 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕಿದೆ, ಜಾತಿ ಗಣತಿಯಲ್ಲಿ ತಪ್ಪು ಮಾಹಿತಿ ಅಂಕಿ ಅಂಶಗಳನ್ನು ತೋರಿಸುತ್ತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಸಮಾಜ ಬಾಂಧವರು ಆಗಮಿಸುವ ಮೂಲಕ ಅತ್ಯಂತ ಯಶಸ್ವಿ ಕಾರ್ಯಕ್ರಮಕ್ಕೆ ಸಾಕ್ಷಿ ಆಗಬೇಕಿದೆ. ಕಾರ್ಯಕ್ರಮದಲ್ಲಿ ಸಾಧಕರನ್ನು ಪುರಸ್ಕರಿಸಲಾಗುವುದು ಹಾಗೂ 10ನೇ ತರಗತಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು ಎಂದರು.ಬೀರೂರು ಪುರಸಭಾ ಅಧ್ಯಕ್ಷೆ ವನಿತಾ ಮಧುಬಾವಿಮನೆ ಮಾತನಾಡಿ, ಉಪ್ಪಾರರ ಆರಾಧ್ಯ ದೈವ ಹಾಗೂ ಉಪ್ಪಾರರ ಸಿರಿ ದೇವಗಂಗೆಯನ್ನು ಭೂಮಿಗೆ ತಂದು ಜನರ ದಾಹ ತೀರಿಸಿದವರು ಭಗೀರಥ ಮಹರ್ಷಿಗಳು, ಪುರಾತನದ ಕ್ಷತ್ರಿಯರೇ ಉಪ್ಪಾರರು ಸೂರ್ಯವಂಶದ ಹಿನ್ನೆಲೆ ಹಾಗೂ ಭಾರತ ಇತಿಹಾಸದಲ್ಲಿ ಉನ್ನತ ಸ್ಥಾನ ಹೊಂದಿದ್ದವರು. ಚಳಿ ಮಳೆ ಗಾಳಿ ಬಿಸಿಲು ಲೆಕ್ಕಿಸದೆ ಆಹಾರ ನಿದ್ರೆ ತ್ಯಜಿಸಿ ಕಠಿಣ ತಪಸ್ಸು ಮಾಡಿ ತಮ್ಮ ಪೂರ್ವಜರಿಗೆ ಮೋಕ್ಷ ದೊರಕಿಸಿ ಕೊಟ್ಟಿದ್ದಲ್ಲದೆ ಪ್ರಪಂಚದ ಇಡೀ ಜೀವಸಂಕುಲಕ್ಕೆ ನೀರನ್ನು ಒದಗಿಸಿ ಕೊಟ್ಟವರು, ಅನ್ನ ದೇವರ ಮುಂದೆ ಇನ್ನು ದೇವರುಂಟೆ, ಆ ಅನ್ನಕ್ಕೆ ರುಚಿ ಕೊಟ್ಟ ಉಪ್ಪು ಊಟಕ್ಕೆ ತುಪ್ಪಕ್ಕಿಂತ ಶ್ರೇಷ್ಠವಾದದ್ದು ಎಂದು ಬಣ್ಣಿಸಿದರು.ಈ ಸಂದರ್ಭದಲ್ಲಿ ಭಗೀರಥ ಸಮಾಜದ ತಾಲೂಕ ಅಧ್ಯಕ್ಷ ಲೋಕೇಶ್ ಬಾಬು, ಕಾರ್ಯದರ್ಶಿ ಸಪ್ತಕೋಟಿ ಧನಂಜಯ, ಜಿಲ್ಲಾ ಉಪ್ಪಾರ ನೌಕರ ಸಮಾಜದ ಅಧ್ಯಕ್ಷ ವೈ. ಎಂ. ತಿಪ್ಪೇಶ್, ತಾಲೂಕು ನೌಕರ ಸಂಘದ ಅಧ್ಯಕ್ಷ ಸತೀಶ್, ಟಿ.ಆರ್. ಲಕ್ಕಪ್ಪ, ವಿರೂಪಾಕ್ಷಪ್ಪ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಸದಸ್ಯರಾದ ಜಿ.ಎನ್. ತಿಪ್ಪೇಸ್ವಾಮಿ, ದೇವರಾಜ್, ಮಾಚೇನಹಳ್ಳಿ ಚೌಡಪ್ಪ, ಯಳಗೊಂಡನಹಳ್ಳಿ ಈಶ್ವರಪ್ಪ, ಶೋಭಾ, ಮಚೇರಿ ಮಹೇಶ್, ಬಿಳುವಾಲ ನಾಗರಾಜ್, ಮೂರ್ತಿ, ಕೃಷ್ಣಮೂರ್ತಿ (ಮಾಜಿ) ಮತ್ತಿತರಿದ್ದರು.4ಕೆಕೆಡಿಯು1ಕಡೂರು ಪಟ್ಟಣದ ಜಿಲ್ಲಾ ಉಪ್ಪಾರ ಸಮಾಜದ ಕಚೇರಿಯಲ್ಲಿ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಆಚರಿಸಲಾಯಿತು. ಮಲ್ನಾಡ್ ನಾಗರಾಜ್, ವನಿತಾಮಧು, ಸಪ್ತಕೋಟಿ ಧನಂಜಯ್, ಲೋಕೇಶ್ ಬಾಬು, ತಿಪ್ಪೇಶ್, ವಿರೂಪಾಕ್ಷಪ್ಪ, ಸತೀಶ್, ತಿಪ್ಪೇಸ್ವಾಮಿ ಮತ್ತಿತರಿದ್ದರು.