ಬಾಣಾವರ ತಾಲೂಕಿನ ಬಾಣಾವರದಲ್ಲಿರುವ ಐತಿಹಾಸಿಕ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಧಾರ್ಮಿಕ ವೈಭವದ ನಡುವೆ ಭಕ್ತಿ ಭಾವದಿಂದ ಆಚರಿಸಲಾಯಿತು. ಹಬ್ಬದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದಲೇ ಹನುಮ ಮಾಲಾಧಾರಿಗಳು ದೇವಾಲಯದಲ್ಲಿ ಮಾಲೆ ಧರಿಸಿ ಭಜನೆ ಮತ್ತು ವಿಶೇಷ ಪೂಜೆಗಳಲ್ಲಿ ತೊಡಗಿಕೊಂಡಿದ್ದರು. ಜಯಂತಿಯ ದಿನದಂದು ಬೆಳಗ್ಗೆ ದೇವಾಲಯದಲ್ಲಿ ಶೇಷಾದ್ರಿ ಭಟ್ ಮತ್ತು ಅವರ ಸಂಗಡಿಗರ ನೇತೃತ್ವದಲ್ಲಿ ವಿಶೇಷ ಶ್ರೀ ರಾಮ ತಾರಕ ಆಂಜನೇಯ ಹೋಮ ನೆರವೇರಿಸಲಾಯಿತು. ಹೋಮದ ನಂತರ ಭಕ್ತರಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದ್ದು, ನೂರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.

ಬಾಣಾವರ: ತಾಲೂಕಿನ ಬಾಣಾವರದಲ್ಲಿರುವ ಐತಿಹಾಸಿಕ ಆಂಜನೇಯಸ್ವಾಮಿ ದೇವಾಲಯದಲ್ಲಿ ಹನುಮ ಜಯಂತಿ ಧಾರ್ಮಿಕ ವೈಭವದ ನಡುವೆ ಭಕ್ತಿ ಭಾವದಿಂದ ಆಚರಿಸಲಾಯಿತು.

ಹಬ್ಬದ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದಲೇ ಹನುಮ ಮಾಲಾಧಾರಿಗಳು ದೇವಾಲಯದಲ್ಲಿ ಮಾಲೆ ಧರಿಸಿ ಭಜನೆ ಮತ್ತು ವಿಶೇಷ ಪೂಜೆಗಳಲ್ಲಿ ತೊಡಗಿಕೊಂಡಿದ್ದರು. ಜಯಂತಿಯ ದಿನದಂದು ಬೆಳಗ್ಗೆ ದೇವಾಲಯದಲ್ಲಿ ಶೇಷಾದ್ರಿ ಭಟ್ ಮತ್ತು ಅವರ ಸಂಗಡಿಗರ ನೇತೃತ್ವದಲ್ಲಿ ವಿಶೇಷ ಶ್ರೀ ರಾಮ ತಾರಕ ಆಂಜನೇಯ ಹೋಮ ನೆರವೇರಿಸಲಾಯಿತು. ಹೋಮದ ನಂತರ ಭಕ್ತರಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದ್ದು, ನೂರಾರು ಭಕ್ತರು ಪ್ರಸಾದವನ್ನು ಸ್ವೀಕರಿಸಿದರು.ಸಂಜೆ ವೇಳೆ ಶ್ರೀ ಆಂಜನೇಯಸ್ವಾಮಿಯನ್ನು ಸಿಂಗರಿಸಿದ ವಿಶೇಷ ರಥದಲ್ಲಿ ಕೂರಿಸಿ, ಗ್ರಾಮದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಭಜನೆ–ಕೀರ್ತನೆಗಳ ಮಧ್ಯೆ ನಡೆದ ಈ ಮೆರವಣಿಗೆ ಭಕ್ತರ ಮನಸೆಳೆಯಿತು.ಕಾರ್ಯಕ್ರಮದಲ್ಲಿ ಹನುಮಮಾಲಾಧಾರಿಗಳ ಸಂಘದ ಅಧ್ಯಕ್ಷ ಬಿ.ಎನ್. ರವಿ, ಉಪಾಧ್ಯಕ್ಷ ನಾಗೇಶ್, ಖಜಾಂಚಿ ಶ್ರೀನಿವಾಸ್, ಕಾರ್ಯದರ್ಶಿ ಬೀರಪ್ಪ, ದೇವಾಲಯದ ಅರ್ಚಕರಾದ ಶ್ರೀನಿವಾಸ್ ಮಾರುತಿ, ಬಿ.ಟಿ. ರಾಜು, ಬಸವರಾಜು, ಬಾಲಾಜಿ ಸೇರಿದಂತೆ ಅನೇಕ ಭಕ್ತರು ಭಾಗವಹಿಸಿ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.