ಅದ್ಧೂರಿಯಿಂದ ಗುರುಪೂರ್ಣಿಮಾ ಆಚರಣೆ

| Published : Jul 22 2024, 01:22 AM IST

ಸಾರಾಂಶ

ನಗರದ ವಿವಿಧೆಡೆ ಅದ್ಧೂರಿಯಿಂದ ಗುರುಪೂರ್ಣಿಮಾ ಆಚರಣೆ ನಡೆಯಿತು.

ಕನ್ನಡಪ್ರಭ ವಾರ್ತೆ ತುಮಕೂರು ನಗರದ ವಿವಿಧೆಡೆ ಅದ್ಧೂರಿಯಿಂದ ಗುರುಪೂರ್ಣಿಮಾ ಆಚರಣೆ ನಡೆಯಿತು. ಇಲ್ಲಿನ ರಾಮಕೃಷ್ಣ ನಗರದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ವಿಶೇಷವಾಗಿ ಬಾಬಾ ಅವರಿಗೆ ಅಲಂಕಾರ ಏರ್ಪಡಿಸಲಾಗಿತ್ತು. ಬೆಳಗ್ಗೆ ಕಾಕಡಾರತಿ, ಹೋಮ, ಯಜ್ಞಾದಿಗಳು ಜರುಗಿದವು. ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಂದಿರಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಮಾಜಿ ಸಂಸದ ಜಿ.ಎಸ್.ಬಸವರಾಜು, ಅಧ್ಯಕ್ಷರಾದ ಗುರುಸಿದ್ದಪ್ಪ, ರಕ್ಷಿತ್, ಜೈಭಾರತ್ ಹರೀಶ್, ಮಾಜಿ ನಗರಸಭಾ ಅಧ್ಯಕ್ಷ ಹನುಮಂತರಾಯಪ್ಪ ಮುಂತಾದವರು ಹಾಜರಿದ್ದರು.

ಟೂಡಾ ಕಚೇರಿ ಎದುರಿನ ಸಾಯಿ ಬಾಬಾ ಮಂದಿರದಲ್ಲಿ ವಿಶೇಷವಾಗಿ ಸಾಯಿಬಾಬಾರಿಗೆ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಟ್ರಸ್ಟ್ ಅಧ್ಯಕ್ಷರಾದ ನಟರಾಜಶ್ರೇಷ್ಠಿ, ಶ್ರೀನಿವಾಸ್, ಮಂಜುನಾಥ್, ಸುಜಯ್ ಬಾಬು, ಶಂಕರ್ ಮುಂತಾದವರು ಭಾಗವಹಿಸಿದ್ದರು. ಜಯನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆಯ ಶಿರಡಿ ಸಾಯಿ ಮಂದಿರದಲ್ಲಿ ಕಾಕಡಾರತಿ, ಕ್ಷೀರಾಭಿಷೇಕ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಗಣಪತಿ ಹೋಮ, ದತ್ತ ಹೋಮ ಹಾಗೂ ಸಾಯಿ ಹೋಮಗಳು ಜರುಗಿದವು. ವಿಶೇಷವಾಗಿ ಬಾಬಾ ಅವರಿಗೆ ಅಲಂಕಾರ ಏರ್ಪಡಿಸಲಾಗಿತ್ತು. ಅಧ್ಯಕ್ಷರಾದ ಗೋಪಾಲ್, ಪ್ರದೀಪ್ ಮತ್ತಿತರರು ಹಾಜರಿದ್ದರು. ಬಂದ ಭಕ್ತಾದಿಗಳಿಗೆ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಣೆ ತೋಟದ ಯೂರೋ ಕಿಡ್ಸ್ ಶಾಲಾ ಆವರಣದಲ್ಲಿರುವ ಸಾಯಿಬಾಬಾ ಮಂದಿರದಲ್ಲಿ ವಿಶೇಷವಾಗಿ ಬಾಬಾ ಅವರಿಗೆ ಸೇಬಿನ ಅಲಂಕಾರ ಏರ್ಪಡಿಸಲಾಗಿತ್ತು. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಬಾಬಾ ಅವರ ದರ್ಶನ ಪಡೆದರು.