ಆಲಮೇಲದಲ್ಲಿ ಅದ್ಧೂರಿ ಗಣೇಶ ವಿಸರ್ಜನೆ

| Published : Sep 13 2024, 01:37 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಆಲಮೇಲ ಆಲಮೇಲದಲ್ಲಿ ಐದನೇ ದಿನದ ಗಣೇಶ ವಿಸರ್ಜನೆ ಸಂಭ್ರಮ ಜೋರಾಗಿತ್ತು. ಪಟ್ಟಣ ಸೇರಿದಂತೆ ಜಿಲ್ಲೆಯಾದ್ಯಂತ ಮತ್ತು ಪಕ್ಕದ ಕಲಬುರ್ಗಿ ಮತ್ತು ಮಹಾರಾಷ್ಟ್ರದಿಂದಲೂ ಇಲ್ಲಿಯ 14 ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ನೋಡಲು ಸಾವಿರಾರು ಜನರು ಆಗಮಿಸಿದ್ದರು. ಡಿಜೆ ಸೌಂಡ್‌ಗೆ ಯುವಕ, ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಆಲಮೇಲ

ಆಲಮೇಲದಲ್ಲಿ ಐದನೇ ದಿನದ ಗಣೇಶ ವಿಸರ್ಜನೆ ಸಂಭ್ರಮ ಜೋರಾಗಿತ್ತು. ಪಟ್ಟಣ ಸೇರಿದಂತೆ ಜಿಲ್ಲೆಯಾದ್ಯಂತ ಮತ್ತು ಪಕ್ಕದ ಕಲಬುರ್ಗಿ ಮತ್ತು ಮಹಾರಾಷ್ಟ್ರದಿಂದಲೂ ಇಲ್ಲಿಯ 14 ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ನೋಡಲು ಸಾವಿರಾರು ಜನರು ಆಗಮಿಸಿದ್ದರು. ಡಿಜೆ ಸೌಂಡ್‌ಗೆ ಯುವಕ, ಯುವತಿಯರು ಕುಣಿದು ಕುಪ್ಪಳಿಸುತ್ತಿದ್ದರು.

14 ಗಜಾನನ ಸಂಘದವರು ಆಕರ್ಷಕ ಸ್ತಬ್ಧ ಚಿತ್ರ ತಯಾರಿಸಿದ್ದರು. ನೋಡುಗರಿಗೆ ಗಣೇಶ ಮೂರ್ತಿಗಳು ಒಂದಕ್ಕಿಂತ ಒಂದು ಆಕರ್ಷಕವಾಗಿ ಕಂಡವು. ಈ ಸಲ ಪೌರಾಣಿಕ ಸ್ತಬ್ಧ ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಕಾಮನಕಟ್ಟಿ ಚೌಕ್‌ನವರು ಪಾಂಡುರಂಗ ವಿಠ್ಠಲ, ಬಸವನಗರದ ಚೌಕ್‌ನವರು ಸಪ್ತ ಸಂಗೀತ, ಹಿರೋಡೇಶ್ವರ ಚೌಕ್‌ ಡಾ.ಬಿ.ಆರ್.ಅಂಬೇಡ್ಕರ ಭಾವಚಿತ್ರ, ಗಾಂಧಿಚೌಕ್‌ ನಿಂದ ಶಿವಾಜಿ ನಿಂತಿರುವ ದೃಶ್ಯ, ರಾಘವೇಂದ್ರ ಚೌಕ್‌ನವರು ಬಾಲ ರಾಮನ ಅವತಾರ, ಲಕ್ಷ್ಮಿ ಚೌಕ್‌ನವರು ದ್ಯಾಮವ್ವನ ಜಾತ್ರೆ, ಗಣೇಶ ನಗರದವರು ಆದಿ ಶಕ್ತಿ ಅವತಾರ ಹೀಗೆ ವಿವಿಧ ತರಹದ ಅವತಾರಗಳಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗಿತ್ತು. ಇಡೀ ರಾತ್ರಿ ಮೆರವಣಿಗೆ ನಡೆದಿದ್ದು, ಬೆಳಗಿನ ಜಾವ ವಿಸರ್ಜನೆ ನಡೆಸಲಾಗಿದೆ.ಗಣೇಶ ಮೆರವಣಿಗೆಗೆ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಒದಗಿಸಲಾಗಿತ್ತು. ಸಿದ್ದರು.ಗುರುವಾರ ಬೆಳಗಿನ ಜಾವ ಎಲ್ಲ ಗಣಪತಿಗಳ ವಿಸರ್ಜನೆ ನಡೆಯಿತು. ಈ ವೇಳೆ ಆಲಮೇಲ ಠಾಣೆ ಪಿಎಸ್‌ಐ ಅರವಿಂದ ಅಂಗಡಿ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದ್ದು, ಅವರನ್ನು ಯುವಕರು ಹೆಗಲ ಮೇಲೆ ಹೊತ್ತು ಕುಣಿದಾಡಿದರು. ಪಿಎಸ್‌ ಐ ಜೊತೆಗೆ ಕೆಲವು ಸಿಬ್ಬಂದಿಯೂ ಡ್ಯಾನ್ಸ್‌ ಮಾಡಿದ್ದಾರೆ. ಪಿಎಸ್ಐ ಡಾನ್ಸ್ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಮಂಡಳಿ ಅಧ್ಯಕ್ಷ ಮಹಿಬೂಬ ಮಸಳಿ, ಮುಖಂಡರಾದ ರಮೇಶ ಭಂಟನೂರ, ಅಶೋಕ ಕೊಳಾರಿ, ವಿಜಯಕುಮಾರ ಅಕ್ಕಲಕೋಟ, ಸುನೀಲ ಉಪ್ಪಿನ, ಸುರೇಶ ಬಂಡಗಾರ, ಗನಿಸಾಬ್ ದೇವರಮನಿ, ವಿನಾಯಕ ಕಲಶೆಟ್ಟಿ, ಸಿದ್ದುಗೌಡ ಬಿರಾದಾರ, ನಾಸೀರ ದೇವರಮನಿ ಸೇರಿ ಹಲವರು ಇದ್ದರು.