ಮುದ್ದೇಬಿಹಾಳದಲ್ಲಿ ಅದ್ಧೂರಿ ಗಣೇಶ ವಿಸರ್ಜನೆ

| Published : Sep 05 2025, 01:01 AM IST

ಮುದ್ದೇಬಿಹಾಳದಲ್ಲಿ ಅದ್ಧೂರಿ ಗಣೇಶ ವಿಸರ್ಜನೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಪಟ್ಟಣದಲ್ಲಿ ಪ್ರಥಮ ಬಾರಿಗೆ ಹುತ್ತಿನ ಮಣ್ಣಿನಿಂದ ನಿರ್ಮಿಸಲಾಗಿದ್ದ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗಣೇಶನಿಗೆ 7 ದಿನಗಳವರೆಗೆ ಜರುಗಿದ ಮಹಾಪೂಜಾ ಕಾರ್ಯಕ್ರಮಗಳು ಹಿಂದೂ ಧಾರ್ಮಿಕ ಪದ್ಧತಿಯಂತೆ ಜರುಗಿದ್ದು, ಗಣೇಶೋತ್ಸವಕ್ಕೆ ಮೆರುಗು ನೀಡಿತು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಪಟ್ಟಣದಲ್ಲಿ ಪ್ರಥಮ ಬಾರಿಗೆ ಹುತ್ತಿನ ಮಣ್ಣಿನಿಂದ ನಿರ್ಮಿಸಲಾಗಿದ್ದ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಗಣೇಶನಿಗೆ 7 ದಿನಗಳವರೆಗೆ ಜರುಗಿದ ಮಹಾಪೂಜಾ ಕಾರ್ಯಕ್ರಮಗಳು ಹಿಂದೂ ಧಾರ್ಮಿಕ ಪದ್ಧತಿಯಂತೆ ಜರುಗಿದ್ದು, ಗಣೇಶೋತ್ಸವಕ್ಕೆ ಮೆರುಗು ನೀಡಿತು.

ಗಣೇಶ ಮಹಾಮೂರ್ತಿಯನ್ನು ಮಂಗಳವಾರ ವಿಸರ್ಜಿಸಲು ಪ್ರತಿಷ್ಠಾಪನಾ ಸ್ಥಳವಾದ ಪಟ್ಟಣದ ಹುತಾತ್ಮ ಯೋಧರ ಸ್ಮಾರಕ ಸ್ಥಳದಿಂದ ವಿವಿಧ ವಾಧ್ಯ ವೈಭವಗಳೊಂದಿಗೆ ತಕ್ಕಂತೆ ಹಿಂದೂ ಯುವಕರ ತಂಡದ ಕುಣಿತ ಹಾಗೂ ಮೇಲಿಂದ ಮೇಲೆ ಎಲ್ಲರಿಂದ ಹೊರಬರುತ್ತಿದ್ದ ಗಣಪತಿ ಬಪ್ಪಾ ಮೋರಿಯಾ.. ಘೋಷಣೆಗಳು ಕೇಳುಗರಲ್ಲಿ ಹಾಗೂ ನೋಡುಗರಲ್ಲಿಯೂ ಭಕ್ತಿಭಾವವನ್ನು ಹುಟ್ಟಿಸುತ್ತಿದ್ದವು. ಹಿಂದೂ ಮಹಗಾಗಣಪತಿ ಎಂಬ ಹೆಸರಿನ ಗಣಪತಿಯನ್ನು ಈ ಪ್ರಥಮ ವರ್ಷವೇ ಪ್ರತಿಷ್ಠಾಪಿಸಿತ್ತು. ಈ ಕುರಿತು ಉತ್ಸವ ಸಮಿತಿ ಕೈಗೊಂಡ ನಿರ್ಣಯಗಳು ಮಾರ್ಗಸೂಚಿಯಾಗಿ ಪರಿಣಮಿಸಿದವು.ಕಾರ್ಯಕ್ರಮ ಮಹಾಪ್ರಸಾದದ ವ್ಯವಸ್ಥೆಯಲ್ಲಿಯೂ ಕೂಡ ಮಾದರಿಯಾಗಿ ಪರಿಣಮಿಸಿತಲ್ಲದೇ ಭಕ್ತರು ದಿನದ ಮಹಾಪೂಜಾ ಕಾರ್ಯಕ್ರಮದಲ್ಲಿ ಮಹಾಪ್ರಸಾದ ಸೇವಿಸಿ ಪುನೀತರಾದದ್ದು ಕಂಡುಬಂದಿತು. ಗಣೇಶ ಮೂರ್ತಿಯ ಮಹಾಪೂಜಾ ಕಾರ್ಯಕ್ರಮದಲ್ಲಿಯ ಭಕ್ತಿರಿಗಾಗಿ ಅಗತ್ಯವಿರುವ ಸಾಮಗ್ರಿಗಳನ್ನು ಹರಾಜು ನೀಡಿ ಸ್ವೀಕರಿಸಿದ ಭಕ್ತರಿಗೆ ಆಶೀರ್ವಾದ ಪ್ರಸಾದ ನೀಡಲಾಯಿತು.ಮಹಾ ಮಂಡಳದ ಅಧ್ಯಕ್ಷ ವೆಂಕನಗೌಡ ಪಾಟೀಲ ಹಾಗೂ ಸರ್ವ ಸದಸ್ಯರ ಅಭಿಪ್ರಾಯದಂತೆ, ಮಾರ್ಗಸೂಚಿಯಂತೆ ಗಣೇಶ ಮೂರ್ತಿಯನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗಲಾಯಿತು. ಪ್ರತಿದಿನ ಪೂಜಾ ವಿಧಿವಿಧಾನಗಳನ್ನು ಸಲ್ಲಿಸಿದ ಭಕ್ತರಿಗೂ ಸಮಿತಿಯಿಂದ ಗೌರವಿಸುವ ಕಾರ್ಯ ನಡೆಯಿತು. ಪಟ್ಟಣದ ಮಾರುತಿ ನಗರದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮಹಾಮೂರ್ತಿಯೂ ಸಹ ವಿಸರ್ಜನೆಗೆ ತೆರಳಿದವು. ವಿಸರ್ಜನೆ ಸಮಯದಲ್ಲಿ ಯಾವುದೇ ತರದ ಘಟನೆ ಜರುಗಬಾರದೆಂಬ ಉದ್ದೇಶದಿಂದ ಸಿಪಿಐ, ಪಿಎಸ್‌ಐ ಹಾಗೂ ಪೊಲೀಸ್‌ ಸಿಬ್ಬಂದಿ ಸೂಕ್ತ ಬಂದೋಬಸ್ತ್‌ ನಿಯೋಜನೆ ಮಾಡಲಾಗಿತ್ತು. ಒಟ್ಟಿನಲ್ಲಿ ಗಣೇಶ ಉತ್ಸವ ಶಾಂತಿಯಿಂದ ನಡೆದಿದ್ದು, ಮುಖಂಡರು ನಿಟ್ಟುಸಿರು ಬಿಟ್ಟಿದ್ದಾರೆ.