ಸಿದ್ದರಬೆಟ್ಟದಲ್ಲಿಂದು ಅದ್ಧೂರಿ ಹನುಮ ಜಯಂತಿ

| Published : Dec 24 2023, 01:45 AM IST

ಸಾರಾಂಶ

ದಾಬಸ್‌ಪೇಟೆ: ಐತಿಹಾಸಿಕ ಹಿನ್ನಲೆಯ ನಿಜಗಲ್ ಸಿದ್ದರಬೆಟ್ಟದಲ್ಲಿ ಡಿ.24ರಂದು ಅದ್ಧೂರಿ ಹನುಮ ಜಯಂತಿ ಆಚರಿಸಲಾಗುತ್ತಿದ್ದು ಹತ್ತು ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಬೆಟ್ಟಕ್ಕೆ ಭೇಟಿ ನೀಡಿ ಹನುಮನ ದರ್ಶನ ಪಡೆಯುವ ನಿರೀಕ್ಷೆಯಿದೆ.

ದಾಬಸ್‌ಪೇಟೆ: ಐತಿಹಾಸಿಕ ಹಿನ್ನಲೆಯ ನಿಜಗಲ್ ಸಿದ್ದರಬೆಟ್ಟದಲ್ಲಿ ಡಿ.24ರಂದು ಅದ್ಧೂರಿ ಹನುಮ ಜಯಂತಿ ಆಚರಿಸಲಾಗುತ್ತಿದ್ದು ಹತ್ತು ಸಾವಿರಕ್ಕೂ ಅಧಿಕ ಹನುಮ ಮಾಲಾಧಾರಿಗಳು ಬೆಟ್ಟಕ್ಕೆ ಭೇಟಿ ನೀಡಿ ಹನುಮನ ದರ್ಶನ ಪಡೆಯುವ ನಿರೀಕ್ಷೆಯಿದೆ.

ಬೆಟ್ಟಕ್ಕೆ ಸಿಂಗಾರ: ನಿಜಗಲ್‌ ಸಿದ್ದರಬೆಟ್ಟ ಸೇವಾ ಸಮಿತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಹನುಮ ಜಯಂತಿ ಆಚರಿಸಲಿದ್ದು, ಯುವ ಮುಖಂಡ ಜಗದೀಶ್ ಚೌಧರಿ ಅವರು ಅತ್ಯಾಧುನಿಕ ವಿದ್ಯುತ್ ಲೇಸರ್ ಕಿರಣಗಳು ಮತ್ತು ವಿದ್ಯುತ್ ದೀಪಗಳಿಂದ ಸುಮಾರು 3,568 ಅಡಿ ಎತ್ತರವಿರುವ ಇಡೀ ಬೆಟ್ಟಕ್ಕೆ ಅಲಂಕಾರ ಮಾಡಿಸಿದ್ದಾರೆ.

ಭಕ್ತರಿಗೆ ಅನ್ನದಾಸೋಹ:

ಬರುವ ಭಕ್ತಾಧಿಗಳಿಗೆ ಊಟದ ವ್ಯವಸ್ಥೆಯಿದ್ದು, ಕನ್ನಡ ಸಂಸೃತಿ ಇಲಾಖೆಯ ಸಾಂಸ್ಕೃತಿಕ ಕಲಾ ತಂಡಗಳಿಂದ ಜಾನಪದ ನೃತ್ಯಗಳು, ವೀರಗಾಸೆ, ಡೊಳ್ಳು ಕುಣಿತ ಕಾರ್ಯಕ್ರಮಗಳು ನಡೆಯಲಿವೆ. ದಾಬಸ್‌ಪೇಟೆ ಮಹಿಳಾ ಸಂಘದಿಂದ ಶಿವಗಂಗೆ ವೃತ್ತದಿಂದ ಸಿದ್ದರಬೆಟ್ಟದವರೆಗೂ ಪೂರ್ಣಕುಂಭ ಸ್ವಾಗತ ಕೋರಲಿದ್ದಾರೆ.

ಪೌರಣಿಕ ನಾಟಕ ಪ್ರದರ್ಶನ: ಭಾನುವಾರ ಮದಾಹ್ನ 1 ಗಂಟೆಗೆ ಶ್ರೀ ರಾಮಾಂಜಿನೇಯ ಕೃಪಾಪೋಷಿತ ನಾಟಕ ಮಂಡಳಿಯಿಂದ ಸಂಪೂರ್ಣ ರಾಮಾಯಣ ನಾಟಕ ಪ್ರದರ್ಶನವಿದ್ದು, ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ಪೋಟೋ 2 : ನಿಜಗಲ್ ಸಿದ್ದರಬೆಟ್ಟ.