ಜಗಳೂರು ಪಟ್ಟಣದಲ್ಲಿ ಬುಧವಾರ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.​ ಪಟ್ಟಣದ ಕೆರೆ ಕೋಡಿಯ ಹತ್ತಿರವಿರುವ ಬನ್ನಿ ಮರಕ್ಕೆ ತಗ್ಗಿನಮನೆ ಬಸವೇಶ್ವರ ಸ್ವಾಮಿ ದೇವರ ಪಲ್ಲಕ್ಕಿಯೊಂದಿಗೆ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮುಡಿಯುವ ಮೂಲಕ ಸಂಭ್ರಮಿಸಿದರು. ಅದೇ ರೀತಿ, ಪಟ್ಟಣದ ಈಶ್ವರ ಸ್ವಾಮಿಗೂ ಭಕ್ತರು ಪೂಜೆ ನೆರವೇರಿಸಿ ಬನ್ನಿ ಮುಡಿದಿದ್ದಾರೆ.

- ಪರಸ್ಪರ ಬಿಲ್ವ ಪತ್ರೆ ನೀಡಿ ಹಬ್ಬದ ಶುಭಾಶಯಗಳ ವಿನಿಮಯ ಮಾಡಿಕೊಂಡ ಭಕ್ತರು

- - -

ಕನ್ನಡಪ್ರಭ ವಾರ್ತೆ ಜಗಳೂರು

ಪಟ್ಟಣದಲ್ಲಿ ಬುಧವಾರ ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆ ಹಾಗೂ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.​ ಪಟ್ಟಣದ ಕೆರೆ ಕೋಡಿಯ ಹತ್ತಿರವಿರುವ ಬನ್ನಿ ಮರಕ್ಕೆ ತಗ್ಗಿನಮನೆ ಬಸವೇಶ್ವರ ಸ್ವಾಮಿ ದೇವರ ಪಲ್ಲಕ್ಕಿಯೊಂದಿಗೆ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿ, ಬನ್ನಿ ಮುಡಿಯುವ ಮೂಲಕ ಸಂಭ್ರಮಿಸಿದರು. ಅದೇ ರೀತಿ, ಪಟ್ಟಣದ ಈಶ್ವರ ಸ್ವಾಮಿಗೂ ಭಕ್ತರು ಪೂಜೆ ನೆರವೇರಿಸಿ ಬನ್ನಿ ಮುಡಿದರು.

ಪ್ರವಾಸಿ ಮಂದಿರದಲ್ಲಿ ದುರ್ಗಮ್ಮ ದೇವತೆಗೆ ವಿವಿಧ ಅಲಂಕಾರಗಳೊಂದಿಗೆ ಭಕ್ತರ ಸಮ್ಮುಖದಲ್ಲಿ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ವಿವಿಧ ದೇವತೆಗಳ ಸಮ್ಮುಖ ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದ ನಂತರ, ಸಾಂಪ್ರದಾಯಿಕವಾಗಿ ಬಾಳೆಕಂಬ ಹಾಗೂ ಬಿಲ್ಲು ಹೊಡೆಯುವ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಭಕ್ತಾದಿಗಳು ಪರಸ್ಪರ ಬನ್ನಿ (ಬಿಲ್ವ ಪತ್ರೆ) ನೀಡಿ, ದಸರಾ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ವೈಭವದ ಧಾರ್ಮಿಕ ಮಹೋತ್ಸವದಲ್ಲಿ ತಿಪ್ಪೇಗುಂಡೆರಾ ತಿಪ್ಪಣ್ಣ, ಸೋಮಣ್ಣ, ಕರಿಬಸಪ್ಪ, ಬೆಲ್ಲದ ಬಸವರಾಜಪ್ಪ, ದೇವೇಂದ್ರಪ್ಪ, ಕಲ್ಲೇಶಪ್ಪ, ಮಹೇಶ್‌, ರಾಜಣ್ಣ, ಶಿವಣ್ಣ, ಕಾಯಿ ಮಂಜಣ್ಣ, ಕಲ್ಲಿಂಗಪ್ಪ ಗುರುಸಿದ್ದಪ್ಪ ಸೇರಿದಂತೆ ಆಯಾ ದೇವಸ್ಥಾನ ಸಮಿತಿಗಳ ಪದಾಧಿಕಾರಿಗಳು, ಪಟ್ಟಣದ ಮುಖಂಡರು ಹಾಗೂ ಅಪಾರ ಭಕ್ತಾದಿಗಳು ಉಪಸ್ಥಿತರಿದ್ದರು.

- - -

-21ಜೆ.ಜಿ.ಎಲ್.1:

ಜಗಳೂರು ಪಟ್ಟಣದಲ್ಲಿ ಬುಧವಾರ ಕೆರೆ ಕೋಡಿಯ ಹತ್ತಿರವಿರುವ ಬನ್ನಿ ಮರಕ್ಕೆ ತಗ್ಗಿನ ಮನೆ ಬಸವೇಶ್ವರ ಸ್ವಾಮಿ ದೇವರೊಂದಿಗೆ ಪಲ್ಲಕ್ಕಿಗೆ ವಿವಿಧ ಅಲಂಕಾರದೊಂದಿಗೆ ವಿವಿಧ ವ್ಯಾದ್ಯಗಳೊಂದಿಗೆ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.