ನರಸಿಂಹಸ್ವಾಮಿಯ ಅದ್ಧೂರಿ ಬ್ರಹ್ಮರಥೋತ್ಸವ

| Published : Mar 29 2024, 12:51 AM IST

ಸಾರಾಂಶ

ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್ ಸಮೀಪದ ಅರ್ಕಾವತಿ ನದಿ ತೀರದಲ್ಲಿರುವ ಇತಿಹಾಸ ಪ್ರಸಿದ್ದ ಉದ್ಬವ ಶ್ರೀ ಯೋಗ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಕದರಿ ಹುಣ್ಣಿಮೆ ಅಂಗವಾಗಿ ಬ್ರಹ್ಮರಥೋತ್ಸವ ಸಂಭ್ರಮದಿಂದ ನೆರವೇರಿತು.

ದೊಡ್ಡಬಳ್ಳಾಪುರ: ನಗರದ ಡಿ.ಕ್ರಾಸ್ ಸಮೀಪದ ಅರ್ಕಾವತಿ ನದಿ ತೀರದಲ್ಲಿರುವ ಇತಿಹಾಸ ಪ್ರಸಿದ್ದ ಉದ್ಬವ ಶ್ರೀ ಯೋಗ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯದಲ್ಲಿ ಕದರಿ ಹುಣ್ಣಿಮೆ ಅಂಗವಾಗಿ ಬ್ರಹ್ಮರಥೋತ್ಸವ ಸಂಭ್ರಮದಿಂದ ನೆರವೇರಿತು.

ಸುಮಾರು 200 ವರ್ಷಗಳ ಇತಿಹಾಸ ಹೊಂದಿರುವ ಈ ದೇವಾಲಯವು ನಗರ ಸೇರಿದಂತೆ ತಾಲೂಕಿನ ಹಲವು ಗ್ರಾಮಗಳು, ಸುತ್ತಮುತ್ತಲ ತಾಲೂಕುಗಳಿಂದಲೂ ಭಕ್ತ ಸಮುದಾಯವನ್ನು ಹೊಂದಿದೆ. ರಥೋತ್ಸವದಲ್ಲಿ ಪಾಲ್ಗೊಂಡ ನೂರಾರು ಭಕ್ತಾದಿಗಳು ಶ್ರದ್ದೆ-ಭಕ್ತಿಯಿಂದ ಸ್ವಾಮಿಯ ರಥಕ್ಕೆ ಹೂವು,ಹಣ್ಣು, ಧವನ ಅರ್ಪಿಸಿ ಭಕ್ತಿಭಾವ ಮೆರೆದರು.

ಕದಿರೆ ಹುಣ್ಣಿಮೆಯ ಅಂಗವಾಗಿ ರಥೋತ್ಸವ ಹಿಂದಿನ ದಿನ ಸ್ವಾಮಿಯ ಕಲ್ಯಾಣೋತ್ಸವ ನಡೆಸಲಾಯಿತು. ಸಂಜೆ ಸತ್ಯನಾರಾಯಣಸ್ವಾಮಿ ಪೂಜೆ ನಡೆಯಿತು. ಪ್ರತಿ ತಿಂಗಳ ಸ್ವಾತಿ ನಕ್ಷತ್ರದಲ್ಲಿ ಸ್ವಾಮಿಗೆ ಹೋಮ, ಪೌರ್ಣಮಿ ದಿನ ಸತ್ಯನಾರಾಯಣ ಸ್ವಾಮಿ ಪೂಜೆ, ಅಮಾವಾಸ್ಯೆ ದಿನ ವಿಶೇಷ ಪೂಜೆ ನಡೆಯುವುದು ಇಲ್ಲಿನ ವಿಶೇಷ.