ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ
ಪಟ್ಟಣದ ಹಿರೇಬಣದಲ್ಲಿರುವ ವೆಂಕಟೇಶ್ವರ ದೇವಸ್ಥಾನದಲ್ಲಿ ಪ್ರತಿವರ್ಷದಂತೆ ಈ ವರ್ಷವು ವಿಜಯದಶಮಿ ಅಂಗವಾಗಿ ರಥೋತ್ಸವ ಕಾರ್ಯಕ್ರಮವು ಮಂಗಳವಾರ ವೈಭವದಿಂದ ನೆರವೇರಿತು.ನವರಾತ್ರಿಯ ಹಬ್ಬದ ಅಂಗವಾಗಿ ಕಳೆದ 9 ದಿನಗಳಿಂದ ವೆಂಕಟೇಶ್ವರ ದೇವಸ್ಥಾನದಲ್ಲಿ ಪೂಜಾ ಕಂಕೈರ್ಯ ಹಮ್ಮಿಕೊಳ್ಳಲಾಗಿತ್ತು. ನಿತ್ಯ ಕಾಕಡಾರತಿ, ಭಜನೆ, ಉಪನ್ಯಾಸ, ವಿಶೇಷ ಪೂಜೆ, ಅಲಂಕಾರಗಳು ಜರುಗಿದವು. ನಿತ್ಯ ಸಂಜೆ ವಿವಿಧ ವಾಹನಗಳ ಮೇಲೆ ವೆಂಕಟೇಶ್ವರ ಉತ್ಸವ ಮೂರ್ತಿಯ ಮೆರವಣಿಗೆಯು ಸಂಪ್ರದಾಯದಂತೆ ಜರುಗಿತು.
ಮಂಗಳವಾರ ಸಂಪ್ರದಾಯದಂತೆ ಮುಂಜಾನೆ ಪಲ್ಲಕ್ಕಿ ಉತ್ಸವ ನಂತರ ೧೦ ಗಂಟೆಗೆ ರಥೋತ್ಸವ ಕಾರ್ಯಕ್ರಮವು ನಡೆಯಿತು.ವೆಂಕಟೇಶ್ವರ ದೇವಸ್ಥಾನದಿಂದ ಪ್ರಾರಂಭಗೊಂಡ ರಥೋತ್ಸವ ಹಳ್ಳದಕೇರಿಯ ಮಾರುತಿ ದೇವಸ್ಥಾನಕ್ಕೆ ತಲುಪಿ ಅಲ್ಲಿಂದ ದೇವಸ್ಥಾನಕ್ಕೆ ಮರಳಿ ತಲುಪಿತು. ದಾರಿಯುದ್ದಕ್ಕೂ ವೆಂಕಟೇಶ್ವರ ನಾಮಸ್ಮರಣೆ, ಭಜನೆ, ಭಕ್ತಿಗೀತೆಗಳು ರಥೋತ್ಸವಕ್ಕೆ ಧಾರ್ಮಿಕ ಕಳೆ ನೀಡಿದ್ದವು. ನಂತರ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇವಸ್ಥಾನದ ಧರ್ಮದರ್ಶಿ ವೆಂಕಟೇಶ ಗುಡಿ ವಿಜಯದಶಮಿಯ ಮಹತ್ವ ವಿವರಿಸಿದರು. ಬನ್ನಿ ವಿನಿಮಯದಿಂದ ಪರಸ್ಪರರಲ್ಲಿ ದ್ವೇಷ ಭಾವನೆ ಕಡಿಮೆಯಾಗಿ ಉತ್ತಮ ಬಾಂಧವ್ಯ ವೃದ್ಧಿಯಾಗುವಂತೆ ಮಾಡುತ್ತದೆ. ನಮ್ಮಲ್ಲಿರುವ ದ್ವೇಷಭಾವನೆ ಕಡಿಮೆಯಾಗಿ ಎಲ್ಲರೂ ಪರಸ್ಪರ ಕಲೆತು ನಡೆದರೆ ಸಮಾಜದಲ್ಲಿ ಒಳ್ಳೆಯ ಬೆಳವಣಿಗೆಯಾಗುತ್ತದೆ ಎಂದು ನುಡಿದರು.
ಈ ವೇಳೆ ಅಪ್ಪಾಜಿ ಹೊಂಬಳ, ಪ್ರಲ್ಹಾದರಾವ್ ಕುಲಕರ್ಣಿ, ಶ್ರೀಪಾದರಾಜ ಹೊಂಬಳ, ನಾರಾಯಣಭಟ್ ಪುರಾಣಿಕ, ಗೋಪಾಲ ಪಡ್ನೀಸ್, ಕೃಷ್ಣ ಕುಲಕರ್ಣಿ(ತಂಗೋಡ), ಎ.ಪಿ. ಕುಲಕರ್ಣಿ, ಅರವಿಂದ ದೇಶಪಾಂಡೆ, ವರದೇಂದ್ರ ಪುರೋಹಿತ, ಶ್ರೀನಿವಾಸ ಹುಲಮನಿ, ಹನುಮಂತಾಚಾರ್ಯ ಹೊಂಬಳ, ದಿಗಂಬರ ಪೂಜಾರ, ರಾಜಾಚಾರ್ಯ ರಾಯಚೂರ, ಆರ್.ಎನ್. ಪಂಚಬಾವಿ, ಶ್ರೀಕಾಂತ ಪೂಜಾರ, ಗುರುರಾಜ ಪಾಟೀಲಕುಲಕರ್ಣಿ, ರಮೇಶ ತೊರಗಲ್, ಗುರುರಾಜ ಸುಳ್ಳದ, ಅನಿಲ ಕುಲಕರ್ಣಿ, ಆರ್.ಎಚ್. ಕುಲಕರ್ಣಿ, ನಾಗರಾಜ ಪೂಜಾರ, ವ್ಯಾಪಾರಿ, ಅನಂತ ತೇಲಂಗ, ರಾಘವೇಂದ್ರ ಗೊಗ್ಗಿ, ಆನಂದ ಕುಲಕರ್ಣಿ, ಈಶ್ವರ ಭೂತರಡ್ಡಿ, ಶಂಕರಣ್ಣ ಗೊರವರ, ಬಾಬು ಅಳವಂಡಿ, ರಮೇಶ ತೊರಗಲ್, ಡಾ. ಪ್ರಸನ್ನ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ಡಿ.ಪಿ. ಹೇಮಾದ್ರಿ, ನಿಂಗಪ್ಪ ತಹಸೀಲ್ದಾರ, ರಾಘವೇಂದ್ರ ಮಿಸ್ಕಿನ್, ರಾಮಣ್ಣ ಬನ್ನಿ, ಮಲ್ಲೇಶ ನವಲಗುಂದ, ಸೋಮಶೇಖರ ಪಾಟೀಲ ಮುಂತಾದವರು ಪಾಲ್ಗೊಂಡಿದ್ದರು.